ಶುಕ್ರವಾರ, ಏಪ್ರಿಲ್ 23, 2021
22 °C

ರಾಯಚೂರು ಜಿಲ್ಲೆ ಕವಿತಾಳ ಬಳಿ ಚಿನ್ನಾಪುರ:ಗಾಳಿ,ಮಳೆಗೆ ಮರ ಬಿ‌ದ್ದು ವ್ಯಕ್ತಿ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕವಿತಾಳ (ರಾಯಚೂರು): ಶುಕ್ರವಾರ ರಾತ್ರಿಯಿಂದ ಶನಿವಾರ ಬೆಳಗಿನ ಜಾವದವರೆಗೂ ಜಿಲ್ಲೆಯ ವಿವಿಧೆಡೆ ಬಿರುಗಾಳಿ ಸಹಿತ ಮಳೆ ಬಿದ್ದಿದ್ದು, ಜಿಲ್ಲೆಯ ಕವಿತಾಳ ಸಮೀಪದ ಚಿನ್ನಾಪುರದಲ್ಲಿ ಮರದ ರೆಂಬೆ ಮುರಿದುಬಿದ್ದು ಹನುಮಂತಪ್ಪ ನಾಯಕ (60) ಮೃತಪಟ್ಟಿದ್ದಾರೆ.

ಬೇವಿನ ಮರದ ಕೆಳಗೆ ಕಟ್ಟೆಯ ಮೇಲೆ ಹನುಮಂತಪ್ಪ ಮಲಗಿದ್ದರು.

ವಿದ್ಯುತ್‌ ಸ್ಥಗಿತ: ದೇವದುರ್ಗ ತಾಲ್ಲೂಕಿನ ಜಾಲಹಳ್ಳಿ ಸುತ್ತಮುತ್ತ ಹಾಗೂ ರಾಯಚೂರಿನ ಎಲ್‌ಬಿಎಸ್‌ ನಗರದಲ್ಲಿ ಬಿರುಗಾಳಿಯಿಂದಾಗಿ ವಿದ್ಯುತ್‌ ಕಂಬಗಳು ಉರುಳು ಬಿದ್ದು, ಮುಖ್ಯ ವಿದ್ಯುತ್‌ ಸ್ಟೇಷನ್‌ಗಳಲ್ಲಿ ಹಾನಿ ಉಂಟಾಗಿದೆ. ದುರಸ್ತಿ ಕಾರ್ಯ ಕೈಗೊಳ್ಳಲಾಗಿದೆ. ಆದರೂ ಶನಿವಾರ ತಡೆರಾತ್ರಿವರೆಗೂ ವಿದ್ಯುತ್‌ ಸಂಪರ್ಕ ಇರಲಿಲ್ಲ. ಶುಕ್ರವಾರ ರಾತ್ರಿಯಿಂದಲೂ ವಿದ್ಯುತ್‌ ಸಂಪರ್ಕ ಕಡಿತವಾಗಿದ್ದರಿಂದ ಬೇಸಿಗೆ ಬಿಸಿಲಿನಿಂದ ಜನರು ಪರದಾಡುವ ಪರಿಸ್ಥಿತಿ ಉದ್ಭವವಾಗಿದೆ.

ಹಾವು ಕಚ್ಚಿ ಮಕ್ಕಳು ಸಾವು:

ಜಿಲ್ಲೆಯ ಮಸ್ಕಿ ಸಮೀಪದ ಚಿಕ್ಕಕಡಬೂರು ಗ್ರಾಮದಲ್ಲಿ ಪಾಲಕರೊಂದಿಗೆ ಮಲಗಿದ್ದ ಮಕ್ಕಳಿಬ್ಬರಿಗೆ ಹಾವು ಕಚ್ಚಿದ್ದರಿಂದ 4ನೇ ತರಗತಿ ಓದುತ್ತಿದ್ದ ಕಾವ್ಯ ಅಂಬಣ್ಣ ಹೂಸೂರು (9), 2ನೇ ತರಗತಿ ಓದುತ್ತಿದ್ದ ಮಲ್ಲಿಕಾರ್ಜುನ ಅಂಬಣ್ಣ ಹೂಸೂರು (7) ಮೃತಪಟ್ಟಿದ್ದಾರೆ.

ಇಬ್ಬರು ಮಕ್ಕಳನ್ನು ಕಳೆದುಕೊಂಡ ಪಾಲಕರ ಆಕ್ರಂದನ ಮನಕಲುಕಿತು. ಇಡೀ ಗ್ರಾಮದ ಜನರು ನಿಂತು ಸಂತೈಸುತ್ತಿದ್ದ ದೃಶ್ಯ ಕಂಡುಬಂತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು