ಮಸ್ಕಿ: ಗ್ರಾಮದ ಹಾಳಾದ ರಸ್ತೆ ಹಾಗೂ ಚರಂಡಿ ಬಗ್ಗೆ ಚುನಾಯಿತ ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ಗಮನ ಸೆಳೆಯಲು ತಮ್ಮ ಮದುವೆಯ ಪೋಟೊ ಶೂಟ್ ಅನ್ನು ಉದ್ಯಾನ, ಬೆಟ್ಟಗಳಲ್ಲಿ ಮಾಡಿಸದೆ ತಮ್ಮ ಗ್ರಾಮದ ಹಾಳಾದ ರಸ್ತೆ ಹಾಗೂ ಚರಂಡಿ ನೀರಿನ ಮೇಲೆ ಮಾಡಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ

ತಾಲೂಕಿನ ಹಂಚಿನಾಳ ಗ್ರಾಮದ ಶಶಿ ಹಿರೇಮಠ ಹಾಗೂ ವಿಜಯಲಕ್ಷ್ಮಿ ಇತ್ತೀಚೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಗ್ರಾಮದ ಹದೆಗೆಟ್ಟ ರಸ್ತೆ ಮೇಲೆ ಹರಿಯುತಿದ್ದ ಚರಂಡಿ ನೀರಿನ ಮಧ್ಯೆ ತಮ್ಮ ಮದುವೆಯ ಪೋಟೊ ಶೂಟ್ ಅನ್ನು ಮಾಡಿಸಿಕೊಂಡಿದ್ದಾರೆ.

ಹಂಚಿನಾಳ ಮುಖ್ಯ ರಸ್ತೆಯನ್ನು 2008ರಲ್ಲಿ ನಿರ್ಮಾಣ ಮಾಡಲಾಗಿದ್ದು, ಆದರೆ ಇತೀಚಿಗೆ ರಸ್ತೆ ಸಂಪೂರ್ಣ ಹದೆಗೆಟ್ಟು ಚರಂಡಿ ನೀರು ರಸ್ತೆ ಮೇಲೆ ಹರಿದು ರಸ್ತೆಯೇ ಚರಂಡಿಯಾಗಿ ಮಾರ್ಪಟ್ಟಿದೆ.

ಈ ಬಗ್ಗೆ ಜನ ಪ್ರತಿನಿಧಿಗಳ ಗಮನಕ್ಕೆ ತಂದರೂ ಏನೂ ಪ್ರಯೋಜನವಾಗಿಲ್ಲ. ಆದ್ದರಿಂದ ಈ ಬಗ್ಗೆ ಜನ ಪ್ರತಿನಿಧಿಗಳು ಅಧಿಕಾರಿಗಳ ಗಮನ ಸೆಳೆಯಲು ಹೊಸದಾಗಿ ಮದುವೆಯಾದ ನಾವು ಪೋಟೋ ಶೂಟ್ ಗಾಗಿ ಬೆಟ್ಟ, ಉದ್ಯಾನ, ದೇವಸ್ಥಾನಕ್ಕೆ ಹೋಗಲಿಲ್ಲ. ನಮ್ಮ ಗ್ರಾಮದ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಲು ನಾವು ಈ ಮಾರ್ಗವನ್ನು ಆಯ್ಕೆ ಮಾಡಿಕೊಂಡಿದ್ದೇವೆ ಎನ್ನುತಾರೆ ಶಶಿ ಹಿರೇಮಠ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.