ಶುಕ್ರವಾರ, ಮಾರ್ಚ್ 5, 2021
18 °C

‘ನ್ಯೂಟ್ರಿ ಬ್ರೇಕ್‌ಫಾಸ್ಟ್‌’ ಪ್ರಯೋಗಕ್ಕೆ ಸಿಎಫ್‌ಟಿಆರ್‌ಐ ಸಜ್ಜು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಮೈಸೂರು: ಮೈಸೂರಿನ ಕೇಂದ್ರೀಯ ಆಹಾರ ತಂತ್ರಜ್ಞಾನ ಮತ್ತು ಸಂಶೋಧನಾ ಸಂಸ್ಥೆ (ಸಿಎಫ್‌ಟಿಆರ್‌ಐ) ಯು ಅಭಿವೃದ್ಧಿಪಡಿಸಿರುವ ‘ನ್ಯೂಟ್ರಿ ಬ್ರೇಕ್‌ಫಾಸ್ಟ್‌’ ಉತ್ಪನ್ನಗಳ ಪರೀಕ್ಷೆಗಾಗಿ ದೇಶದ ವಿವಿಧ ರಾಜ್ಯಗಳಲ್ಲಿನ ಶಾಲೆಗಳನ್ನು ಆಯ್ಕೆ ಮಾಡಿಕೊಂಡಿದೆ.

ಕೇಂದ್ರ ಸರ್ಕಾರವು ಜಾರಿಗೊಳಿಸಲಿರುವ ಮಧ್ಯಾಹ್ನದ ಬಿಸಿಯೂಟ ಯೋಜನೆಗೂ ಈ ಉತ್ಪನ್ನವನ್ನು ಬಳಸಿಕೊಳ್ಳುವ ಚಿಂತನೆ ಇದೆ. ಈ ನಿಟ್ಟಿನಲ್ಲಿ ಸಂಸ್ಥೆಯು ಕರ್ನಾಟಕ, ಮಹಾರಾಷ್ಟ್ರ, ಒಡಿಶಾ, ಹರಿಯಾಣ, ಮಣಿಪುರಗಳಲ್ಲಿನ ಶಾಲೆಗಳಲ್ಲಿ ಪರೀಕ್ಷೆ ನಡೆಸಲಿದೆ.

ಒಟ್ಟು 50 ಉತ್ಪನ್ನಗಳನ್ನು ಸಂಸ್ಥೆ ಸಿದ್ಧಪಡಿಸಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಪ್ರಯೋಗಕ್ಕಾಗಿ ಮೈಸೂರಿನ ಐದು ಸರ್ಕಾರಿ ಶಾಲೆಗಳನ್ನು ಆಯ್ಕೆ ಮಾಡಿಕೊಂಡಿದೆ. ಶೀಘ್ರವೇ ಈ ಶಾಲೆಗಳಲ್ಲಿ ಮಕ್ಕಳಿಗೆ ಈ ಉತ್ಪನ್ನಗಳನ್ನು ನೀಡಲಿದ್ದು, ಮಕ್ಕಳ ಪ್ರತಿಕ್ರಿಯೆ ಅವಲೋಕಿಸಿ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಲಿದೆ.

‘ಪ್ರಾದೇಶಿಕವಾಗಿ ವಿವಿಧ ರುಚಿಗಳುಳ್ಳ ಆಹಾರ ಉತ್ಪನ್ನಗಳನ್ನೂ ಸಿದ್ಧಪಡಿಸಿದೆ. ಆಯಾ ರಾಜ್ಯಗಳಲ್ಲಿ ನಡೆಯುವ ಈ ಪರೀಕ್ಷೆಯಲ್ಲಿ ಮಕ್ಕಳು ಇಷ್ಟಪಡುವ ತಿನಿಸುಗಳನ್ನು ಉತ್ಪಾದಿಸುವಂತೆ ಸರ್ಕಾರಕ್ಕೆ ವರದಿ ನೀಡುತ್ತೇವೆ’ ಎಂದು ಸಂಸ್ಥೆಯ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿದವು.

ಅಂತೆಯೇ, ಅಂಗನವಾಡಿ ಕೇಂದ್ರಗಳಿಗೆ ನೀಡಲೆಂದು ಸಂಸ್ಥೆಯು ಪ್ರೋಟೀನ್ ಆಹಾರ ಉತ್ಪನ್ನಗಳನ್ನು ಸಿದ್ಧಪಡಿಸಿತ್ತು. ಅವರನ್ನು ಮೈಸೂರಿನ ಅಂಗನವಾಡಿ ಕೇಂದ್ರಗಳಲ್ಲಿ ಪ್ರಯೋಗಿಸಿತ್ತು. ರೈಸ್ ಮಿಕ್ಸ್, ಹೈ ಪ್ರೋಟೀನ್‌ ರಸ್ಕ್‌, ಎನರ್ಜಿ ಫುಡ್, ನ್ಯೂಟ್ರಿ ಚಿಕ್ಕಿ, ನ್ಯೂಟ್ರಿ ಸ್ಪ್ರಿಂಕಲ್, ಎಳ್ಳಿನ ಪೇಸ್ಟ್, ಮಾವಿನ ಹಣ್ಣಿನ ಪೇಸ್ಟ್‌ಗಳನ್ನು ಮಕ್ಕಳಿಗೆ ನೀಡಿತ್ತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು