ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಷಿಪ್ರ ಬೆಳವಣಿಗೆ| 12 ಶಾಸಕರಿಂದ ರಾಜೀನಾಮೆ ಸಲ್ಲಿಕೆ, ಶಾಸಕರಿಗೆ ಸಿಗದ ಸ್ಪೀಕರ್‌

Last Updated 6 ಜುಲೈ 2019, 11:29 IST
ಅಕ್ಷರ ಗಾತ್ರ

ಬೆಂಗಳೂರು:ರಾಜ್ಯ ರಾಜಕೀಯದ ಕ್ಷಿಪ್ರ ಬೆಳವಣಿಗೆಯಲ್ಲಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ನ 12 ಶಾಸಕರು ಶನಿವಾರ ರಾಜೀನಾಮೆ ಸಲ್ಲಿಸಿದರು.

ಶಾಸಕರು ಶನಿವಾರ ಬೆಳಿಗ್ಗೆ ವಿಧಾನಸೌಧದಲ್ಲಿ ಸ್ಪೀಕರ್‌ ಕಚೇರಿಗೆ ತೆರಳಿದರು. ಸ್ಪೀಕರ್‌ ಕಚೇರಿಯಲ್ಲಿ ಇಲ್ಲದ ಕಾರಣ ಅವರ ಕಾರ್ಯದರ್ಶಿ ವಿಶಾಲಾಕ್ಷಿ ಅವರಿಗೆ ರಾಜೀನಾಮೆ ಸಲ್ಲಿಸಿ ಹೊರ ಬಂದರು.

ರಾಜೀನಾಮೆ ಸಲ್ಲಿಸಿದ ಶಾಸಕರು

‌1) ಪ್ರತಾಪ ಗೌಡ ಪಾಟೀಲ್

2) ರಮೇಶ್ ಜಾರಕಿಹೊಳಿ

3) ಬಿ.ಸಿ.ಪಾಟೀಲ್

4) ಶಿವರಾಮ್ ಹೆಬ್ಬಾರ್

5) ಮಹೇಶ್ ಕುಮಟಳ್ಳಿ

6) ರಾಮಲಿಂಗಾ ರೆಡ್ಡಿ

7) ಎಸ್.ಟಿ. ಸೋಮಶೇಖರ್

8) ಬೈರತಿ ಬಸವರಾಜ್

9) ಗೋಪಾಲಯ್ಯ

10) ಎಚ್ ವಿಶ್ವನಾಥ್

11) ನಾರಾಯಣ ಗೌಡ

12) ಮುನಿರತ್ನ

ಇಷ್ಟು ಮಂದಿ ರಾಜೀನಾಮೆ ಸಲ್ಲಿಸಿದ್ದಾರೆ.

ಮುಂದಿನ ಸರದಿಯಲ್ಲಿ ರಾಜೀನಾಮೆ ಸಲ್ಲಿಸಲಿದ್ದಾರೆ ಎನ್ನಲಾದ ಶಾಸಕರು

1) ನಾಗೇಂದ್ರ

2) ರೋಶನ್ ಬೇಗ್

3) ಸೌಮ್ಯಾ ರೆಡ್ಡಿ

4) ಅಂಜಲಿ ನಿಂಬಾಳ್ಕರ್

5) ಲಿಂಗೇಶ್

6) ಕೆ.ಸುಧಾಕರ್

7) ಸುಬ್ಬಾರೆಡ್ಡಿ

8) ಶ್ರೀನಿವಾಸ ಗೌಡ

9) ವಿ.ಮುನಿಯಪ್ಪ

*ಅಮರೇ ಗೌಡ ಬೈಯ್ಯಾಪುರ ಸಹ ಸೋಮವಾರ ರಾಜೀನಾಮೆ ನೀಡುವ ಸಾಧ್ಯತೆ

* ಶಾಸಕ ಮುನಿರತ್ನ ಅವರ ರಾಜೀನಾಮೆ ಪತ್ರವನ್ನು ಸಚಿವ ಡಿ.ಕೆ.ಶಿವಕುಮಾರ್ ಹರಿದು ಹಾಕಿದ್ದರು. ಆದರೆ, ಮಧ್ಯಾಹ್ನ ಬಳಿಕ ಅವರು ಸ್ಪೀಕರ್‌ ಕಚೇರಿಗೆ ಬಂದು ರಾಜೀನಾಮೆ ಸಲ್ಲಿಸಿದರು. ಈ ವೇಳೆ ಅವರ ಜತೆ ಸೋಮಶೇಕರ್‌ ಜತೆಗಿದ್ದರು.

* 11 ಮಂದಿ ರಾಜೀನಾಮೆ ನೀಡಿದ್ದನ್ನು ಸ್ಪೀಕರ್ ಕೆ.ಆರ್‌. ರಮೇಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.

ಬಳಿಕ, ಶಾಸಕರುರಾಜ್ಯಪಾಲರನ್ನು ಭೇಟಿ ಮಾಡಲು ವಿಧಾನಸೌಧದಿಂದ ರಾಜಭವನಕ್ಕೆ ತೆರಳಿದರು. ಬಸವರಾಜ್, ಸೋಮಶೇಖರ್, ರಾಮಲಿಂಗಾರೆಡ್ಡಿ ಹೊರತುಪಡಿಸಿ ಇತರ ಎಂಟು ಮಂದಿ ರಾಜಭವನದಲ್ಲಿ ರಾಜೀನಾಮೆ ಸಲ್ಲಿಸಿದ್ದಾರೆ.

ಸದ್ಯ ಒಂದಿಷ್ಟು ಪತ್ರಕರ್ತರು ಸ್ಪೀಕರ್ ಕಚೇರಿ ಬಳಿ ಇದ್ದು ಕೆಲವರು ಡಿಕೆಶಿ ಅವರ ಮನೆಯತ್ತ ತೆರಳಿದ್ದಾರೆ. ಕೆಲವರು ಸ್ಪೀಕರ್ ಅವರ ಮನೆಯತ್ತಲೂ ತೆರಳಿದ್ದಾರೆ. ಇಷ್ಟೆಲ್ಲ ಬೆಳವಣಿಗೆ ಆಗುತ್ತಿದ್ದರೂ ಬಿಜೆಪಿ ಏನೂ ಆಗಿಲ್ಲವೇನೋ ಎಂಬಂತೆ ಕುಳಿತಿದೆ. ರಾಜಭನಕ್ಕೆ ತೆರಳಿದ ಎಂಟು ಮಂದಿ ಇನ್ನೂ ಹೊರಗೆ ಬಂದಿಲ್ಲ.

ಸಂಧಾನಕ್ಕೆ ಬಂದವರು ಎಂದು ಹೇಳಲಾದ ಮೂವರೂ ರಾಜೀನಾಮೆ ಸಲ್ಲಿಸಿದ್ದಾರೆ. ಹೊರಗೆ ಬಂದ ಯಾರೊಬ್ಬರೂ ಮಾತನಾಡದೆ ಅಲ್ಲಿಂದ ತೆರಳಿದರು.

ಸಂಜೆಯೊಳಗೆ ಸುಬ್ಬಾ ರೆಡ್ಡಿ, ರೋಶನ್ ಬೇಗ್, ಸೌಮ್ಯಾ ರೆಡ್ಡಿ ರಾಜೀನಾಮೆ ಸಲ್ಲಿಸುವ ನಿರೀಕ್ಷೆ ಇದೆ.

ಎಲ್ಲ ಶಾಸಕರೂ ಸ್ಪೀಕರ್ ಮನೆಗೆ ತೆರಳಿ ರಾಜೀನಾಮೆ ಸಲ್ಲಿಸುವ ಸಾಧ್ಯತೆಯೂ ಇದೆ.

ರಾಮಲಿಂಗಾ ರೆಡ್ಡಿ, ಸೋಮಶೇಖರ್ ಸಹಿತ ಮೂರು ಶಾಸಕರು ಡಿ.ಕೆ.ಶಿವಕುಮಾರ್‌ ಕಾರಿನಲ್ಲಿ ತೆರಳಿದರು. ಡಿಕೆಶಿ ಮನೆಯಲ್ಲಿ ಮಾತುಕತೆ ನಡೆಯಲಿದೆ.

* ಇವನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT