ಬುಧವಾರ, ಜುಲೈ 28, 2021
27 °C

‘ಸಮುದಾಯಕ್ಕೆ ಅಪವಾದ ಮಾಡಿದವರಿಗೆ ಶಿಕ್ಷೆ ನೀಡಿ’: ಸಿಎಂಗೆ ದೇವೇಗೌಡರಿಂದ ಪತ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಕೊರೊನಾ ವಿರುದ್ಧದ ಹೋರಾಟದಲ್ಲಿ ಸಹಕರಿಸದ ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಮತ್ತು ದೆಹಲಿಯ ತಬ್ಲೀಗ್ ಜಮಾತ್ ಧಾರ್ಮಿಕ ಸಮಾವೇಶ ಘಟನೆಯನ್ನೇ ಇಟ್ಟುಕೊಂಡು ಇಡೀ ಅಲ್ಪಸಂಖ್ಯಾತ ಸಮುದಾಯವನ್ನೇ ಕೆಟ್ಟದಾಗಿ ಬಿಂಬಿಸುತ್ತಿರುವವರ ವಿರುದ್ಧವೂ ಕ್ರಮ ಕೈಗೊಳ್ಳಬೇಕು ಎಂದು ಜೆಡಿಎಸ್ ವರಿಷ್ಠ ಎಚ್‌.ಡಿ.ದೇವೇಗೌಡ ಒತ್ತಾಯಿಸಿದ್ದಾರೆ.

ಈ ಬಗ್ಗೆ ಸೋಮವಾರ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಸುದೀರ್ಘ ಪತ್ರ ಬರೆದಿರುವ ಅವರು, ಲಾಕ್‌ಡೌನ್‌ಗೆ ಪಕ್ಷದ ಬೆಂಬಲ ಇದೆ. ರೈತರ ಹೊಲಕ್ಕೇ ತೆರಳಿ ಬೆಳೆ ಖರೀದಿಸುವ ಕೇರಳದ ಮಾದರಿಯನ್ನು ರಾಜ್ಯ ಅನುಸರಿಸಬೇಕು ಎಂದು ಆಗ್ರಹಿಸಿದ್ದಾರೆ.

ಪ್ರಮುಖ ಸಲಹೆಗಳು:

* ಕಟ್ಟಡ ಕಾರ್ಮಿಕರ ಸಹಾಯಧನವನ್ನು ₹ 2 ಸಾವಿರದಿಂದ ₹ 5 ಸಾವಿರಕ್ಕೆ ಹೆಚ್ಚಿಸಿ

* ಗಾರ್ಮೆಂಟ್ಸ್‌, ಹೋಟೆಲ್‌, ಮಾಲ್ ಸಹಿತ ಇತರ ಅಸಂಘಟಿತ ಕಾರ್ಮಿಕರಿಗೆ ₹ 5 ಸಾವಿರ ಸಹಾಯಧನ ನೀಡಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು