ಶಿವಮೊಗ್ಗ ನಾಗರಾಜ್‌ ಚಿತ್ರಕ್ಕೆ ಅಂತರರಾಷ್ಟ್ರೀಯ ಗೌರವ

7

ಶಿವಮೊಗ್ಗ ನಾಗರಾಜ್‌ ಚಿತ್ರಕ್ಕೆ ಅಂತರರಾಷ್ಟ್ರೀಯ ಗೌರವ

Published:
Updated:

ಶಿವಮೊಗ್ಗ: ಪಶ್ಚಿಮ ಬಂಗಾಳದಲ್ಲಿ ಈಸ್ಟ್ ಮಿಡ್ನಾಪುರ ಫೊಟೊ ಗ್ರಾಫಿಕ್ ಅಸೋಸಿಯೇಶನ್ ಆಯೋಜಿಸಿದ್ದ  7ನೇ ಅಂತರರಾಷ್ಟ್ರೀಯ ಛಾಯಾಚಿತ್ರ ಸ್ಪರ್ಧೆಯಲ್ಲಿ ‘ಪ್ರಜಾವಾಣಿ’ ಪತ್ರಿಕೆಯ ಛಾಯಾಗ್ರಾಹಕ ಶಿವಮೊಗ್ಗ ನಾಗರಾಜ್‌ ಅವರ ಛಾಯಾಚಿತ್ರಗಳಿಗೆ ಎರಡು ವಿಭಾಗಗಳಲ್ಲಿ ಪ್ರಶಸ್ತಿ ಲಭಿಸಿವೆ.

ಪೋಟೊ ಜರ್ನಲಿಸಂ ವಿಭಾಗದಲ್ಲಿ ‘ಸರಂಡರ್‌’ ಶೀರ್ಷಿಕೆಯ ಚಿತ್ರ ‘ಛೇರ್ಮನ್ ಚಾಯ್ಸ್‌’ ಪ್ರಶಸ್ತಿಗೆ ಹಾಗೂ ಪೋಟೊ ಟ್ರಾವೆಲ್‌ ವಿಭಾಗದಲ್ಲಿ ‘ಸಿಂಚನ’ ಶೀರ್ಷಿಕೆಯ ಚಿತ್ರ ‘ಫೆಡರೇಷನ್ ಆಫ್ ಇಂಟರ್‌ನ್ಯಾಷನಲ್ ಆರ್ಟ್‌ ಫೋಟೊಗ್ರಫಿ ರಿಬ್ಬನ್’ ಎನ್ನುವ ಗೌರವಕ್ಕೆ ಪಾತ್ರವಾಗಿದೆ.

ಪ್ರಕೃತಿ ವಿಭಾಗದ ಸ್ಪರ್ಧೆಯಲ್ಲೂ ಇವರ ನಾಲ್ಕು ಚಿತ್ರಗಳು ಪ್ರದರ್ಶನಕ್ಕೆ ಆಯ್ಕೆಯಾಗಿವೆ. ಸ್ಪರ್ಧೆಯಲ್ಲಿ ಇಟಲಿ, ಇಂಗ್ಲೆಂಡ್‌, ಜರ್ಮನಿ, ಸಿಂಗಪುರ, ತೈವಾನ್, ಬ್ರೆಜಿಲ್‌, ಬೆಲ್ಜಿಯಂ, ಅಮೆರಿಕ ಸೇರಿದಂತೆ 46 ದೇಶಗಳ ಛಾಯಾಗ್ರಾಹಕರು ಸ್ಪರ್ಧಿಸಿದ್ದರು. 

ಜನವರಿಯಲ್ಲಿ ಈ ‌ಸ್ಪರ್ಧೆ ನಡೆದಿತ್ತು. ಸ್ಪರ್ಧೆಯಲ್ಲಿ ವಿಜೇತ ಹಾಗೂ ಆಯ್ಕೆಯಾದ ಛಾಯಾಚಿತ್ರಗಳ ಪ್ರದರ್ಶನ ಫೆ.25ರಿಂದ 28ವರೆಗೆ ನಡೆಯಲಿದೆ.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !