ಗುರುವಾರ , ಏಪ್ರಿಲ್ 22, 2021
22 °C
ದಾಖಲೆಯಲ್ಲಷ್ಟೇ ಬಯಲು ಶೌಚಮುಕ್ತ

ಶಿವಮೊಗ್ಗ: ಬೈಪಾಸ್ ಶೌಚಾಲಯ!

ಚಂದ್ರಹಾಸ ಹಿರೇಮಳಲಿ Updated:

ಅಕ್ಷರ ಗಾತ್ರ : | |

Prajavani

‘ಭಾರತ ಬಯಲು ಶೌಚಮುಕ್ತ’ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಘೋಷಿಸಿದ್ದಾರೆ. ಆದರೆ, ರಾಜ್ಯದಲ್ಲಿ ಈಗಲೂ ನಸುಕಿನಲ್ಲೇ ಕೈಯಲ್ಲಿ ತಂಬಿಗೆ ಹಿಡಿದು ಮಹಿಳೆಯುರು, ಪುರುಷರು, ಮಕ್ಕಳು ಬಯಲ ಕಡೆಗೆ ಹೋಗುವುದು ಮಾಮೂಲಿ ದೃಶ್ಯ. ಸರ್ಕಾರದ ದಾಖಲೆಗಳಲ್ಲಿ ಮಾತ್ರ ಬಯಲು ಶೌಚಮುಕ್ತವಾಗಿದೆ. ಈ ಕುರಿತು ‘ಪ್ರಜಾವಾಣಿ’ ಇಲ್ಲಿ ಬೆಳಕು ಚೆಲ್ಲಿದೆ.

ಶಿವಮೊಗ್ಗ: ಸಹ್ಯಾದ್ರಿ ಕಾಲೇಜು ಬಳಿಯ ಬೈಪಾಸ್‌ ಮಗ್ಗುಲಲ್ಲಿ ಮೂರು ದಶಕಗಳಿಂದ ನೆಲೆ ನಿಂತಿರುವ 100ಕ್ಕೂ ಹೆಚ್ಚು ಸಿಂದೋಳಿ ಕುಟುಂಬಗಳು ಈಗಲೂ ಶೌಚಕ್ಕೆ ಬಯಲನ್ನೇ ಆಶ್ರಯಿಸಿವೆ.

ಅಲ್ಲಿರುವ ಸುಮಾರು 350 ಜನರಲ್ಲಿ 150 ಮಹಿಳೆಯರೇ ಇದ್ದಾರೆ. ಅವರೆಲ್ಲ ಬೆಳಿಗ್ಗೆ ಏಳುವುದು 4ಕ್ಕೆ. ಏಕೆಂದರೆ, ಬೆಳಗಾಗುವುದರ ಒಳಗೆ ನಿತ್ಯಕರ್ಮಗಳನ್ನು ಪೂರೈಸುವ ಅನಿವಾರ್ಯ. ಸೂರ್ಯೋದಯಕ್ಕೂ ಮುನ್ನ ಚೊಂಬು ಹಿಡಿದು ಬೈಪಾಸ್‌ ಮರೆಗಳನ್ನು ಹುಡುಕಿಕೊಂಡು ಹೋಗುತ್ತಾರೆ. 

* ಇದನ್ನೂ ಓದಿ: ಹುಬ್ಬಳ್ಳಿ: ಶೌಚಕ್ಕಾಗಿ ಕತ್ತಲಾಗುವ ತನಕ ಕಾಯುವ ದುಸ್ಥಿತಿ

ಇಲ್ಲಿನ ಎಲ್ಲರೂ ಕೂಲಿ ಕಾರ್ಮಿಕರು. ಕೂದಲು ಸಂಗ್ರಹಿಸಿ ಮಾರಾಟ ಮಾಡುವುದು, ಭಿಕ್ಷೆ ಬೇಡುವುದು, ಸ್ಟೌ ದುರಸ್ತಿ, ಗಾರೆ ಕೆಲಸ ಮಾಡುತ್ತಾರೆ. ಸರ್ಕಾರಿ ಜಾಗದಲ್ಲಿ ನೆಲೆ ನಿಂತಿರುವ ಅವರಿಗೆ ಕುಡಿಯುವ ನೀರು, ವೋಟರ್ ಐಡಿ, ರೇಷನ್ ಕಾರ್ಡ್ ಬಿಟ್ಟರೆ ಯಾವ ಸೌಲಭ್ಯವೂ ಸಿಕ್ಕಿಲ್ಲ. ಶೌಚ ಅವರನ್ನು ನಿತ್ಯವೂ ಕಾಡುವ ಹಿಂಸೆ.

‘ಆಶ್ರಯ ಮನೆಗಳಿಗೆ ಅರ್ಜಿ ಹಾಕಲು ₹ 80 ಸಾವಿರ ಕಟ್ಟುವ ಸಾಮರ್ಥ್ಯ ನಮಗ್ಯಾರಿಗೂ ಇಲ್ಲ. ಹಾಗಾಗಿ, ಅಲ್ಲೇ ನೆಲೆ ನಿಂತಿದ್ದೇವೆ. ಮೊದಲು ಈ ಜಾಗದ ಸುತ್ತಲೂ ಬಯಲೇ ಇತ್ತು. ಈಗ ಸುತ್ತಲೂ ಖಾಸಗಿ ಲೇಔಟ್‌ಗಳಾಗಿ ಮನೆ, ಮಹಲುಗಳು ತಲೆಎತ್ತಿವೆ. ಹತ್ತಿರದಲ್ಲಿ ಶೌಚಕ್ಕೆ ಹೋದರೆ ಜಗಳಕ್ಕೆ ಬರುತ್ತಾರೆ. ಹಲ್ಲೆ ನಡೆಸುತ್ತಾರೆ. ಹೀಗಾಗಿ ಕಿಲೊಮೀಟರ್‌ ಗಟ್ಟಲೆ ನಡೆದು ನಿತ್ಯಕರ್ಮ ಮುಗಿಸುವುದು ಅನಿವಾರ್ಯ’ ಎಂದು ಸುಂಕಪ್ಪ, ಸಿದ್ದು ಅವರು ಅಳಲು ತೋಡಿಕೊಂಡರು.

* ಇದನ್ನೂ ಓದಿ:  ‘ಸ್ಮಾರ್ಟ್‌ಸಿಟಿ’ ಹಣೆಪಟ್ಟಿಯ ತುಮಕೂರು | ಕೆರೆಯ ಅಂಗಳವೇ ಇಲ್ಲಿ ಶೌಚಾಲಯ

ಜಿಲ್ಲೆಯಲ್ಲಿ ಮನೆಗಳನ್ನು ಹೊಂದಿರುವ 2,78,075 ಕುಟುಂಬಗಳಿವೆ. 2.77,975 ಕುಟುಂಬಗಳಿಗೆ ಶೌಚಾಲಯ ಕಲ್ಪಿಸಲಾಗಿದೆ. ಶೇ 99ರಷ್ಟು ಸಾಧನೆ ಮಾಡಿದ್ದೇವೆ ಎಂದು ಅಧಿಕಾರಿಗಳು ಮಾಹಿತಿ ನೀಡುತ್ತಾರೆ. ಆದರೆ, ಗುಡಿಸಲು, ಶೆಡ್‌, ಜೋಪಡಿಗಳಲ್ಲಿ ವಾಸಿಸುವ ಜನರನ್ನು ಲೆಕ್ಕಕ್ಕೇ ತೆಗೆದುಕೊಂಡಿಲ್ಲ.

‘ಮನೆಗಳಿದ್ದವರಿಗೆ ಶೌಚಾಲಯ ಎಂಬ ನಿಯಮ ಸರಿಯಲ್ಲ. ಮನೆ ಇಲ್ಲದವರು ಮನುಷ್ಯರಲ್ಲವೇ? ಅವರಿಗೆ ಸಮುದಾಯ ಶೌಚಾಲಯ ನಿರ್ಮಿಸಿಕೊಡಬೇಕು. ಆಗ ಮಾತ್ರ ಬಯಲು ಮುತ್ತ ಶೌಚಾಲಯ ಪರಿಕಲ್ಪನೆಗೆ ಅರ್ಥ ಬರುತ್ತದೆ’ ಎನ್ನುತ್ತಾರೆ ವಕೀಲ ಶ್ರೀಪಾಲ್.

* ಇದನ್ನೂ ಓದಿ: ಚಿತ್ರದುರ್ಗ ಗ್ರಾಮೀಣ ಪ್ರದೇಶದಲ್ಲಿ ನೀರಿನ ಕೊರತೆ|ಶೌಚ ಹೊರಗೆ...ವಸ್ತುಗಳು ಒಳಗೆ..

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು