ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಪ್ಪಿನಂಗಡಿ, ಪುತ್ತೂರಿನಲ್ಲಿ ಮಳೆ

Last Updated 27 ಫೆಬ್ರುವರಿ 2020, 19:47 IST
ಅಕ್ಷರ ಗಾತ್ರ

ಪುತ್ತೂರು: ತಾಲ್ಲೂಕಿನಾದ್ಯಂತ ಗುರುವಾರ ನಸುಕಿನ ವೇಳೆ ಅಕಾಲಿಕ ಮಳೆ ಸುರಿಯಿತು. ಬಿಸಿಲಿನ ಝಳಕ್ಕೆ ಬಳಲುತ್ತಿರುವ ಜನತೆಗೆ ಮಳೆ ಸ್ವಲ್ಪ ಹೊತ್ತು ತಂಪು ನೀಡಿತು. ಅರ್ಧಗಂಟೆ ಸುರಿದ ಮಳೆಯಿಂದ ಗ್ರಾಮೀಣ ಭಾಗದ ರೈತರು ಮಾತ್ರ ಆತಂಕ ಪಡುವಂತಾಯಿತು.

ಗುರುವಾರ 3.30ರ ವೇಳೆಗೆ ಮಂಜಿನ ಹನಿಗಳಂತೆ ಮಳೆ ಬೀಳಲಾರಂಭಿಸಿತು. 5.30ಕ್ಕೆ ಭಾರಿ ಮಳೆ ಸುರಿಯಿತು. ಉಪ್ಪಿನಂಗಡಿಯಲ್ಲೂ ಅರ್ಧಗಂಟೆ ಕಾಲ ಬಿರುಸಿನ ಮಳೆಯಾಗಿದೆ.

ಕೊಡಗಿನಲ್ಲಿ ತುಂತುರು ಮಳೆ(ಮಡಿಕೇರಿ ವರದಿ): ಕೊಡಗು ಜಿಲ್ಲೆಯ ವಿವಿಧೆಡೆ ಗುರುವಾರ ಸಂಜೆ ತುಂತುರು ಮಳೆಯಾಗಿದೆ. ಕಕ್ಕಬ್ಬೆ ವ್ಯಾಪ್ತಿಯ ಮರಂದೋಡು, ಪೊದ್ದುಮಾನಿ, ಕೋಕೇರಿ ಸುತ್ತಮುತ್ತ ಮಳೆ ಸುರಿದಿದೆ. ಈ ಸಮಯದಲ್ಲಿ ಬಿರುಸಿನ ಮಳೆಯಾದರೆ ಮಾತ್ರ ಕಾಫಿ ಬೆಳೆಗೆ ಅನುಕೂಲ. ಸಾಧಾರಣ ಮಳೆ ಸುರಿದು ಹೋದರೆ ಮುಂದಿನ ವರ್ಷದ ಕಾಫಿ ಫಸಲಿನ ಮೇಲೆ ಪರಿಣಾಮ ಬೀರಲಿದೆ ಎಂದು ರೈತರು ಆತಂಕ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT