ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೇರಾ ಕಾಯ್ದೆ ತಿದ್ದುಪಡಿ: ಗ್ರಾಹಕರಿಗೆ ಹಿತ

ಇನ್ನು ಮುಂದೆ ’ಕ್ರಯ ಒಪ್ಪಂದ’ಕ್ಕೆ ಕಾನೂನು ಮಾನ್ಯತೆ
Last Updated 12 ಜೂನ್ 2020, 20:18 IST
ಅಕ್ಷರ ಗಾತ್ರ

ಬೆಂಗಳೂರು: ಕ್ರಯ ಒಪ್ಪಂದವನ್ನು (ಸೇಲ್‌ ಅಗ್ರಿಮೆಂಟ್‌) ಕಾನೂನು ಬದ್ಧಗೊಳಿಸುವ ಮೂಲಕ ಫ್ಲಾಟ್‌/ನಿವೇಶನ ಖರೀದಿದಾರರಿಗೆ ರಕ್ಷಣೆ ನೀಡಲು ರಾಜ್ಯ ಸರ್ಕಾರ‘ಕರ್ನಾಟಕ ರಿಯಲ್‌ ಎಸ್ಟೇಟ್‌ ಅಭಿವೃದ್ಧಿ ಮತ್ತು ನಿಯಂತ್ರಣ ಕಾಯ್ದೆ’ಗೆ ತಿದ್ದುಪಡಿ ತಂದಿದೆ.

ಛಾಪಾ ಕಾಗದದ ಮೇಲೆ ಮಾಡಿಕೊಂಡ ‘ಕ್ರಯ ಒಪ್ಪಂದ’ವನ್ನು ಇಲ್ಲಿಯವರೆಗೆ ಕಾನೂನು ಬದ್ಧ ದಾಖಲೆ ಎಂದು ಸರ್ಕಾರ ಪರಿಗಣಿಸುತ್ತಿರಲಿಲ್ಲ.

ಇನ್ನು ಕ್ರಯ ಒಪ್ಪಂದಕ್ಕೆ ಸರ್ಕಾರವೇ ನಿಗದಿತ ಅರ್ಜಿ ನಮೂನೆಯನ್ನು ಒದಗಿಸುತ್ತದೆ. ಅದರಲ್ಲೇ ಒಪ್ಪಂದ ಮಾಡಿಕೊಳ್ಳಬೇಕು. ಆಗ ಮಾತ್ರ ಕಾನೂನಿನ ಮಾನ್ಯತೆ ಸಿಗುತ್ತದೆ. ಇದರಿಂದಾಗಿ ಮಾರಾಟ ಒಪ್ಪಂದದಲ್ಲಿರುವ ಅಂಶಗಳನ್ನು ರಿಯಲ್‌ ಎಸ್ಟೇಟ್‌ ಉದ್ಯಮಿಗಳು ಉಲ್ಲಂಘಿಸಿ ಮೋಸ ಮಾಡಲು ಸಾಧ್ಯವಾಗದು ಎಂದು ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

‘ತಿದ್ದುಪಡಿಯಿಂದ ಮಾರಾಟಗಾರ, ಖರೀದಿದಾರ ಇಬ್ಬರಿಗೂ ಅನುಕೂಲ. ಯಾರೂ ಒಪ್ಪಂದವನ್ನು ಉಲ್ಲಂಘಿಸಲಾಗದು. ಮಾರಾಟ ಒಪ್ಪಂದವನ್ನೂ ನೋಂದಣಿ ಮಾಡಿಸಿಕೊಳ್ಳಬೇಕಾಗಬಹುದು’ ಎಂದು ಕ್ರೆಡಾಯ್‌ ಪ್ರತಿನಿಧಿ ಶಂಕರ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT