ಗುರುವಾರ , ಜೂಲೈ 2, 2020
28 °C

ಮೋದಿಯವರನ್ನು ನಾನೇಕೆ ಇಷ್ಟೊಂದು ಪ್ರೀತಿಸುತ್ತೇನೆ? –ಗೋವಿಂದ ಕಾರಜೋಳ

ಗೋವಿಂದ ಕಾರಜೋಳ Updated:

ಅಕ್ಷರ ಗಾತ್ರ : | |

ಬೆಂಗಳೂರು: ನರೇಂದ್ರ ಮೋದಿ ಅವರು ಎರಡನೇ ಅವಧಿಗೆ ಪ್ರಧಾನಿಯಾಗಿ ಇಂದಿಗೆ( ಮೇ 30) ಒಂದು ವರ್ಷ ಪೂರೈಸಲಿರುವ ಸಂದರ್ಭದಲ್ಲಿ ಉಪಮುಖ್ಯಮಂತ್ರಿ ಗೋವಿಂದ ಎಂ. ಕಾರಜೋಳ ಅವರು ಪ್ರಧಾನಿಗೆ ಶುಭಾಶಯ ಕೋರಿ ಲೇಖನ ಬರೆದಿದ್ದಾರೆ.

ಪ್ರಧಾನಿ ಮೋದಿ ಅವರನ್ನು ನಾನೇಕೆ ಇಷ್ಟೊಂದು ಪ್ರೀತಿಸುತ್ತೇನೆ ? ಎಂಬ ಶಿರ್ಷಿಕೆಯ ಅಡಿಯಲ್ಲಿ ದೀರ್ಘವಾದ ಲೇಖನ ಬರೆದಿದ್ದಾರೆ. 

ಕಳೆದ 5 ದಶಕಗಳಿಂದ ರಾಜಕಾರಣದಲ್ಲಿ ಸಕ್ರಿಯನಾಗಿದ್ದು ಸಾಮಾನ್ಯ ಪ್ರಜೆಯಾಗಿಯೇ ಇದ್ದೇನೆ. ನಾನು ಎಲ್ಲೂ ನನ್ನ ವೈಯಕ್ತಿಕ ಭಾವನೆಗಳನ್ನು ಸಾರ್ವಜನಿಕ ವೇದಿಕೆಗಳ ಮೇಲೆ ಹಂಚಿಕೊಂಡಿಲ್ಲ ಹಾಗೇ ಲೇಖನ ಮತ್ತು ಪ್ರಬಂಧಗಳ ಬರೆದಿಲ್ಲ. ಪ್ರಧಾನಿ ಮೋದಿ ಅವರಲ್ಲಿನ ಮಹೋನ್ನತ ಗುಣಗಳು ಮತ್ತು ಸಾಧನೆಗಳನ್ನು ಕಂಡಾಗ  ಅವರ ಬಗ್ಗೆ ಬರೆಯುವ ಮನಸ್ಸಾಗಿದೆ. ನನ್ನ ರಾಜಕೀಯ ಮಾರ್ಗದರ್ಶಕರಾದ ರಾಮಕೃಷ್ಣ ಹೆಗಡೆ ಅವರನ್ನು ನೆನೆಯುತ್ತ ಈ ಲೇಖನ ಬರೆಯುತ್ತಿದ್ದೇನೆ.
 
ಜನನಾಯಕ ಎಂಬ ಪದವೊಂದಿದೆ ಅದು ಮೋದಿ ಅವರಿಗೆ ಸರಿಯಾಗಿ ಒಪ್ಪುತ್ತದೆ. ಅವರ ಸಾಧನೆಗಳು, ಗುರಿಗಳು, ಚಿಂತನೆಗಳು ದೇಶದ ಪ್ರಗತಿಗೆ ಪೂರಕವಾಗಿವೆ. ಆದ್ದರಿಂದಲೇ ಇಡೀ ಜಗತ್ತು ಮೋದಿಯವರನ್ನು ತುಂಬಾ ಪ್ರೀತಿಸುತ್ತದೆ.

ಮೋದಿಯವರ ಜನಪ್ರಿಯ ಯೋಜನೆಗಳಾದ ಜನಧನ, ಆಯುಷ್ಮಾನ್‌ ಭಾರತ, ಉಜ್ವಲ, ವಿದ್ಯುತ್ ವಿಸ್ತಾರ ಹಾಗೂ ಕಿಸಾನ್ ಸಮ್ಮಾನ್‌ ಯೋಜನೆಗಳು ಬಡವರ ಬದುಕಿಗೆ ಬೆಳಕಾಗಿವೆ. ಸಬಕಾ ಸಾತ್, ಸಬಕಾ ವಿಕಾಸ್‌, ಸಬಕಾ ವಿಶ್ವಾಸ್‌ ಸೂತ್ರದ ಮೂಲಕ ಪ್ರಧಾನಿ ಮೋದಿ ದೇಶದ ಅಭಿವೃದ್ದಿಗಾಗಿ ದುಡಿಯುತ್ತಿದ್ದಾರೆ. ಹಾಗೇ ಮಹಾತ್ಮ ಗಾಂಧಿಜೀ ಕಂಡ ಕನಸನ್ನು ಪ್ರಾಮಾಣಿಕವಾಗಿ ನನಸು ಮಾಡುವತ್ತ ಮೋದಿಯವರು ಶ್ರಮಿಸುತ್ತಿದ್ದಾರೆ.

ರಾಜ್ಯದ ಮುಖ್ಯಮಂತ್ರಿ ಯಡಿಯೂರಪ್ಪ ಕೂಡ ರೈತನ ಮಗನಾಗಿ ಸಾಮಾನ್ಯ ಕುಟುಂಬದಿಂದ ದೊಡ್ಡ ಮಟ್ಟಕ್ಕೆ ಬೆಳೆದವರು. ದೇಶವ್ಯಾಪಿ ಇಂತಹ ನಾಯಕರು ಮೋದಿಗೆ ಬೆನ್ನೆಲುಬಾಗಿ ನಿಂತಿದ್ದಾರೆ. ಇಂತಹ ಸಂದರ್ಭದಲ್ಲಿ ಆ ನಾಯಕರನ್ನು ನೆನೆಯಬೇಕು. 

ಮುಖ್ಯವಾಗಿ ಕೊರೊನಾ ವಿರುದ್ಧದ ಹೋರಾಟದಲ್ಲಿ ಪ್ರಧಾನಿ ಅವರ ನಡೆಯನ್ನು ವಿಶ್ವವೇ ಮೆಚ್ಚಿದೆ. ಕೋವಿಡ್ ನಿಯಂತ್ರಣಕ್ಕಾಗಿ ಮೋದಿ ಅವರು ಹಗಲು ಇರುಳು ಶ್ರಮಿಸುತ್ತಿರುವುದು ಅನುಕರಣೀಯವಾಗಿದೆ.

ಬಸವಣ್ಣನವರ ‘ನಾ ಮಾಡಿದೆನೆಂಬುದು ಮನದೊಳು ಸುಳಿದೊಡೆ‘ ಎಂಬ ವಚನವನ್ನು ಮೋದಿಯವರ ವ್ಯಕ್ತಿತ್ವಕ್ಕೆ ಅನ್ವಯ ಮಾಡಿ ಹೇಳಿದರೆ ಸತ್ಯ ಹೇಳಿದಂತೆ.

– ಉಪಮುಖ್ಯಮಂತ್ರಿ ಗೋವಿಂದ ಎಂ. ಕಾರಜೋಳ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು