ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುರು ಸ್ಮಾರಕಕ್ಕೆ ₹ 25 ಲಕ್ಷ ಬಿಡುಗಡೆ

Last Updated 29 ಫೆಬ್ರುವರಿ 2020, 19:31 IST
ಅಕ್ಷರ ಗಾತ್ರ

ಬೆಂಗಳೂರು: ಪುಲ್ವಾಮಾ ಸ್ಫೋಟದಲ್ಲಿ ಹುತಾತ್ಮರಾದ ಎಚ್‌.ಗುರು ಅವರು ಸ್ಮಾರಕ ನಿರ್ಮಾಣಕ್ಕಾಗಿ ರಾಜ್ಯ ಸರ್ಕಾರ ಶನಿವಾರ ₹ 25 ಲಕ್ಷ ಬಿಡುಗಡೆ ಮಾಡಿದೆ.

ಗುರು ಅವರ ಸ್ವಗ್ರಾಮವಾದ ಮಂಡ್ಯಜಿಲ್ಲೆ ಮದ್ದೂರು ತಾಲ್ಲೂಕಿನ ಗುಡಿಗೆರೆ ಕಾಲೋನಿಗೆ ಸಮೀಪದ ಮೆಳ್ಳಹಳ್ಳಿಯಲ್ಲಿ ಗುರು ಅವರ ಪುತ್ಥಳಿ, ಕಲ್ಲಿನ ಬೆಂಚುಗಳನ್ನು ಒಳಗೊಂಡ ಉದ್ಯಾನ ನಿರ್ಮಾಣಗೊಳ್ಳಲಿದೆ. ಇದರ ಕಾಮಗಾರಿಯನ್ನು ಶೀಘ್ರ ಆರಂಭಿಸುವಂತೆ ಮಂಡ್ಯ ಜಿಲ್ಲಾಧಿಕಾರಿಗೆ ಸೂಚನೆ ನೀಡಲಾಗಿದೆ.

ಕಳೆದ ವರ್ಷ ಫೆಬ್ರುವರಿ 14ರಂದು ಪುಲ್ವಾಮಾದಲ್ಲಿ ಆತ್ಮಹತ್ಯಾ ಬಾಂಬರ್‌ ಒಬ್ಬ ತನ್ನ ವಾಹನವನ್ನು 40 ಮಂದಿ ಸಿಆರ್‌ಪಿಎಫ್‌ ಯೋಧರಿದ್ದ ವಾಹನಕ್ಕೆ ಡಿಕ್ಕಿ ಹೊಡೆಸಿದ್ದ. ಘಟನೆಯಲ್ಲಿ ಗುರು (33) ಸಹಿತ ಎಲ್ಲರೂ ಮೃತಪಟ್ಟಿದ್ದರು.

ಇದಕ್ಕೆ ಮೊದಲು ಗುರು ಕುಟುಂಬದವರು ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿದ್ದರು. ಈಚೆಗೆ ಮುಖ್ಯಮಂತ್ರಿ ಅವರು ಸ್ಮಾರಕಕ್ಕೆ ದುಡ್ಡು ಬಿಗುಗಡೆ ಮಾಡುವಂತೆ ಹಣಕಾಸು ಇಲಾಖೆಗೆ ಪತ್ರ ಬರೆದಿದ್ದರು. ‘ಅವರ ಬಲಿದಾನ ಮುಂದಿನ ಜನಾಂಕಕ್ಕೆ ಪ್ರೇರಣೆಯಾಗಬೇಕು, ಇದಕ್ಕಾಗಿ ಸ್ಮಾರಕವೊಂದರ ನಿರ್ಮಾಣ ಅಗತ್ಯ’ ಎಂದು ಅವರು ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT