ಸೋಮವಾರ, ಅಕ್ಟೋಬರ್ 21, 2019
24 °C
ಬಾಡಿಗೆ ದ್ವಿಚಕ್ರ ವಾಹನ ಬಳಕೆ * ಮಹಿಳೆಯ ಸುಲಿಗೆ; ಸ್ನೇಹಿತ ಸೇರಿ ಇಬ್ಬರ ಬಂಧನ

ಮನೆಗೆ ನುಗ್ಗಿ ಕೈ ಕಚ್ಚಿದ್ದ ಆರೋಪಿಗಳು

Published:
Updated:
Prajavani

ಬೆಂಗಳೂರು: ಬಾಗಲಗುಂಟೆ ಠಾಣೆಯ ವ್ಯಾಪ್ತಿಯ ಮನೆಯೊಂದಕ್ಕೆ ನುಗ್ಗಿ ಮಹಿಳೆಯೊಬ್ಬರ ಮೇಲೆ ಹಲ್ಲೆ ಮಾಡಿ ಸುಲಿಗೆ ಮಾಡಿದ್ದ ಆರೋಪದಡಿ, ಮಹಿಳೆಯ ಸ್ನೇಹಿತ ಸೇರಿ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

ಮಹಾಲಕ್ಷ್ಮಿ ಲೇಔಟ್‌ನ ರಾಕೇಶ್ ಗೌಡ (20) ಹಾಗೂ ಮಂಜುನಾಥ್ ನಗರದ ಇರ್ಫಾನ್ (23) ಬಂಧಿತರು. ಅವರಿಂದ 16 ಗ್ರಾಂ ತೂಕದ ಚಿನ್ನಾಭರಣ ಹಾಗೂ 2 ದ್ವಿಚಕ್ರ ವಾಹನ ಜಪ್ತಿ ಮಾಡಲಾಗಿದೆ.

‘28 ವರ್ಷದ ಮಹಿಳೆ ತಮ್ಮ ಮನೆಯಲ್ಲಿ ಇದೇ 1ರಂದು ಒಬ್ಬರೇ ಇದ್ದರು. ನೀರು ಕೇಳುವ ನೆಪದಲ್ಲಿ ಆರೋಪಿಗಳು ಮನೆಗೆ ಹೋಗಿದ್ದರು. ನೀರು ತರಲು ಹೊರಟಿದ್ದಾಗಲೇ ಮನೆಯೊಳಗೆ ನುಗ್ಗಿದ್ದ ಆರೋಪಿಗಳು, ಚಾಕು ತೋರಿಸಿ ಮಹಿಳೆಯ ಮುಖವನ್ನು ಬಟ್ಟೆಯಿಂದ ಮುಚ್ಚಿದ್ದರು. ಮಹಿಳೆಯ ಕೈಕಚ್ಚಿದ್ದರು. ಮೈಮೇಲಿದ್ದ ಚಿನ್ನಾಭರಣ ಸುಲಿಗೆ ಮಾಡಿಕೊಂಡು ಪರಾರಿಯಾಗಿದ್ದರು’ ಎಂದು ವಿವರಿಸಿದರು.

ಡ್ರೈವ್‌ಜಿ ಬೈಕ್ ಬಾಡಿಗೆಗೆ: ‘ಆರೋಪಿ ರಾಕೇಶ್‌, ಮಹಿಳೆಯ ಸ್ನೇಹಿತನಾಗಿದ್ದ. ಕುಟುಂಬದವರು ತಮ್ಮ ಮೇಲೆಯೇ ಅನುಮಾನಪಡಬಹುದೆಂದು ಮಹಿಳೆ, ಆ ಬಗ್ಗೆ ಯಾವುದೇ ಮಾಹಿತಿ ನೀಡಿರಲಿಲ್ಲ’ ಎಂದು ಪೊಲೀಸರು ಹೇಳಿದರು.

‘ಮಹಿಳೆ ಬಳಿ ಚಿನ್ನಾಭರಣ ಇರುವುದನ್ನು ತಿಳಿದುಕೊಂಡಿದ್ದ ಆರೋಪಿ, ಸುಲಿಗೆ ಮಾಡಲು ಸಹಚರನ ಜೊತೆಗೆ ಸೇರಿ ಸಂಚು ರೂಪಿಸಿದ್ದ. ಮೊಬೈಲ್ ಆ್ಯಪ್ ಆಧರಿಸಿ ಡ್ರೈವ್‌ಜಿ ಕಂಪನಿಯಲ್ಲಿ ದ್ವಿಚಕ್ರ ವಾಹನಗಳನ್ನು ಬಾಡಿಗೆ ಪಡೆದಿದ್ದ. ಅವುಗಳಲ್ಲೇ ಮಹಿಳೆಯ ಮನೆ ಬಳಿ ಬಂದು ಕೃತ್ಯ ಎಸಗಿದ್ದ. ಈ ಬಗ್ಗೆ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ’ ಎಂದು ತಿಳಿಸಿದರು.

Post Comments (+)