ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಾ. ಸೌಮ್ಯಾಗೆ ‘ಸಂಗೀತ ಕಲಾನಿಧಿ’ ಪ್ರಶಸ್ತಿ

Last Updated 21 ಜುಲೈ 2019, 20:30 IST
ಅಕ್ಷರ ಗಾತ್ರ

ಚೆನ್ನೈ: ಕರ್ನಾಟಕ ಶಾಸ್ತ್ರೀಯ ಸಂಗೀತ ಕ್ಷೇತ್ರದ ಸಾಧಕಿ ಡಾ. ಎಸ್. ಸೌಮ್ಯಾ ಅವರು ಮದ್ರಾಸ್‌ ಮ್ಯೂಸಿಕ್‌ ಅಕಾಡೆಮಿಯು ನೀಡುವ 2019ನೇ ಸಾಲಿನ ‘ಸಂಗೀತ ಕಲಾನಿಧಿ’ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಈ ವರ್ಷಾಂತ್ಯದಲ್ಲಿ ನಡೆಯಲಿರುವ ‘ಮಾರ್ಗಳಿ ಉತ್ಸವ’ದ ಸಂದರ್ಭದಲ್ಲಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಅಕಾಡೆಮಿಯ ಪ್ರಕಟಣೆ ತಿಳಿಸಿದೆ.

ಡಾ. ಸೌಮ್ಯಾ ಅವರು ಮದ್ರಾಸ್‌ ಮ್ಯೂಸಿಕ್‌ ಅಕಾಡೆಮಿಯ ‘ಅಡ್ವಾನ್ಸ್ಡ್‌ ಸ್ಕೂಲ್‌ ಆಫ್‌ ಕರ್ನಾಟಿಕ್‌ ಮ್ಯೂಸಿಕ್‌’ನಲ್ಲಿ ಸಂಗೀತ ಉಪನ್ಯಾಸಕಿಯಾಗಿರುವುದಲ್ಲದೆ, ತಮಿಳುನಾಡು ಸಂಗೀತ ಮತ್ತು ಲಲಿತಕಲೆಗಳ ವಿಶ್ವವಿದ್ಯಾಲಯದ ಶೈಕ್ಷಣಿಕ ಮಂಡಳಿಯ ಸದಸ್ಯೆಯೂ ಆಗಿದ್ದಾರೆ. ಡಿಸೆಂಬರ್‌ 15ರಿಂದ ಜನವರಿ 1ರವರೆಗೆ ನಡೆಯಲಿರುವ ಮ್ಯೂ
ಸಿಕ್‌ ಅಕಾಡೆಮಿಯ 93ನೇ ವಾರ್ಷಿಕ ಸಮ್ಮೇಳನದ ಅಧ್ಯಕ್ಷತೆಯನ್ನು ಅವರು ವಹಿಸಲಿದ್ದಾರೆ ಎಂದು ಮದ್ರಾಸ್‌ ಮ್ಯೂಸಿಕ್‌ ಅಕಾಡೆಮಿಯ ಅಧ್ಯಕ್ಷ ಎನ್‌. ಮುರಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸಂಗೀತ ಕಲಾನಿಧಿ ಹಾಗೂ ಇತರ ಪ್ರಶಸ್ತಿಗಳನ್ನು 2020ರ ಜನವರಿ 1ರಂದು ಪ್ರದಾನ ಮಾಡಲಾಗುವುದು. ಜನವರಿ 3ರಿಂದ ನೃತ್ಯೋತ್ಸವ ನಡೆಯಲಿದ್ದು ‘ನೃತ್ಯ ಕಲಾನಿಧಿ’ ಪ್ರಶಸ್ತಿಯನ್ನು ಈ ಸಂದರ್ಭದಲ್ಲಿ ಪ್ರದಾನ ಮಾಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

‘ಸಂಗೀತ ಕಲಾ ಆಚಾರ್ಯ’ ಪ್ರಶಸ್ತಿ: ಸೀತಾ ನಾರಾಯಣನ್‌ ಹಾಗೂ ಎಂ.ಎಸ್‌. ಶೀಲಾ

ಟಿ.ಟಿ.ಕೆ ಪ್ರಶಸ್ತಿ: ನಾಗಸ್ವರ ವಾದಕ ವ್ಯಾಸರಪಡಿ ಕೋದಂಡರಾಮನ್‌ ಹಾಗೂ ಗಾಯಕ ರಾಜಕುಮಾರ್‌ ಭಾರತಿ

ಸಂಗೀತಶಾಸ್ತ್ರಜ್ಞ ಪ್ರಶಸ್ತಿ: ಡಾ. ಆರತಿ ಎನ್‌.ರಾವ್‌ (ಬೆಂಗಳೂರಿನ ಜೈನ್‌ ಯುನಿವರ್ಸಿಟಿಯ ಸಹಾಯಕ ಪ್ರಾಧ್ಯಾಪಕಿ)

ನೃತ್ಯ ಕಲಾನಿಧಿ ಪ್ರಶಸ್ತಿ: ಪ್ರಿಯದರ್ಶಿನಿ ಗೋವಿಂದ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT