ರಕ್ತದೊತ್ತಡ, ಉಸಿರಾಟ ಏರುಪೇರು

7

ರಕ್ತದೊತ್ತಡ, ಉಸಿರಾಟ ಏರುಪೇರು

Published:
Updated:

ತುಮಕೂರು: ಸಿದ್ಧಗಂಗಾ ಮಠದ ಡಾ.ಶಿವಕುಮಾರ ಸ್ವಾಮೀಜಿ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು, ಆರೋಗ್ಯ ಸ್ಥಿತಿ ತುಂಬಾ ಗಂಭೀರವಾಗಿದೆ ಎಂದು ಸ್ವಾಮೀಜಿ ಆಪ್ತ ವೈದ್ಯ ಡಾ.ಪರಮೇಶ್ ಅವರು ಸೋಮವಾರ ತಿಳಿಸಿದರು. 

ಸುದ್ದಿಗಾರರಿಗೆ ಮಾಹಿತಿ ನೀಡಿದ ಡಾ.ಪರಮೇಶ್‌, ‘ಶ್ರೀಗಳ ಆರೋಗ್ಯದಲ್ಲಿ ಏರುಪೇರು ಆಗಿದೆ. ನಿನ್ನೆ ರಾತ್ರಿಯಿಂದ ರಕ್ತದೊತ್ತಡದಲ್ಲಿ, ಉಸಿರಾಟದಲ್ಲಿ ಏರುಪೇರು ಆಗಿತ್ತು.  ಈಗಲೂ ಅದೇ ಸ್ಥಿತಿ ಇದೆ. ಅವರ ಆರೋಗ್ಯ ಸ್ಥಿತಿ ಗಂಭೀರವಾಗುತ್ತಿದ್ದು, ಸುಧಾರಣೆಗೆ ಎಲ್ಲ ತಜ್ಞ ವೈದ್ಯರ ಜೊತೆಗೆ ಸಂಪರ್ಕ ಸಾಧಿಸಿ ಚಿಕಿತ್ಸೆ ಮುಂದುವರಿಸಲಾಗಿದೆ. ಸದ್ಯಕ್ಕೆ ಏನೂ ಹೇಳುವ ಸ್ಥಿತಿಯಲ್ಲಿ ಇಲ್ಲ ಎಂದು ತಿಳಿಸಿದರು. 

ಚಿಕಿತ್ಸೆ ಎಷ್ಟು ಪ್ರಮಾಣದಲ್ಲಿ ಯಶಸ್ವಿ ಎಂದು ಹೇಳಲು ಸಾಧ್ಯವಿಲ್ಲ. ಪ್ರೋಟಿನ್‌ ಅಂಶ ತುಂಬಾ ಕಡಿಮೆ ಆಗಿದೆ. ಆರೋಗ್ಯ ತುಂಬಾ ಗಂಭೀರವಾಗಿದೆ ಎಂದೂ ಹೇಳಿದರು.

* ಇದನ್ನೂ ಓದಿ: ಶಿಸ್ತಿನ ’ಶ್ರೀ’ ಕಾಯಕ ಯೋಗಿ

ಶ್ರೀಗಳಿಗೆ ಉಸಿರಾಟಕ್ಕೆ ವೆಂಟಿಲೇಟರ್‌ ಸೇರಿದಂತೆ ಎಲ್ಲಾ ಚಿಕಿತ್ಸೆ ನೀಡುತ್ತಿದ್ದೇವೆ. ಬೇರೆ ವೈದ್ಯರು ಬಂದಿಲ್ಲ. ನಾವೇ ಚಿಕಿತ್ಸೆ ನೀಡುತ್ತಿದ್ದೇವೆ. ಬೇರೆ ವೈದ್ಯರೂ ನಂತರ ಬರುತ್ತಾರೆ. ಮುಂದಿನ ಎರಡು ತಾಸುಗಳ ಬಳಿಕ ಶ್ರೀಗಳ ಆರೋಗ್ಯದ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡುತ್ತೇವೆ ಎಂದು ಅವರು ತಿಳಿಸಿದರು.

* * ಇದನ್ನೂ ಓದಿ: ನಿರೀಕ್ಷಿತ ಚೇತರಿಕೆ ಕಾಣದ ಶಿವಕುಮಾರ ಶ್ರೀ

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 1

  Sad
 • 1

  Frustrated
 • 0

  Angry

Comments:

0 comments

Write the first review for this !