ಶನಿವಾರ, ಜನವರಿ 25, 2020
28 °C

ಕುರಿಗಳ ಕಳವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಲಿಯೂರುದುರ್ಗ (ಕುಣಿಗಲ್‌): ಹೋಬಳಿಯ ಅರಮನೆ ಹೊನ್ನಮಾಚನಹಳ್ಳಿಯಲ್ಲಿ ಗುರುವಾರ ತಡರಾತ್ರಿ ಕುರಿ ಮತ್ತು ಮೇಕೆಗಳನ್ನು ಕಳವು ಮಾಡಲಾಗಿದೆ.

ಗ್ರಾಮದ ಎಚ್.ಪಿ. ಚಂದ್ರಯ್ಯ ನಾಲ್ಕು ಕುರಿ ಹಾಗೂ ಒಂದು ಮೇಕೆಯನ್ನು ಶುಕ್ರವಾರ ಮಾಗಡಿಯ ಸಂತೆಯಿಂದ ₹ 45 ಸಾವಿರಕ್ಕೆ ಖರೀದಿಸಿ ತಂದಿದ್ದರು.

ಇನ್ನೊಂದು ಕೊಟ್ಟಿಗೆಯಲ್ಲಿ ಜವರಪ್ಪ ಅವರಿಗೆ ಸೇರಿದ ಎರಡು ಹೋತ ಹಾಗೂ ಒಂದು ಮೇಕೆಯನ್ನು ಕಳ್ಳತನ ಮಾಡಲಾಗಿದೆ. ಎರಡು ಆಡು ಮರಿಗಳನ್ನು ಕಳ್ಳರು ಬಿಟ್ಟು ಹೋಗಿದ್ದಾರೆ. ಕಳ್ಳತನಕ್ಕೂ ಮುನ್ ಸುತ್ತಲಿನ ಮನೆಗಳ ಚಿಲಕ ಬಂದ್ ಮಾಡಿ ಕೃತ್ಯ ಎಸಗಿದ್ದಾರೆ.

ಪ್ರತಿಕ್ರಿಯಿಸಿ (+)