ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಯು ಭೂಗೋಳ ವಿಜ್ಞಾನ ಪ್ರಶ್ನೆಪತ್ರಿಕೆಯಲ್ಲಿ ಯಡವಟ್ಟು

Last Updated 12 ಮಾರ್ಚ್ 2020, 20:52 IST
ಅಕ್ಷರ ಗಾತ್ರ

ರಾಮನಗರ: ಗುರುವಾರ ನಡೆದ ದ್ವಿತೀಯ ಪಿಯು ಭೂಗೋಳವಿಜ್ಞಾನ ಪರೀಕ್ಷೆ ಪ್ರಶ್ನೆ ಪತ್ರಿಕೆಯಲ್ಲಿ ಮೂರು ಪ್ರಶ್ನೆಗಳಲ್ಲಿ ಗೊಂದಲ ಉಂಟಾಗಿದ್ದು, ಕನ್ನಡ ಹಾಗೂ ಇಂಗ್ಲಿಷ್‌ ಮಾಧ್ಯಮದಲ್ಲಿ ಬೇರೆ ಬೇರೆಯಾಗಿ ಕೇಳಲಾಗಿದೆ.

ಪ್ರಶ್ನೆಪತ್ರಿಕೆ ಒಂದು ಅಂಕದ ಮೂರು ಪ್ರಶ್ನೆಗಳನ್ನು ಹೀಗೆ ತಪ್ಪಾಗಿ ಕೇಳಲಾಗಿದೆ. ಒಂದು ಅಂಕದ ಪ್ರಶ್ನೆಗಳ ಸರಣಿ ಮೊದಲ ಪ್ರಶ್ನೆಯನ್ನು ಇಂಗ್ಲಿಷ್‌ನಲ್ಲಿ ‘Who is the father of Geography?’ ಎಂದು ಕೇಳಲಾಗಿದ್ದರೆ, ಕನ್ನಡದಲ್ಲಿ ಅದನ್ನು ‘ಮಾನವ ಭೂಗೋಳಶಾಸ್ತ್ರದ ಪಿತಾಮಹ’ ಎಂದು ತಪ್ಪಾಗಿ ಕೇಳಲಾಗಿದೆ.

ಪ್ರಶ್ನೆಪತ್ರಿಕೆ ಎರಡನೇ ಪ್ರಶ್ನೆಯು ಇಂಗ್ಲಿಷ್‌ನಲ್ಲಿ ‘Define H.D.I’ ಎಂದಿದ್ದರೆ, ಕನ್ನಡದಲ್ಲಿ ಅದೇ ಪ್ರಶ್ನೆ ‘ಎಫ್‌.ಡಿ.ಐ. ವಿಸ್ತರಿಸಿ’ ಎಂದಿದೆ. ಈ ಸರಣಿಯ ಒಂಬತ್ತನೇ ಪ್ರಶ್ನೆಯು ಇಂಗ್ಲಿಷ್‌ನಲ್ಲಿ ‘Which city is called Jawa of India’ ಎಂದು ಇದ್ದು, ಕನ್ನಡದಲ್ಲಿ ಈ ಪ್ರಶ್ನೆಯು ‘ಭಾರತದ ಜಾವ ಆರಂಭಿಸಿದವರು ಯಾರು?’ ಎಂದಾಗಿದೆ.

ಇದರಿಂದಾಗಿ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಮೂರು ಪ್ರಶ್ನೆಗಳು ತಪ್ಪಾಗಿದ್ದು, ಮೂರು ಅಂಕಗಳು ಕೈತಪ್ಪುವ ಹಾಗಾಗಿದೆ. ಇದರಿಂದ ಸಾಕಷ್ಟು ಗೊಂದಲ ಉಂಟಾಗಿ ಸಮಯ ವ್ಯರ್ಥ ಆಗಿದ್ದಾಗಿ ವಿದ್ಯಾರ್ಥಿಗಳು ಅಳಲು ತೋಡಿಕೊಂಡರು. ‘ಪ್ರಶ್ನೆಪತ್ರಿಕೆ ಸಿದ್ಧಪಡಿಸುವಲ್ಲಿ ನಿರ್ಲಕ್ಷ್ಯ ತೋರಿದವರ ವಿರುದ್ಧ ಕ್ರಮ ಜರುಗಿಸಬೇಕು. ಎಲ್ಲ ವಿದ್ಯಾರ್ಥಿಗಳಿಗೆ 3 ಅಂಕ ನೀಡಬೇಕು’ ಎಂದು ವಿದ್ಯಾರ್ಥಿಗಳ ಪೋಷಕರು ಆಗ್ರಹಿಸಿದರು.

ರಾಮನಗರ ಡಿಡಿಪಿಯು ನರಸಿಂಹಮೂರ್ತಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯೆ ನೀಡಿ ‘ಪ್ರಶ್ನೆಪತ್ರಿಕೆಯಲ್ಲಿನ ಗೊಂದಲಗಳ ಕುರಿತು ಉಪನ್ಯಾಸಕರು ಗಮನಕ್ಕೆ ತಂದಿದ್ದಾರೆ. ಈ ಬಗ್ಗೆ ಪರೀಕ್ಷಾ ಮಂಡಳಿ ನಿರ್ಧಾರ ಕೈಗೊಳ್ಳುತ್ತದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT