ಅಂಟುವಾಳ ಬೇಸಾಯ ಉತ್ತೇಜನಕ್ಕೆ ಯೋಜನೆ; ಮೈಸೂರು ಜಿಲ್ಲೆಯಲ್ಲಿ ರೇಷ್ಮೆ ಮಾರುಕಟ್ಟೆ

7

ಅಂಟುವಾಳ ಬೇಸಾಯ ಉತ್ತೇಜನಕ್ಕೆ ಯೋಜನೆ; ಮೈಸೂರು ಜಿಲ್ಲೆಯಲ್ಲಿ ರೇಷ್ಮೆ ಮಾರುಕಟ್ಟೆ

Published:
Updated:

ಬೆಂಗಳೂರು: ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಮಂಡಿಸುತ್ತಿರುವ ಬಜೆಟ್‌ನಲ್ಲಿ ಕೃಷಿ ಸೇರಿದಂತೆ ಇತರ ಕ್ಷೇತ್ರಗಳಿಗೆ ಒತ್ತು ನೀಡುತ್ತಿರುವುದಾಗಿ ಪ್ರಸ್ತಾಪಿಸಿ, ಅಂಟುವಾಳ ಬಳಸಿ ಸಾಬೂನು ತಯಾರಿಸಲು ಉತ್ಯೇಜನ ನೀಡಲು ಅಂಟುವಾಳ ಬೆಳೆ ಉತ್ತೇಜನ ಯೋಜನೆ ರೂಪಿಸಲಾಗಿದೆ ಎಂದು ಹೇಳಿದರು.

ಬಜೆಟ್‌ ಪ್ರಮುಖ ಅಂಶಗಳು
* ಕರ್ನಾಟಕ ರಾಜ್ಯ ರೈತ ಸಲಹಾ ಸಮಿತಿ ರಚನೆ. ಸಭೆ ನಡೆಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗುವುದು.

* ಬೇಸಾಯ ನೀ ಸಾಯ ಎಂಬ ಮಾತಿದೆ. ರೈತರ ಉತ್ಪನ್ನಗಳಿಗೆ ಬೆಲೆ ಇಲ್ಲದಿರುವುದು. ಮಳೆ ಕೊರತೆ ಇತ್ಯಾದಿ ಸಮಸ್ಯೆಯಿಂದ ರೈತರು ಕಂಗಾಲಾಗಿದ್ದಾರೆ. ಅವರ ಸಮಸ್ಯೆ ನಿವಾರಿಸಲು ಸಾಲಾ ಮನ್ನಾ ಕ್ರಮ.

* ಆಂಧ್ರದಲ್ಲಿ ಜಾರಿಯಾಗುತ್ತಿರುವ ಶೂನ್ಯ ಬಂಡವಾಳ ಮಾದರಿಯನ್ನು ರಾಜ್ಯದಲ್ಲಿ ಅನುಸರಿಸಲು ಕ್ರಮ

* ಅಂಟುವಾಳ ಮರ ಬೆಳೆಸಲು ಯೋಜನೆ. ಅಂಟುವಾಳ ಸಹಿತ ಸಾಬೂನು ತಯಾರಿಕೆಗೆ ಪ್ರೋತ್ಸಾಹಿಸಲು ಈ ಕ್ರಮ

* ಇಸ್ರೇಲ್‌ ಮಾದರಿ ನೀರವಾರಿ ಯೋಜನೆಗೆ ₹150 ಕೋಟಿ

* ತೆಂಗು ಬೆಳೆಗಾರರ ಹಿತ ರಕ್ಷಣೆಗೆ ₹190 ಕೋಟಿ

* ರೇಷ್ಮೆ: ಮೈಸೂರು ಜಿಲ್ಲೆಯಲ್ಲಿ ₹3 ಕೋಟಿ ವೆಚ್ಚದಲ್ಲಿ ರೇಷ್ಮೆ ಗೂಡು ಮಾರುಕಟ್ಟೆ ಸ್ಥಾಪನೆ. ಇದಕ್ಕೆ 2018–19ರ ಸಾಲಿನಲ್ಲಿ ಒಂದು ಕೋಟಿ ಒದಗಿಸಲಾಗುವುದು.

* ತಲಘಟ್ಟಪುರದಲ್ಲಿನ ರಾಜ್ಯ ರೇಷ್ಮೆ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ಪುನಶ್ಚೇತನಕ್ಕೆ ₹ 5 ಕೋಟಿ.

* ಸಾಂಪ್ರದಾಯಿ ರೇಷ್ಮೆ ಉತ್ಪನ್ನ ಜತೆ ಉಪ ಉತ್ಪನ್ನಗಳಾದ ಉಗುರು ಪಾಲೀಷ್‌, ಲಿಪ್‌ಸ್ಟಿಕ್‌ ಹಾಗೂ ರೇಷ್ಮೆ ಬಣ್ಣಗಳಿಗೆ ವಿಶ್ವ ಮಾರುಕಟ್ಟೆಯಲ್ಲಿ ಬೇಡಿಕೆ ಇದ್ದು, ಇದನ್ನು ಪ್ರೋತ್ಸಾಹಿಸಲು ₹2 ಕೋಟಿ ನೀಡಲಾಗುವುದು. 

* ಚನ್ನಪಟ್ಟಣದ ರೇಷ್ಮೆ ಕೈಗಾರಿಕಾ ನಿಗಮದ ಪುನಶ್ಚೇತನಕ್ಕೆ ₹5 ಕೋಟಿ.
 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !