ಶುಕ್ರವಾರ, ಸೆಪ್ಟೆಂಬರ್ 17, 2021
29 °C

ಮೋದಿ ನೇಣಿಗೇರಲು ಸಿದ್ಧವಾದರೆರಸ್ತೆ ಸಿದ್ಧಪಡಿಸಿ ಕೊಡುತ್ತೇವೆ: ಪ್ರಿಯಾಂಕ್ ಖರ್ಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ‘ಪ್ರಧಾನಿ ನರೇಂದ್ರ ಮೋದಿ ನೇಣಿಗೇರಲು ಸಿದ್ಧವಾದರೆ ನಾವು ರಸ್ತೆ ಸಿದ್ಧಪಡಿಸಿ ಕೊಡುತ್ತೇವೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನೋಟು ರದ್ದತಿಯಿಂದ ಎದುರಾಗಿದ್ದ ತೊಂದರೆ 50 ದಿನಗಳಲ್ಲಿ ಸರಿಯಾಗದಿದ್ದರೆ ನಡು ರಸ್ತೆಯಲ್ಲಿ ನೇಣು ಹಾಕಿ ಅಂತ ಮೋದಿ ಹೇಳಿದ್ದರು. ಈಗಲೂ ಜನರ ಸಮಸ್ಯೆ ಹಾಗೆಯೇ ಇದೆ. ಆದ್ದರಿಂದ ನಾವು ರಸ್ತೆ ಮಾಡಿಕೊಡಲು ಸಿದ್ಧರಿದ್ದೇವೆ. ನೇಣಿಗೇರಲು ಮೋದಿ ಬರುತ್ತಾರ’ ಎಂದು ಪ್ರಶ್ನಿಸಿದರು.

‘ಸಂಸದ ಮಲ್ಲಿಕಾರ್ಜುನ ಖರ್ಗೆ ಕ್ಷಮೆಗೆ ಆಗ್ರಹಿಸುವ ಮುನ್ನ ಮೋದಿ ಸೇರಿ ಬಿಜೆಪಿ ನಾಯಕರು ಸೋನಿಯಾಗಾಂಧಿ, ರಾಹುಲ್ ಗಾಂಧಿ ಹಾಗೂ ರಾಜೀವ್ ಗಾಂಧಿ ಅವರ ಬಗ್ಗೆ ಕೀಳಾಗಿ ಮಾತನಾಡಿರುವುದಕ್ಕೆ ಕ್ಷಮೆ ಕೇಳಬೇಕು. ಖರ್ಗೆ ಅವರ ಮೇಲೆ ದೂರು ದಾಖಲಿಸುವುದಾದರೆ ದಯವಿಟ್ಟು ಮೊದಲು ದಾಖಲಿಸಿ’ ಎಂದು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು