ಶುಕ್ರವಾರ, ನವೆಂಬರ್ 22, 2019
19 °C

ಕನ್ನಡ ಧ್ವಜಾರೋಹಣ ಇಲ್ಲ

Published:
Updated:
Prajavani

ಬೆಳಗಾವಿ: ಇಲ್ಲಿನ ಸಿಪಿಇಡಿ ಮೈದಾನದಲ್ಲಿ ಜಿಲ್ಲಾಡಳಿತದಿಂದ ಶುಕ್ರವಾರ ಆಯೋಜಿಸಿದ್ದ ಕರ್ನಾಟಕ ರಾಜ್ಯೋತ್ಸವದಲ್ಲಿ ಕನ್ನಡ ಧ್ವಜಾರೋಹಣ ನೆರವೇರಲಿಲ್ಲ.

ರಾಷ್ಟ್ರ ಧ್ವಜಾರೋಹಣಕ್ಕಷ್ಟೇ ವ್ಯವಸ್ಥೆ ಮಾಡಲಾಗಿತ್ತು. ಜಿಲ್ಲಾ ಉಸ್ತವಾರಿ ಸಚಿವ ಜಗದೀಶ ಶೆಟ್ಟರ್‌ ಧ್ವಜಾರೋಹಣ ನೆರವೇರಿಸಿದರು. ಪಥಸಂಚಲನದ ನಂತರ, ವಿದ್ಯಾರ್ಥಿಗಳಿಂದ ಕನ್ನಡ ಗೀತೆಗಳಿಗೆ ನೃತ್ಯ ಕಾರ್ಯಕ್ರಮ ಆಯೋಜಿಸಲಾಗಿತ್ತು. ಆದರೆ, ಅದನ್ನು ಸಚಿವರಾದಿಯಾಗಿ ಯಾರೊಬ್ಬ ಜನಪ್ರತಿನಿಧಿಯಾಗಲೀ, ಅಧಿಕಾರಿಗಳಾಗಲೀ ವೀಕ್ಷಿಸಲಿಲ್ಲ. ಹೀಗಾಗಿ, ತರಾತುರಿಯಲ್ಲಿ ಕಾರ್ಯಕ್ರಮ ಮುಗಿಸಲಾಯಿತು.

ಈ ವರ್ಷವೂ, ಪೊಲೀಸ್ ಕವಾಯತಿನ ಆದೇಶಗಳನ್ನು ಕನ್ನಡದಲ್ಲೇ ನೀಡಿದ್ದು ಗಮನಸೆಳೆಯಿತು.

ಪ್ರತಿಕ್ರಿಯಿಸಿ (+)