ಸೋಮವಾರ, ನವೆಂಬರ್ 18, 2019
25 °C
ವಿರೋಧ ಪಕ್ಷದವರ ಆರೋಪ ಅಲ್ಲಗಳೆದ ಸಚಿವ

ಸರ್ಕಾರದ ಮೇಲೆ ದೇವರ ಅನುಗ್ರಹವಿದೆ, ಬಿಎಸ್‌ವೈ ಒಂಟಿ ಸಲಗ: ಸಚಿವ ಎಚ್‌.ನಾಗೇಶ್‌

Published:
Updated:
Prajavani

ಚಿಕ್ಕಬಳ್ಳಾಪುರ: ‘ರಾಜ್ಯ ಸರ್ಕಾರದ ಮೇಲೆ ದೇವರ ಅನುಗ್ರಹವಿದೆ. ಯಡಿಯೂರಪ್ಪನವರು ಮುಖ್ಯಮಂತ್ರಿಯಾದ ತಕ್ಷಣವೇ ಹೇಗೆ ಬಂತು ಮಳೆ? ಪ್ರಕೃತಿ ವಿಕೋಪದಿಂದ ಸ್ವಲ್ಪ ಪ್ರವಾಹ ಆಗಿರಬಹುದು. ಅದಕ್ಕಾಗಿ ಅವರು ಒಂಟಿಸಲಗದ ರೀತಿ ಒಬ್ಬರೇ ಓಡಾಡಿದರು. ಸರ್ಕಾರ ಸರಿಯಾದ ರೀತಿಯಲ್ಲಿ ನಡೆಯುತ್ತಿದೆ’ ಎಂದು ಅಬಕಾರಿ ಸಚಿವ ಎಚ್.ನಾಗೇಶ್ ಹೇಳಿದರು.

ತಾಲ್ಲೂಕಿನ ಮಂಡಿಕಲ್ಲು ಗ್ರಾಮದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನೆರೆ ಸಂತ್ರಸ್ತರಿಗೆ ಏನೂ ಕಡಿಮೆ ಮಾಡಿಲ್ಲ. ಅನುದಾನ ಬಿಡುಗಡೆಯಾಗಿದೆ. ಕೆಲಸ ಕಾರ್ಯಗಳು ನಡೆಯುತ್ತಿವೆ. ಪಕ್ಷಪಾತವಿಲ್ಲದೆ ಯಡಿಯೂರಪ್ಪನವರು ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ವಿರೋಧ ಪಕ್ಷದವರ ಆರೋಪ ಒಪ್ಪುವುದಿಲ್ಲ’ ಎಂದು ಹೇಳಿದರು.

‘ವಿರೋಧ ಪಕ್ಷದವರಿಗೆ ವಿರೋಧಿಸುವುದೇ ಕೆಲಸ. ಆದರೆ ನಾವು ಚೆನ್ನಾಗಿ ಕೆಲಸ ಮಾಡುತ್ತಿದ್ದೇವೆ. ವಿರೋಧ ಪಕ್ಷದವರು ದಿನಕ್ಕೊಂದು ಹೊಸದು ಹೇಳಬೇಕು ಹೇಳುತ್ತಾರೆ. ಅದನ್ನು ಗಂಭೀರವಾಗಿ ತೆಗೆದುಕೊಳ್ಳುವ ಅಗತ್ಯವಿಲ್ಲ’ ಎಂದು ತಿಳಿಸಿದರು.

ಪ್ರತಿಕ್ರಿಯಿಸಿ (+)