ಶುಕ್ರವಾರ, ಜೂನ್ 18, 2021
24 °C
ಗೋಕರ್ಣ ಸಮೀಪದ ಗಂಗೆಕೊಳ್ಳಕ್ಕೆ ತೇಲಿಬಂದ ಬಿಳಿ ಬಣ್ಣದ ವಸ್ತು

ಗೋಕರ್ಣ: ಸ್ಥಳೀಯರನ್ನು ಭಯಗೊಳಿಸಿದ ‘ಶೆಲ್’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗೋಕರ್ಣ: ನೌಕಾಪಡೆಯವರು ಆಳ ಸಮುದ್ರದಲ್ಲಿ ಸೂಚನೆ ನೀಡಲು ಬಳಸುವ ಶೆಲ್ ಒಂದು ಸಮೀಪದ ಗಂಗೆಕೊಳ್ಳಕ್ಕೆ ಶುಕ್ರವಾರ ಬೆಳಿಗ್ಗೆ ತೇಲಿ ಬಂದು ಸ್ಥಳೀಯರು ಹೌಹಾರಿದರು. ಅದು ಬಾಂಬ್ ಇರಬಹುದು ಎಂದು ಭಾವಿಸಿದ್ದರಿಂದ ಆತಂಕ ಮೂಡಿತ್ತು.

ಬಿಳಿ ಬಣ್ಣದ ಶೆಲ್‌ನ ಮೇಲೆ ‘ಅಪಾಯ’ (ಡೇಂಜರ್) ಎಂದು ಬರೆದಿದ್ದೇ ರಾದ್ಧಾಂತಕ್ಕೆ ಕಾರಣವಾಗಿತ್ತು. ಅದನ್ನು ಕಂಡ ಸ್ಥಳೀಯರು, ಗೋಕರ್ಣ ಪೊಲೀಸ್ ಠಾಣೆಯ ಪಿ.ಎಸ್.ಐ. ಸಂತೋಷಕುಮಾರ್.ಎಂ ಅವರ ಗಮನಕ್ಕೆ ತಂದರು. ಸ್ಥಳಕ್ಕೆ ತೆರಳಿ ಪರೀಕ್ಷಿಸಿದಾಗ ಅದು ಸೂಚನೆ ನೀಡಲು ಬಳಸುವ ಶೆಲ್ ಎಂದು ಗೊತ್ತಾಯಿತು. 

ಯಾವುದಕ್ಕೆ ಬಳಕೆ?: ನೌಕೆಯು ಆಳ ಸಮುದ್ರದಲ್ಲಿ ಹೋಗುತ್ತಿರುವಾಗ ಅದರ ಕೆಳಭಾಗದಲ್ಲಿ ಏನಾದರೂ ಅವಘಡವಾದರೆ ಎಚ್ಚರಿಕೆ ನೀಡಲು ಇದನ್ನು ಬಳಕೆ ಮಾಡುತ್ತಾರೆ. ಇದರಿಂದ ಬಾಂಬ್‌ನಂತಹ ಅಪಾಯವಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದಾಗ ಸ್ಥಳೀಯರು ನಿರಾಳರಾದರು.

‘ಜೂನ್ ತಿಂಗಳಿನಲ್ಲಿ ಭಾರತೀಯ ನೌಕಾಪಡೆ ಮತ್ತು ಫ್ರಾನ್ಸ್ ನೌಕಾಪಡೆಗಳು ಈ ಭಾಗದಲ್ಲಿ ಜಂಟಿ ಸಮಾರಾಭ್ಯಾಸ ಮಾಡಿದ್ದವು. ಆಗ ಈ ಶೆಲ್ ಕಣ್ತಪ್ಪಿ ನೀರಿಗೆ ಬಿದ್ದು ಈಗ ತೇಲಿ ಬಂದಿರಬಹುದು ಎಂದು ಊಹಿಸಲಾಗಿದೆ. ಅದರ ಮೇಲೆ ಫ್ರೆಂಚ್ ಭಾಷೆಯಲ್ಲಿ ಬರೆಯಲಾಗಿದೆ. ಈ ವಿಚಾರವನ್ನು ಕಾರವಾರದ ನೌಕಾಪಡೆಯ ಅಧಿಕಾರಿಗಳ ಗಮನಕ್ಕೆ ತರಲಾಗಿದ್ದು, ಅವರು ತೆಗೆದುಕೊಂಡು ಹೋಗಲಿದ್ದಾರೆ’ ಎಂದು ಪಿ.ಎಸ್.ಐ. ಸಂತೋಷಕುಮಾರ್ ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು