ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಡಗಿನ ಹಲವೆಡೆ ದಿಢೀರ್‌ ಸುರಿದ ಮಳೆ

ಮುಕ್ತಾಯವಾಗದ ಕಾಫಿ ಕೊಯ್ಲು; ಬೆಳೆಗಾರರಲ್ಲಿ ಆತಂಕ
Last Updated 1 ಫೆಬ್ರುವರಿ 2020, 13:59 IST
ಅಕ್ಷರ ಗಾತ್ರ

ನಾಪೋಕ್ಲು (ಕೊಡಗು): ಹೋಬಳಿ ವ್ಯಾಪ್ತಿಯ ಕೆಲವು ಗ್ರಾಮಗಳಲ್ಲಿ ಶನಿವಾರ ಸಂಜೆ ದಿಢೀರ್‌ ಮಳೆಯಾಗಿದೆ. ಇದು ವರ್ಷದ ಮೊದಲ ಮಳೆಯೂ ಆಗಿದ್ದರೂ ಅವಧಿಗೂ ಮೊದಲೇ ಸುರಿದ ಮಳೆಯಿಂದ ಕಾಫಿ ಬೆಳೆಗಾರರು ಆತಂಕಪಡುವಂತಾಯಿತು.

ನಾಪೋಕ್ಲು ಪಟ್ಟಣ, ಬೇತು, ಪಾಲೂರು ಸೇರಿದಂತೆ ಕೆಲವು ಗ್ರಾಮಗಳಲ್ಲಿ ಮಳೆಯಾಗಿದೆ. ಹೋಬಳಿ ವ್ಯಾಪ್ತಿಯ ಕಾಫಿ ತೋಟಗಳಲ್ಲಿ ಕಾಫಿ ಕೊಯ್ಲಿನ ಕೆಲಸ ಬಿರುಸಿನಿಂದ ಸಾಗುತ್ತಿದ್ದು ಮನೆಯಂಗಳ, ಕಣ ಹಾಗೂ ಗದ್ದೆಗಳಲ್ಲಿ ಬೆಳೆಗಾರರು ಕಾಫಿಯನ್ನು ಒಣಗಲು ಹಾಕಿದ್ದು ಮಳೆಯಿಂದ ತೊಂದರೆ ಅನುಭವಿಸುವಂತೆ ಆಯಿತು. ಮಧ್ಯಾಹ್ನ 3ರ ವೇಳೆಗೆ ಮೋಡ ದಟ್ಟೈಸಿದ್ದು ನಾಲ್ಕುಗಂಟೆ ಸುಮಾರಿಗೆ ಮಳೆಯಾಯಿತು.

ಸಾಮಾನ್ಯವಾಗಿ ಮಾರ್ಚ್‌ನಲ್ಲಿ ಕಾಫಿ ಹೂವಿನ ಮಳೆಯ ನಿರೀಕ್ಷೆಯಲ್ಲಿರುವ ಬೆಳೆಗಾರರಿಗೆ ಅವಧಿಗೂ ಮುನ್ನ ಸುರಿಯುವ ಮಳೆ ಆತಂಕ ತಂದೊಡ್ಡಿದೆ. ಇದೀಗ ಕಾಫಿ ಕೊಯ್ಲು ಪೂರ್ಣಗೊಂಡಿಲ್ಲ. ಜೊತೆಗೆ ಕಾಫಿಯ ಮೊಗ್ಗುಗಳು ಅರಳಿ ಇಳುವರಿ ಮೇಲೆ ಪರಿಣಾಮ ಬೀರುತ್ತದೆ ಎಂದು ಕಾಫಿ ಮಂಡಳಿ ಮಾಜಿ ಉಪಾಧ್ಯಕ್ಷ ಡಾ.ಸಣ್ಣುವಂಡ ಕಾವೇರಪ್ಪ ಆತಂಕ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT