ಉಪನ್ಯಾಸಕರ ವರ್ಗಾವಣೆ ಮುಂದೂಡಿಕೆ

7

ಉಪನ್ಯಾಸಕರ ವರ್ಗಾವಣೆ ಮುಂದೂಡಿಕೆ

Published:
Updated:

ಬೆಂಗಳೂರು: ಪದವಿ ಪೂರ್ವ ಕಾಲೇಜುಗಳ ಶಿಕ್ಷಕರು ಹಾಗೂ ಶಿಕ್ಷಕರ ಕ್ಷೇತ್ರ ಪ್ರತಿನಿಧಿಸುವ ವಿಧಾನಪರಿಷತ್ತಿನ ಸದಸ್ಯರು ಸರ್ಕಾರದ ಮೇಲೆ ಒತ್ತಡ ಹೇರಿ ಕಡ್ಡಾಯ ವರ್ಗಾವಣೆ ಪ್ರಕ್ರಿಯೆಯನ್ನು ಮುಂದೂಡಿಸುವಲ್ಲಿ ಕೊನೆಗೂ ಯಶಸ್ವಿಯಾಗಿದ್ದಾರೆ.

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎನ್‌.ಮಹೇಶ್‌ ಅವರ ಅಧ್ಯಕ್ಷತೆಯಲ್ಲಿ ಶನಿವಾರ ನಡೆದ ಸಭೆಯಲ್ಲಿ, ವರ್ಗಾವಣೆ ಕೌನ್ಸೆಲಿಂಗ್‌ ಅನ್ನು ಮುಂದಿನ ಆದೇಶದವರೆಗೆ ಮುಂದೂಡಲು ತೀರ್ಮಾನಿಸಲಾಗಿದೆ.

ಇತ್ತೀಚೆಗಷ್ಟೇ ಉಪನ್ಯಾಸಕರ ಕಡ್ಡಾಯ ಹಾಗೂ ಕೋರಿಕೆ ವರ್ಗಾವಣೆ ಪ್ರಕ್ರಿಯೆಯ ಪರಿಷ್ಕೃತ ವೇಳಾಪಟ್ಟಿಯನ್ನು ಇಲಾಖೆ ಪ್ರಕಟಿಸಿತ್ತು. ಆ ಪ್ರಕಾರ ಕಡ್ಡಾಯ ವರ್ಗಾವಣೆಯ ಗಣಕೀಕೃತ ಕೌನ್ಸೆಲಿಂಗ್‌ ಜುಲೈ 4 ರಿಂದ 7ರವರೆಗೆ ನಡೆಯಬೇಕಿತ್ತು.

ಪಿಯು ನಿರ್ದೇಶಕಿ ಸಿ.ಶಿಖಾ, ‘ಕಡ್ಡಾಯ ವರ್ಗಾವಣೆ ಕೈಬಿಡಬೇಕು ಎಂದು ಕೆಲವು ಉಪನ್ಯಾಸಕರು ಮನವಿ ಮಾಡಿದ್ದಾರೆ. ಆದರೆ, ಹೊಸ ತಿದ್ದುಪಡಿ ಕಾಯ್ದೆಯಡಿ ಅದಕ್ಕೆ ಅವಕಾಶವಿಲ್ಲ’ ಎಂದು ‘ಪ್ರಜಾವಾಣಿ’ಗೆ ತಿಳಿಸಿದರು.

‘ಉಪನ್ಯಾಸಕರು ಸಲ್ಲಿಸಿರುವ ಮನವಿಯನ್ನು ಸಚಿವರು ಹಾಗೂ ಪ್ರಧಾನ ಕಾರ್ಯದರ್ಶಿಗಳ ಹಂತದಲ್ಲಿ ಪರಿಶೀಲಿಸಲು, ಮೂರ್ನಾಲ್ಕು ದಿನಗಳ ಸಮಯ ಕೇಳಿದ್ದರಿಂದ ಪ್ರಕ್ರಿಯೆ ಮುಂದೂಡಿದ್ದೇವೆ. ಇದು ಸ್ಥಗಿತಗೊಂಡಿಲ್ಲ’ ಎಂದರು.

2016ರ ಮೇನಲ್ಲಿ ವರ್ಗಾವಣೆ ಪ್ರಕ್ರಿಯೆ ನಡೆಸಲಾಗಿತ್ತು. ಆದರೆ ವರ್ಗಾವಣೆಯಾದವರನ್ನು ಬಿಡುಗಡೆ ಮಾಡಿದ್ದು 2017ರ ಜೂನ್‌ನಲ್ಲಿ. 2017ರಲ್ಲಿ ವರ್ಗಾವಣೆ ಅಧಿನಿಯಮ ತಿದ್ದುಪಡಿ ಪ್ರಕ್ರಿಯೆ ಆರಂಭವಾಗಿದ್ದರಿಂದ ವರ್ಗಾವಣೆ ನಡೆಯಲಿಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !