ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಡಳಿತ ಪಕ್ಷದ ಸದಸ್ಯರ ಧರಣಿ: ವಿಧಾನಪರಿಷತ್‌ನಲ್ಲಿ ಬಿಜೆಪಿ ಸಭಾತ್ಯಾಗ

Last Updated 11 ಫೆಬ್ರುವರಿ 2019, 10:47 IST
ಅಕ್ಷರ ಗಾತ್ರ

ಬೆಂಗಳೂರು: ಮುಂದೂಡಲ್ಪಟ್ಟಿದ್ದವಿಧಾನಪರಿಷತ್ ಕಲಾಪ ಮಧ್ಯಾಹ್ನ ಮತ್ತೆ ಆರಂಭವಾದಾಗಲೂ ಅಡಳಿತ ಪಕ್ಷದ ಸದಸ್ಯರು ಧರಣಿ ಮುಂದುವರಿಸಿದರು. ಈ ನಡವಳಿಕೆಯನ್ನು ಖಂಡಿಸಿ ವಿರೋಧ ಪಕ್ಷದವರು ಸಭಾತ್ಯಾಗ ಮಾಡಿದರು.

ವಿಧಾನ ಮಂಡಲದ ಉಭಯಸದನಗಳ ಗೌರವಕ್ಕೆ ತರುವ ಯತ್ನ ನಡೆದಿದೆ. ಸಭಾಧ್ಯಕ್ಷರ ಪೀಠದ ಬಗ್ಗೆಯೇ ಹಗುರವಾದ ಮಾತುಗಳನ್ನು ಒಪ್ಪಲು ಸಾಧ್ಯವಿಲ್ಲ. ಹಾಗಾಗಿ ಉಳಿದ ಎಲ್ಲವನ್ನು ಬದಿಗೊತ್ತಿ ಈ ಬಗ್ಗೆ ಚರ್ಚೆಗೆ ಅವಕಾಶ ನೀಡಬೇಕು ಎಂದು ಸಭಾನಾಯಕಿ ಜಯಮಾಲಾ ಒತ್ತಾಯಿಸಿದರು. ಆಡಳಿತ ಪಕ್ಷದ ಸದಸ್ಯರೇ ಧರಣಿ ನಡೆಸುವುದು ಸರಿ ಅಲ್ಲ. ಅವರು ದಯವಿಟ್ಟು ಆಸನಗಳಿಗೆ ಮರಳ ಬೇಕು ಎಂದುಮನವಿ ಮಾಡಿದರು. ಬಳಿಕ ಸದಸ್ಯರು ಧರಣಿ ಕೈಬಿಟ್ಟರು.

ಪ್ರಶ್ನೋತ್ತರದ ಬದಲು ವಿಧಾನಸಭಾಧ್ಯಕ್ಷರ ಪೀಠಕ್ಕೆ ಅಗೌರವ ತಂದ ವಿಚಾರ ಚರ್ಚಿಸಲು ಅವಕಾಶ ಕಲ್ಪಿಸಬೇಕು ಎಂದು ಸದಸ್ಯರು ಒತ್ತಾಯಿಸಿದರು.

'ಈ ಬಗ್ಗೆ ನೋಟಿಸ್ ನೀಡಿ. ನಂತರ ನೋಡೋಣ' ಎಂದು ಸಭಾಪತಿ ತಿಳಿಸಿದರು. ಬಳಿಕ ಸಭೆಯನ್ನು ಮಧ್ಯಾಹ್ನ 3 ಗಂಟೆಗೆ ಮುಂದೂಡಿದರು.

* ಇವನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT