ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀವು ನಿದ್ರೆ ಮಾಡ್ತೀರೋ ಇಲ್ವೋ; ಅಭಿನಂದನ್ ಅವರನ್ನು ಕರೆತನ್ನಿ: ನಟಿ ರಮ್ಯಾ

ಕೇಂದ್ರ ಸರ್ಕಾರದ ವಿರುದ್ದ ಸರಣಿ ಟ್ವೀಟ್‌ ಮಾಡಿದ ಮಾಜಿ ಸಂಸದೆ
Last Updated 28 ಫೆಬ್ರುವರಿ 2019, 7:15 IST
ಅಕ್ಷರ ಗಾತ್ರ

‘ನೀವು ನಿದ್ರಿಸಿದ್ದೀರೋ ಇಲ್ಲವೋ ಅಥವಾ ನೀವು ಊಟ ಮಾಡಿದ್ದೀರೋ ಇಲ್ಲವೋ ಎಂಬುದನ್ನು ತಿಳಿದುಕೊಳ್ಳುವ ಬಯಕೆ ನಮಗಿಲ್ಲ. ನೀವು ನಮ್ಮ ವಿಂಗ್‌ ಕಮಾಂಡರ್‌ ಅನ್ನು ಸುರಕ್ಷಿತವಾಗಿಯಾವಾಗ ಕರೆತರುತ್ತೀರಿ ಎಂಬುದನ್ನು ತಿಳಿಯಲು ಇಚ್ಛಿಸುತ್ತಿದ್ದೇವೆ’

ಇದು ಮಾಜಿ ಸಂಸದೆ ಹಾಗೂ ನಟಿ ದಿವ್ಯ ಸ್ಪಂದನ(ರಮ್ಯ) ಪ್ರಕಟಿಸಿರುವ ಟ್ವೀಟ್‌.

ಪಾಕಿಸ್ತಾನ ವಶದಲ್ಲಿರುವ ವಿಂಗ್‌ ಕಮಾಂಡರ್‌ ಅಭಿನಂದನ್‌ ಅವರನ್ನು ವಾಪಸ್‌ ಕರೆತರುವಂತೆ ದೇಶದಾದ್ಯಂತ ಅಭಿಯಾನಗಳು ಆರಂಭವಾಗಿರುವ ಬೆನ್ನಲ್ಲೇ, ನಟಿ ರಮ್ಯ ಅವರು ಕೇಂದ್ರ ಸರ್ಕಾರ ಹಾಗು ಬಿಜೆಪಿ ವಿರುದ್ಧಸರಣಿ ಟ್ವೀಟ್‌ಗಳನ್ನು ಮಾಡಿದ್ದಾರೆ.

‘ಪ್ರಧಾನಮಂತ್ರಿಯವರು ತಮ್ಮ ಆಡಳಿತ ಸಮರ್ಥತೆಯ ಬಗ್ಗೆ ವಿಶ್ವದ ಮುಂದೆಹೇಳಿಕೊಳ್ಳುತ್ತಾರೆ. ಆದರೆ, ನಿನ್ನೆ ನಾಪತ್ತೆಯಾಗಿರುವ ಸೈನಿಕನ ಬಗ್ಗೆ ಒಂದೇಒಂದು ಮಾತನ್ನೂ ಹೇಳಿಲ್ಲ. ದಾಳಿಯ ಸಂಪೂರ್ಣ ಶ್ರೇಯವನ್ನೂ ಅವರು ಪಡೆದಿದ್ದಾರೆ. ಆದರೆ ನಮಗಾಗಿ ಪ್ರಾಣ ತೆತ್ತವರಿಗಾಗಿ ಪಶ್ಚಾತ್ತಾಪವನ್ನು ಅಥವಾ ಸಂವೇದನೆಯನ್ನು ತೋರುವುದಿಲ್ಲ’ಎಂದು ನರೇಂದ್ರ ಮೋದಿ ಅವರ ವಿರುದ್ಧ ಆರೋಪ ಮಾಡಿದ್ದಾರೆ.

‘ನಮ್ಮ ವಿಂಗ್‌ ಕಮಾಂಡರ್ ನಿನ್ನೆಯಿಂದ ನಾಪತ್ತೆಯಾಗಿದ್ದಾರೆ. ಹೀಗಿದ್ದಾಗಲೂಅವರು(ಬಿಜೆಪಿ) ಮತಗಟ್ಟೆ ಬಗ್ಗೆ ಮಾತನಾಡುತ್ತಿದ್ದಾರೆ. ಯುದ್ಧದ ಕಾರಣದಿಂದಲೇ ನಾವು ಚುನಾವಣೆಯಲ್ಲಿ ಗೆಲುವು ಸಾಧಿಸುತ್ತೇವೆ ಎಂದು ಯಡಿಯೂರಪ್ಪ ಹೇಳಿಕೊಳ್ಳುತ್ತಾರೆ. ಈ ಅಸಹ್ಯವನ್ನು ವಿವರಿಸಲು ಪದಗಳಿಲ್ಲ. ದೇಶದ ಜನರು ಇದನ್ನು ಮರೆಯುವುದಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಮ್ಯಾ ಟ್ವೀಟ್‌ಗಳಿಗೆಸಾಕಷ್ಟು ಪ್ರತಿಕ್ರಿಯೆಗಳು ವ್ಯಕ್ತವಾಗಿದ್ದು,ಪರ ವಿರೋಧದ ಚರ್ಚೆಗಳು ನಡೆಯುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT