ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಾಪುರ | ಕ್ವಾರಂಟೈನ್‌ ವೇಳೆ ಮೂರ್ತಿ ಕೆತ್ತನೆ

Last Updated 9 ಜೂನ್ 2020, 19:53 IST
ಅಕ್ಷರ ಗಾತ್ರ

ಲೋಕಾಪುರ:ಕ್ವಾರಂಟೈನ್‌ದಲ್ಲಿದ್ದ ಮಲ್ಲಪ್ಪ ನಿಂಗಪ್ಪ ಬಡಿಗೇರ ಎಂಬುವವರು ಕಲ್ಲಿನಲ್ಲಿ ಗಣೇಶ ಮೂರ್ತಿ ನಿರ್ಮಿಸಿ, ತಮ್ಮ ಸಮಯವನ್ನು ಸದುಪಯೋಗಪಡಿಸಿಕೊಂಡಿದ್ದಾರೆ.

ಮಲ್ಲಪ್ಪ ವೃತ್ತಿಯಲ್ಲಿ ಶಿಲ್ಪಿಯಾಗಿದ್ದು, ಈಚೆಗೆ ಮಹಾರಾಷ್ಟ್ರ ರಾಜ್ಯದ ಇಂಚಲಕರಂಜಿಯಲ್ಲಿ ಪತ್ನಿಯನ್ನು ಕರೆ ತರಲು ಹೋಗಿದ್ದರು. ಆದ್ದರಿಂದ ಪತ್ನಿ, ಇಬ್ಬರು ಮಕ್ಕಳು ಸಮೇತ ಸ್ಥಳೀಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ 14 ದಿನಗಳ ಕ್ವಾರಂಟೈನ್‌ಗೆ ಒಳಪಡಿಸಲಾಗಿತ್ತು.

ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗಂಗೂಬಾಯಿ ಮಾನಕರ ಬಳಿ ಮೂರ್ತಿ ಕೆತ್ತುವುದಾಗಿ ಮನವಿ ಮಾಡಿದ್ದರು. ಅಧಿಕಾರಿಗಳು ಅದಕ್ಕೆ ಬೇಕಾದ ಕಲ್ಲನ್ನು ಪೂರೈಸಿದರು. ಈ ಅವಧಿಯಲ್ಲಿ ಪೂರ್ಣಗೊಳಿಸಿರುವ ವಿಗ್ರಹವನ್ನು ₹10 ಸಾವಿರಕ್ಕೆ ಗ್ರಾಮ ಪಂಚಾಯಿತಿ ಖರೀದಿಸಿದೆ ಎಂದು ಪಿಡಿಒ ಸುಭಾಷ ಗೋಲಶೆಟ್ಟಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT