ಭಾನುವಾರ, ನವೆಂಬರ್ 17, 2019
24 °C

ಅ.23ರಂದು ಜನಿಸಿದವರ ಭವಿಷ್ಯ ಫಲ: ಸಹೋದರರಿಂದ ಆಸ್ತಿ ವಿಚಾರದಲ್ಲಿ ತಗಾದೆ?

Published:
Updated:

ಅಕ್ಟೋಬರ್‌ 23ರಂದು ಜನಿಸಿದವರ ಭವಿಷ್ಯ ಫಲಗಳ ವಿವರ ಇಲ್ಲಿದೆ.

ಅತ್ಯಂತ ಶುಭದಿನ. ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಸಾಧ್ಯತೆ ಇದ್ದರೂ ಕೊನೆಯ ಕ್ಷಣದಲ್ಲಿ ತಪ್ಪಿಹೋಗುವ ಸಾಧ್ಯತೆ. ವ್ಯವಹಾರ ಉದ್ಯೋಗಗಳು ಅಷ್ಟೊಂದು ಉತ್ತಮವಾಗಿ ಕಾಣುವ ಸಾಧ್ಯತೆ ಇಲ್ಲ. ಸಹೋದರರಿಂದ ಆಸ್ತಿ ವಿಚಾರದಲ್ಲಿ ತಗಾದೆ ತಲೆದೋರಬಹುದು. ಸಾಮಾಜಿಕ ಕಾರ್ಯಗಳಲ್ಲಿ ತೊಡಗಿದವರಿಗೆ ಉತ್ತಮ ಸ್ಥಾನ ಮಾನ. ವೈದ್ಯಕೀಯ ವೃತ್ತಿಯವರಿಗೆ ವಿಶೇಷ ಸಹಕಾರ ದೊರೆಯಲಿದೆ. ನ್ಯಾಯಾಲಯದಲ್ಲಿ ಬಾಕಿ ಸ್ಥಿರಾಸ್ತಿಗಳ ಸಂಬಂಧಿಸಿದ ವ್ಯಾಜ್ಯ ವ್ಯವಹಾರಗಳಿಗೆ ಶೀಘ್ರ ಪರಿಹಾರ.

ಅ.23ರ ದಿನ ಪಂಚಾಂಗ

ಶ್ರೀವಿಕಾರಿ ನಾಮ ಸಂವತ್ಸರ ದಕ್ಷಿಣಾಯನ ಶರದೃತು. ಆಶ್ವಯುಜ ಮಾಸ. ಕೃಷ್ಣ ಪಕ್ಷ. ಮಳೆ ನಕ್ಷತ್ರ ಚಿತ್ತಾ ದಶಮಿ ಗಂ. 36-39 (ರಾ. 8-58) ಬುಧವಾರ.

ನಿತ್ಯ ನಕ್ಷತ್ರ ಆಶ್ಲೇಷ ಗಂ. 14-33 (ಹ. 12-07) ಶುಭ ನಾಮ ಯೋಗ ಗಂ 21-35 ವಣಿಜ ಕರಣ ಗಂ. 9-19 ವಿಷ ಗಂ. 42-38 ಅಮೃತ ಗಂ. 10-17

ರಾಹುಕಾಲ: ಮ. 12-00 ರಿಂದ 1-30

ಗುಳಿಕ ಕಾಲ: ಬೆ. 10-30 ರಿಂದ 12-00

ಯಮಗಂಡ ಕಾಲ: ಬೆ. 7-30 ರಿಂದ 9-00

ಸೂರ್ಯೋದಯ: 6-14

ಸೂರ್ಯಾಸ್ತ: 5-55

ಅದೃಷ್ಟ ಸಂಖ್ಯೆ 4, 5.

* ಇಲ್ಲಿದೆ ನೋಡಿ: ಇಂದಿನ ನಿಮ್ಮ ರಾಶಿ ಭವಿಷ್ಯ

ಪ್ರತಿಕ್ರಿಯಿಸಿ (+)