ಆರ್‌ಸಿಯು, ವಿಟಿಯು; ಪರೀಕ್ಷೆ ಮುಂದೂಡಿಕೆ

7

ಆರ್‌ಸಿಯು, ವಿಟಿಯು; ಪರೀಕ್ಷೆ ಮುಂದೂಡಿಕೆ

Published:
Updated:

ಬೆಳಗಾವಿ: ದೇಶದಾದ್ಯಂತ ಮುಷ್ಕರ ನಡೆಸಲು ವಿವಿಧ ಕಾರ್ಮಿಕ ಸಂಘಟನೆಗಳು ಕರೆ ನೀಡಿರುವ ಹಿನ್ನೆಲೆಯಲ್ಲಿ ಜ.8 ಹಾಗೂ 9ರಂದು ಆಯೋಜಿಸಲಾಗಿದ್ದ ಪರೀಕ್ಷೆಗಳನ್ನು ರಾಣಿ ಚನ್ನಮ್ಮ ವಿಶ್ವವಿದ್ಯಾಲಯ (ಆರ್‌ಸಿಯು) ಹಾಗೂ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು) ಮುಂದೂಡಿವೆ.

ಅಂದು ನಡೆಯಬೇಕಾಗಿದ್ದ ಪರೀಕ್ಷೆಗಳನ್ನು ಜ.24, ಜ.25ರಂದು ನಡೆಸಲಾಗುವುದು ಎಂದು ಆರ್‌ಸಿಯು ಕುಲಸಚಿವ (ಮೌಲ್ಯಮಾಪನ) ರಂಗರಾಜ ವನದುರ್ಗ ತಿಳಿಸಿದ್ದಾರೆ. ಮುಂದೂಡಲಾಗಿರುವ ದಿನಾಂಕಗಳನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ ಎಂದು ವಿಟಿಯು ಕುಲಸಚಿವ (ಮೌಲ್ಯಮಾಪನ) ಸತೀಶ ಅಣ್ಣಿಗೇರಿ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !