ಸೋಮವಾರ, ಜನವರಿ 20, 2020
18 °C

ಶಾಲೆಗೆ ದೇಣಿಗೆ ನೀಡಿ ಜನ್ಮದಿನ ಆಚರಿಸಿಕೊಂಡ ವಿದ್ಯಾರ್ಥಿನಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೌಜಲಗಿ: ಸಮೀಪದ ಬೆಟಗೇರಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯ 9ನೇ ತರಗತಿ ವಿದ್ಯಾರ್ಥಿನಿ ಮಹಾಲಕ್ಷ್ಮಿ ಮಲ್ಲಪ್ಪ ಈಟಿ ಅವರು ಶಾಲೆಗೆ ಟೇಬಲ್‌ ಸೇರಿದಿಂತೆ ₹ 6ಸಾವಿರ ಮೌಲ್ಯದ ಅಗತ್ಯ ಸಾಮಗ್ರಿಗಳನ್ನು ನೀಡಿ ಮಂಗಳವಾರ ತಮ್ಮ ಜನ್ಮ ದಿನವನ್ನು ಮಾದರಿಯಾಗಿ ಆಚರಿಸಿಕೊಂಡಿದ್ದಾರೆ.

ಗೋಕಾಕ ತಾಲ್ಲೂಕಿನ ಮರಡಿಶಿವಾಪುರ ಕೃಷಿಕರಾದ ಮಲ್ಲಪ್ಪ-ಮಂಜುಳಾ ದಂಪತಿ ಪುತ್ರಿ ಇವರು. ಹೋದ ವರ್ಷ ಜನ್ಮ ದಿನದಂದು ₹ 3 ಸಾವಿರ ಮೌಲ್ಯದ ಊಟದ ತಟ್ಟೆಗಳನ್ನು ದೇಣಿಗೆ ನೀಡಿದ್ದರು.

ಪ್ರತಿಯಾಗಿ ಶಿಕ್ಷಕರು, ವಿದ್ಯಾರ್ಥಿಗಳು ಸೇರಿ ಮಹಾಲಕ್ಷ್ಮಿ ಜನ್ಮ ದಿನವನ್ನು ಆಚರಿಸಿ ಶುಭಾಶಯ ಕೋರಿದರು. ಸಿಹಿ ಹಂಚಿದರು.

‘ಜನ್ಮ ದಿನದಂದು ವಿದ್ಯಾರ್ಥಿನಿಯೊಬ್ಬರು ಶಾಲೆಗೆ ದೇಣಿಗೆ ನೀಡುತ್ತಿರುವುದು ರಾಜ್ಯದಲ್ಲಿಯೇ ಮಾದರಿಯಾಗಿದೆ’ ಎಂದು ಮುಖ್ಯಶಿಕ್ಷಕ ರಮೇಶ ಅಳಗುಂಡಿ ಹೇಳಿದರು.

ಶಿಕ್ಷಕರಾದ ಮಲ್ಲಿಕಾರ್ಜುನ ಹಿರೇಮಠ, ಮೋಹನ ತುಪ್ಪದ, ವಿ.ಬಿ. ಬಿರಾದಾರ, ಶುಭಾ.ಬಿ., ರಾಕೇಶ ನಡೋಣಿ, ಪ್ರಕಾಶ ಮುರಕಟ್ನಾಳ,  ಬಾಳೇಶ ಕೂಟೂರ, ರೂಪಾ ಖನಗಾವಿ, ಗಣಪತಿ ಭಾಗೋಜಿ, ಮಲ್ಹಾರಿ ಪೋಳ, ಎಸ್‌ಡಿಎಂಸಿ ಅಧ್ಯಕ್ಷ ಕುತುಬು ಮಿರ್ಜಾ ನಾಯ್ಕ ಇದ್ದರು.

 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು