ಗುರುವಾರ , ಫೆಬ್ರವರಿ 20, 2020
22 °C
ಬಿಜೆಪಿ, ಆರ್‌ಎಸ್‌ಎಸ್‌ ವಿರುದ್ಧ ಹರಿಹಾಯ್ದ ಡಾ.ಬಿ.ಎಲ್. ವೇಣು

ಬಾಯಲ್ಲಿ ಶ್ರೀರಾಮ, ಮನದಲ್ಲಿ ನಾಥೂರಾಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ‘ಬಿಜೆಪಿ, ಆರ್‌ಎಸ್‌ಎಸ್‌ನವರು ಮಾತನಾಡಿದರೆ ಬಾಯಲ್ಲಿ ಜಪಿಸುವುದೇ ಶ್ರೀರಾಮ. ಆದರೆ, ಮನದಲ್ಲಿ ಇರುವುದೆಲ್ಲವೂ ನಾಥೂರಾಮನೇ ಹೊರತು ಬೇರೆ ಯಾರು ಅಲ್ಲ’ ಎಂದು ಕಾದಂಬರಿಕಾರ ಡಾ.ಬಿ.ಎಲ್. ವೇಣು ಸಂಘ ಪರಿವಾರದ ವಿರುದ್ಧ ಹರಿಹಾಯ್ದರು.

ಇಲ್ಲಿ ಶನಿವಾರ ಸಿಎಎ, ಎನ್‌ಆರ್‌ಸಿ, ಎನ್‌ಪಿಆರ್‌ ವಿರೋಧಿಸಿ ನಡೆದ ಜನಜಾಗೃತಿ ಅಭಿಯಾನದಲ್ಲಿ ಮಾತನಾಡಿದ ಅವರು, ‘ಮುಸ್ಲಿಂ ಧರ್ಮೀಯರನ್ನು ದ್ವೇಷಿಸುವುದೇ ಬಿಜೆಪಿಯವರಿಗೆ ರಾಷ್ಟ್ರೀಯತೆ ಆಗಿದೆ. ಧರ್ಮ ಧರ್ಮಗಳ ನಡುವೆ ದ್ವೇಷದ ಬೀಜ ಬಿತ್ತಿ ತಮ್ಮ ರಾಜಕಾರಣದ ಬೇಳೆ ಬೇಯಿಸಿಕೊಳ್ಳಲು ಮುಂದಾಗಿದ್ದಾರೆ. ದೇಶದಲ್ಲಿ ಕೋಮುಗಲಭೆ ಸೃಷ್ಟಿಗೆ ಪುಷ್ಠಿ ನೀಡುತ್ತಿದ್ದಾರೆ’ ಎಂದು ದೂರಿದರು.

‘ಪ್ರಸ್ತುತ ಬಿಜೆಪಿಯಿಂದ ಆಗುತ್ತಿರುವುದೆಲ್ಲವೂ ಧರ್ಮಾದ್ಧಾರಿತ ತಾರತಮ್ಯ. ಧರ್ಮವನ್ನೇ ಬಂಡವಾಳ ಮಾಡಿಕೊಂಡಿರುವ ಇವರೆಲ್ಲರೂ ಹಿಂದೂ ರಾಷ್ಟ್ರ ನಿರ್ಮಾಣಕ್ಕೆ ಸಿದ್ಧತೆ ನಡೆಸುತ್ತಿದ್ದಾರೆ. ಭಾರತ ಹಿಂದೂ ರಾಷ್ಟ್ರವಾದರೆ ಅನಾಹುತ ತಪ್ಪಿದ್ದಲ್ಲ. ಈ ಕುರಿತು ಯುವಸಮೂಹ ಜಾಗೃತರಾಗಬೇಕು’ ಎಂದು ಎಚ್ಚರಿಸಿದರು.

‘ಬಿಜೆಪಿಯಿಂದ ರಾಮಮಂದಿರವೂ ನಿರ್ಮಾಣವಾಗಲಿದೆ. ಭಾರತ ಮಾತೆಯ ಮಂದಿರವೂ ಆಗಲಿದೆ. ಕೊನೆಗೆ ಸರ್ಕಾರಿ ಸಂಸ್ಥೆಗಳೆಲ್ಲವನ್ನೂ ಖಾಸಗೀಕರಣ ಮಾಡಿ ದೇಶವನ್ನು ಮಾರಾಟ ಮಾಡಿದರೂ ಅಚ್ಚರಿ ಪಡಬೇಕಿಲ್ಲ’ ಎಂದು ಆಕ್ರೋಶ ಹೊರಹಾಕಿದರು.

‘ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಜಾರಿಗೊಳಿಸಿದ ಈ ಮೂರು ನೀತಿಗಳಿಂದ ಮುಸ್ಲಿಂ ಧರ್ಮೀಯರಿಗೆ ಮಾತ್ರವಲ್ಲ, ಪ್ರತಿಯೊಬ್ಬರಿಗೂ ತೊಂದರೆ ಉಂಟಾಗಲಿದೆ. ಆದರೆ, ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಜನವಿರೋಧಿ ನೀತಿ ಜಾರಿಗೊಳಿಸುವ ಸರ್ಕಾರದ ವಿರುದ್ಧ ಮಾತನಾಡಿದರೂ ಜೈಲಿಗೆ ಕಳಿಸುವಂಥ ದುರಾವಸ್ಥೆ ಎದುರಾಗುತ್ತಿರುವುದು’ ನೋವಿನ ಸಂಗತಿ ಎಂದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು