ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುನೀತ್‌ ರಾಜ್‌ಕುಮಾರ್‌ ವಿಚಾರಣೆ

₹ 109 ಕೋಟಿ ಅಘೋಷಿತ ಆಸ್ತಿ ಪತ್ತೆ ಪ್ರಕರಣ
Last Updated 9 ಜನವರಿ 2019, 19:16 IST
ಅಕ್ಷರ ಗಾತ್ರ

ಬೆಂಗಳೂರು: ‘ಸ್ಯಾಂಡಲ್‌ವುಡ್‌’ ನಟರು ಮತ್ತು ನಿರ್ಮಾಪಕ ಬಳಿ ₹109 ಕೋಟಿ ಮೌಲ್ಯದ ಅಘೋಷಿತ ಆಸ್ತಿ ಪತ್ತೆಯಾದ ಪ್ರಕರಣದಲ್ಲಿ ಆದಾಯ ತೆರಿಗೆ (ಐ.ಟಿ) ಅಧಿಕಾರಿಗಳು ವಿಚಾರಣೆ ಮುಂದುವರಿಸಿದ್ದಾರೆ.

ಪವರ್‌ ಸ್ಟಾರ್‌‍ಪುನೀತ್‌ ರಾಜ್‌ಕುಮಾರ್‌ ಬುಧವಾರ ಕನಿಂಗ್‌ಹ್ಯಾಂ ರಸ್ತೆಯಲ್ಲಿರುವ ಐ.ಟಿ ಕಚೇರಿಗೆ ಆಗಮಿಸಿದ್ದರು. ಮಧ್ಯಾಹ್ನ ಮೂರು ಗಂಟೆ ಸುಮಾರಿಗೆ ಬಂದಿದ್ದ ಅವರು ಸುಮಾರು ಒಂದು ಗಂಟೆ ಅಲ್ಲಿದ್ದರು ಎಂದು ಮೂಲಗಳು ತಿಳಿಸಿವೆ.

ಐ.ಟಿ ಕಚೇರಿಯಿಂದ ಹೊರಬಂದ ಪುನೀತ್‌ ಅವರನ್ನು ಮಾಧ್ಯಮ ಪ್ರತಿನಿಧಿಗಳು ಎದುರುಗೊಂಡಾಗ ಯಾವುದೇ ಮಾಹಿತಿ ನೀಡಲು ನಿರಾಕರಿಸಿದರು. ‘ಇದು ನಮ್ಮ ಮತ್ತು ಅವರ ನಡುವಿನ ವಿಷಯ ನಿಮಗ್ಯಾಕೆ ಹೇಳಬೇಕು. ನಾನು ಮೊದಲೂ ಇದೇ ಮಾತು ಹೇಳಿದ್ದೇನೆ. ಈಗಲೂ ಹೇಳುತ್ತಿದ್ದೇನೆ’ ಎಂದರು.

ಕಳೆದ ವಾರ ಐ.ಟಿ ಅಧಿಕಾರಿಗಳ ತಂಡ ನಟರಾದ ಶಿವರಾಜ್‌ ಕುಮಾರ್‌, ಪುನೀತ್‌ ರಾಜ್‌ಕುಮಾರ್‌, ಯಶ್‌, ಸುದೀಪ್‌, ನಿರ್ಮಾಪಕರಾದ ರಾಕ್‌ಲೈನ್‌ ವೆಂಕಟೇಶ್‌, ಸಿ.ಆರ್. ಮನೋಹರ್‌, ವಿಜಯ್‌ ಕಿರಗಂದೂರು ಹಾಗೂ ಜಯಣ್ಣ ಅವರ ಮನೆಗಳ ಮೇಲೆ ದಾಳಿ ಮಾಡಿದ್ದರು. ಈ ಸಮಯದಲ್ಲಿ ಮಹತ್ವದ ದಾಖಲೆಗಳು, 25 ಕೆ.ಜಿಗೂ ಅಧಿಕ ಚಿನ್ನ ಮತ್ತು ₹ 2.8 ಕೋಟಿ ನಗದು ವಶಪಡಿಸಿಕೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT