ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹ 35 ಲಕ್ಷ ಬಾಡಿಗೆ ಬಾಕಿ; ‘ಓಯೊ’ ವಿರುದ್ಧ ಎಫ್‌ಐಆರ್‌

Last Updated 5 ನವೆಂಬರ್ 2019, 19:21 IST
ಅಕ್ಷರ ಗಾತ್ರ

ಬೆಂಗಳೂರು: ‘ಮೊಬೈಲ್ ಆ್ಯಪ್‌ ಆಧಾರಿತ ಸೇವೆ ಒದಗಿಸುತ್ತಿರುವ ಓಯೊ ಕಂಪನಿ ₹ 35 ಲಕ್ಷ ಬಾಡಿಗೆ ಪಾವತಿಸದೆ ವಂಚಿಸಿದೆ’ ಎಂದು ಆರೋಪಿಸಿ ಹಲಸೂರು ಪೊಲೀಸ್‌ ಠಾಣೆಯಲ್ಲಿ ರಾಕ್ಸೆಲ್‌ ಹೋಟೆಲ್ ಮಾಲೀಕ ಬಿಟ್ಜ್‌ ಫರ್ನಾಂಡಿಸ್ ದೂರು ನೀಡಿದ್ದಾರೆ.

‘ಹೋಟೆಲ್ ಬುಕ್ಕಿಂಗ್ ಸಂಬಂಧ ಓಯೊ ಕಂಪನಿ ಜೊತೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಅದರನ್ವಯ ಕಂಪನಿಯವರು ಪ್ರತಿ ತಿಂಗಳು ₹ 7 ಲಕ್ಷ ಬಾಡಿಗೆ ಪಾವತಿಸಬೇಕು. ಆದರೆ, ಐದು ತಿಂಗಳಿನಿಂದ ಬಾಡಿಗೆ ಪಾವತಿಸಿಲ್ಲ’ ಎಂದು ಫರ್ನಾಂಡಿಸ್ ದೂರಿದ್ದಾರೆ.

ಹಲಸೂರು ಪೊಲೀಸರು, ‘ಫರ್ನಾಂಡಿಸ್ ನೀಡಿರುವ ದೂರು ಆಧರಿಸಿ ಓಯೊ ಕಂಪನಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ರಿತೇಶ್ ಅಗರ್‌ವಾಲ್ ಸೇರಿದಂತೆ ಏಳು ಮಂದಿ ವಿರುದ್ಧ ಎಫ್‌ಐಆರ್‌ ದಾಖಲಿಸಿಕೊಳ್ಳಲಾಗಿದೆ. ವಿಚಾರಣೆಗೆ ಬರುವಂತೆ ನೋಟಿಸ್‌ ನೀಡಲಾಗಿದೆ’ ಎಂದರು.

‘ದೂರುದಾರರ ದಾಖಲೆಗಳನ್ನು ಪರಿಶೀಲಿಸಲಾಗಿದೆ. ಇದೊಂದು ಸಿವಿಲ್ ವ್ಯಾಜ್ಯ. ಆರೋಪಿಗಳ ಹೇಳಿಕೆ ಪಡೆದು ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT