ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನೀರಾವರಿ ಯೋಜನೆಗಳಿಗೆ ಆದ್ಯತೆ ನೀಡದಿದ್ದರೆ ಅಪಾಯ’

ಯೋಜನೆ ಅನುಷ್ಠಾನಗೊಂಡರೆ 34ಲಕ್ಷ ಹೆಕ್ಟೇರ್ ಕೃಷಿ ಜಮೀನು ಇರುವ ಉತ್ತರ ಕರ್ನಾಟಕ ಶ್ರೀಮಂತ
Last Updated 5 ಜನವರಿ 2019, 20:15 IST
ಅಕ್ಷರ ಗಾತ್ರ

ಅಂಬಿಕಾತನಯದತ್ತ ಪ್ರಧಾನ ವೇದಿಕೆ (ಧಾರವಾಡ): ‘ನೀರಾವರಿ ಯೋಜನೆಗಳಲ್ಲಿ ಬಾಕಿ ಇರುವ ₹53ಸಾವಿರ ಕೋಟಿ ಮೊತ್ತದ ಕಾಮಗಾರಿಯನ್ನು ಶೀಘ್ರದಲ್ಲಿ ಪೂರ್ಣಗೊಳಿಸದಿದ್ದರೆ ರಾಜ್ಯಕ್ಕೆ ಅಪಾಯ ಖಂಡಿತ’ ಎಂದು ಹಿರಿಯ ವಕೀಲ ಮೋಹನ ಕಾತರಕಿ ಆತಂಕ ವ್ಯಕ್ತಪಡಿಸಿದರು.

ಸಾಹಿತ್ಯ ಸಮ್ಮೇಳನದಲ್ಲಿಶನಿವಾರ ಜರುಗಿದ ‘ನೀರಾವರಿ: ಜ್ವಲಂತ ಸಮಸ್ಯೆಗಳು’ ವಿಷಯ ಕುರಿತು ಗೋಷ್ಠಿಯ ಅಧ್ಯಕ್ಷತೆ ವಹಿಸಿ, ‘ಕೃಷ್ಣಾ ಮತ್ತು ಕಾವೇರಿ ಕೊಳ್ಳದ ಅಪೂರ್ಣ ಯೋಜನೆಗಳು’ ವಿಷಯ ಕುರಿತು ಅವರು ಮಾತನಾಡಿದರು.

‘ಯೋಜನೆ ಅನುಷ್ಠಾನಕ್ಕೆ ರಾಜ್ಯದ ಬಳಿ ಹಣ ಇಲ್ಲವೆಂದೇನೂ ಅಲ್ಲ. ಆದರೆ ಅದರ ಪ್ರಾತಿನಿಧ್ಯ ಬೇರೆಯೇ ಇದೆ. ನದಿಪಾತ್ರದ ಮೇಲಿನ ಪ್ರದೇಶದಲ್ಲಿರುವ ನಾವು, ನಮ್ಮ ಪಾಲಿನ ನೀರನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಇಲ್ಲವಾದಲ್ಲಿ, ಮುಂದೊಂದು ದಿನ ಅತ್ತ ಹರಿದುಹೋದ ನೀರಿನ ಮೇಲೆ ನೆರೆಯ ರಾಜ್ಯಗಳು ಹಕ್ಕು ಸಾಧಿಸುವ ಅಪಾಯವಿದೆ’ ಎಂದರು.

‘ಕೃಷ್ಣಾ ನದಿಯ 907 ಟಿಎಂಸಿ ನೀರು ಬಳಸಲು ನ್ಯಾಯಾಲಯ ಅನುಮತಿ ನೀಡಿದೆ. ಅದರೆ ಇದರಲ್ಲಿ ಕೇವಲ 300 ಟಿಎಂಸಿ ಕೆಲಸ ಮಾಡಲು ಕನಿಷ್ಠ ₹7 ಸಾವಿರ ಕೋಟಿಯಿಂದ ₹8 ಸಾವಿರ ಕೋಟಿ ಬೇಕು. ಹೀಗಾಗಿ ರಾಜ್ಯ ಸರ್ಕಾರ ತನ್ನ ಆಯವ್ಯಯದಲ್ಲಿ ನೀರಾವರಿಗೆ ಮೀಸಲಿಟ್ಟಿರುವ ಹಣವನ್ನು ದ್ವಿಗುಣಗೊಳಿಸಬೇಕು’ ಎಂದರು.

ಕಾವೇರಿ ಕಣಿವೆಯಲ್ಲಿ 7.63 ಲಕ್ಷ ಹೆಕ್ಟೇರ್‌ ಜಮೀನು

ಕೃಷ್ಣಾ ಕಣಿವೆಯಲ್ಲಿ 34ಲಕ್ಷ ಹೆಕ್ಟೇರ್ ಜಮೀನು

ಬಾಕಿ ಇರುವ ಯೋಜನೆಗಳ ಮೊತ್ತ ₹53ಸಾವಿರ ಕೋಟಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT