ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೈಕ್ಷಣಿಕ ವರ್ಷ ಎರಡು ತಿಂಗಳು ವಿಳಂಬ ಸಾಧ್ಯತೆ

ಮೇ ಅಂತ್ಯಕ್ಕೆ ಕೊರೊನಾ ತಗ್ಗಿದರೂ ಆಗಸ್ಟ್‌ನಲ್ಲಷ್ಟೇ ಶಾಲೆ
Last Updated 10 ಏಪ್ರಿಲ್ 2020, 21:33 IST
ಅಕ್ಷರ ಗಾತ್ರ

ಬೆಂಗಳೂರು: ಕೊರೊನಾ ಸೋಂಕಿನಿಂದಾಗಿ 2020–21ನೇ ಸಾಲಿನ ಶೈಕ್ಷಣಿಕ ವರ್ಷ ಎರಡು ತಿಂಗಳಷ್ಟು ವಿಳಂಬವಾಗುವ ಸಾಧ್ಯತೆ ದಟ್ಟವಾಗಿದೆ.

ಮೇ ಅಂತ್ಯದ ವೇಳೆಗೆ ಕೊರೊನಾ ವೈರಸ್‌ ಹರಡುವಿಕೆ ಪ್ರಮಾಣ ಕಡಿಮೆಯಾಗಿ ಶಾಲೆಗಳನ್ನು ತೆರೆಯಬಹುದು ಎಂದು ಘೋಷಿಸಿ
ದರೂ, ಇದೀಗ ಮುಂದೂಡಲಾಗಿರುವ ಎಸ್ಸೆಸ್ಸೆಲ್ಸಿ ಮತ್ತು ಇತರ ಮಂಡಳಿಗಳ ಪರೀಕ್ಷೆಗಳನ್ನು ಜೂನ್‌ ತಿಂಗಳಲ್ಲಿ ನಡೆಸಬೇಕಾಗುತ್ತದೆ. ಪಠ್ಯಪುಸ್ತಕ, ಸಮವಸ್ತ್ರ ಪೂರೈಕೆ ಹಾಗೂ ಉಳಿದ ಸಿದ್ಧತೆ ಮುಗಿಯಲು ಜುಲೈ ತಿಂಗಳು ಪೂರ್ತಿ ವ್ಯರ್ಥವಾಗುತ್ತದೆ. ಹೀಗಾಗಿ ಆಗಸ್ಟ್‌ ತಿಂಗಳಲ್ಲಷ್ಟೇ ಶೈಕ್ಷಣಿಕ ವರ್ಷಆರಂಭವಾಗಬಹುದು ಎಂದು ಹೇಳಲಾಗುತ್ತಿದೆ.

‘ಈ ಅತಂತ್ರ ಪರಿಸ್ಥಿತಿಯಲ್ಲಿ ಶಾಲೆ ನಡೆಸುವುದು ಬಹಳ ಕಷ್ಟ, ಪೋಷಕರೂ ಅಷ್ಟೇ, ಸೋಂಕು ಪೂರ್ತಿ ನಿವಾರಣೆಯಾಗದ ಹೊರತು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ಹಿಂದೇಟು ಹಾಕುವುದು ನಿಶ್ಚಿತ. ಹೀಗಾಗಿ ಈ ವರ್ಷ ಆಗಸ್ಟ್‌ನಿಂದ ಶೈಕ್ಷಣಿಕ ವರ್ಷ ಆರಂಭವಾಗಲಿದೆ ಎಂಬುದನ್ನು ಸರ್ಕಾರ ಈಗಲೇ ಪ್ರಕಟಿಸಬೇಕು’ ಎಂದು ಖಾಸಗಿ ಶಾಲೆಗಳ ಆಡಳಿತ ಮಂಡಳಿಯವರು ಒತ್ತಾಯಿಸಿದ್ದಾರೆ.

‘ಜೂನ್‌ ಅಂತ್ಯಕ್ಕೆ ಎಲ್ಲವೂ ಕೊನೆಗೊಂಡರೂ ಜುಲೈನಲ್ಲಿ ಶಾಲೆ ಆರಂಭಿಸಲು ಸಾಧ್ಯವಿಲ್ಲ, ಏಕೆಂದರೆ ಪಠ್ಯಪುಸ್ತಕ,
ಸಮವಸ್ತ್ರ ಸಹಿತ ಅಗತ್ಯದ ಎಲ್ಲಾ ವ್ಯವಸ್ಥೆ ಮಾಡಿಳ್ಳಲು ಕನಿಷ್ಠ 1 ತಿಂಗಳು ಬೇಕಾಗುತ್ತದೆ’ ಎಂದು ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಆಡಳಿತ ಮಂಡಳಿಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಡಿ.ಶಶಿಕುಮಾರ್‌ ಹೇಳಿದರು.

‘ಚಿಕ್ಕ ಮಕ್ಕಳಂತೂ ಸೋಂಕಿಗೆ ಬೇಗ ತುತ್ತಾಗುವ ಅಪಾಯ ಇದೆ. ಹೀಗಾಗಿ ಜುಲೈ ಅಂತ್ಯದ ಬಳಿಕವೂ ಶಾಲೆ ಆರಂಭವಾಗುವುದು ಸಂಶಯ ಇದೆ.ಇದು ಸೆಪ್ಟೆಂಬರ್‌ವರೆಗೂ ಮುಂದುವರಿಯಬಹುದು’ ಎಂದು ಸಿಬಿಎಸ್‌ಇಗೆ ಒಳಪಟ್ಟ ಶಾಲೆಯೊಂದರ ಪ್ರಾಂಶುಪಾಲರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT