ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೂತನ ಸಚಿವ ಶಿವಳ್ಳಿ ರಾಜಕೀಯ ಹೆಜ್ಜೆಗಳು

Last Updated 22 ಡಿಸೆಂಬರ್ 2018, 13:43 IST
ಅಕ್ಷರ ಗಾತ್ರ

ಧಾರವಾಡ:ಶಿವಳ್ಳಿ ಅವರ 30 ವರ್ಷದ ರಾಜಕಾರಣದ ಜೀವನದಇತಿಹಾಸವನ್ನು ಮೆಲುಕು ಹಾಕಿದಾಗ,ಚನ್ನಬಸಪ್ಪ ಸತ್ಯೆಪ್ಪ ಶಿವಳ್ಳಿ ಅವರದ್ದು ಬಾಲ್ಯದಿಂದಲೆ ಬಡ ಕುಟುಂಬ. ಯರಗುಪ್ಪಿಯಲ್ಲಿ ಜನಿಸಿದಅವರಿಗೆನಾಲ್ವರು ಸಹೋದರರು, ಮೂವರು ಸಹೋದರಿಯರು ಇದ್ದಾರೆ.

* ವಯಸ್ಸು -58

* ಕ್ಷೇತ್ರ -ಕುಂದಗೋಳ

* 6 ಬಾರಿ ಸ್ಪರ್ಧೆ 3 ಬಾರಿ ಗೆಲವು

ಶಿವಳ್ಳಿ ಅವರು ಬಾಲ್ಯದಿಂದಲೆ ಸ್ನೇಹಿತರ ಸಂಘಟನೆಯಲ್ಲಿ ಮುಂಚಣಿಯಲ್ಲಿದ್ದು,ತಮ್ಮ 7, 8ನೇ ತರಗತಿಯ ಶಿಕ್ಷಣವನ್ನು ಸುರೇಬಾನ ಪ್ರೌಢಶಾಲೆಯಲ್ಲಿ, ನಂತರ ವಿಜಾಪುರದ ಪಾಂಡುರಂಗ ದೇಸಾಯಿ ಕಾಲೇಜಿನಲ್ಲಿ 9ನೇ ತರಗತಿಯಿಂದ ಪಿಯುವರೆಗೆ ವ್ಯಾಸಂಗ ಮಾಡಿದರು.ಬಿಎ ಪದವಿಯನ್ನು ಹುಬ್ಬಳ್ಳಿ ಕಾಡಸಿದ್ದೇಶ್ವರ ಕಾಲೇಜಿನಲ್ಲಿ ಓದುತ್ತಿರುವಾಗಲೆ ಅವರಿಗೆ ರಾಜಕೀಯ ಹುಚ್ಚಿನಿಂದ ಬಂಗಾರಪ್ಪ ಅವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಮಟ್ಟದಲ್ಲಿ ಸಂಘಟನೆ ಪ್ರಾರಂಭಮಾಡಿದರು.

ಇವರ ಕುಟುಂಬ ಕಾಂಗ್ರೆಸ್‌ಗೆ ಸೀಮಿತವಾಗಿದ್ದರೂ ಇವರ ತಂದೆ ಆಸೆ ಬೇರೆನೆ ಆಗಿತ್ತು. ಶಿಕ್ಷಣ ಪೂರೈಸಿ ಸರ್ಕಾರಿ ನೌಕರಿ ಮಾಡಬೇಕೆಂದು ಬಯಸಿದ್ದರು. ಆದರೆ, ರಾಜಕೀಯ ಸೆಳೆತಕ್ಕೆ ಸಿಲುಕಿದ ಅವರು 1985ರಲ್ಲಿ ಯರಗುಪ್ಪಿ ಗ್ರಾಮದಲ್ಲಿ ವರನಟ ಡಾ.ರಾಜ್‌ಕುಮಾರ್ ಅಭಿಮಾನಿ ಬಳಗ ಸ್ಥಾಪನೆ ಮಾಡಿ 10 ವರ್ಷ ಕಾಲ ಅಧ್ಯಕ್ಷರಾಗಿ ಅನೇಕ ಜನಪರ ಹೋರಾಟ ಮಾಡುತ್ತ ಬಂದರು. 1994ರಲ್ಲಿ ಬಂಗಾರಪ್ಪ ಅವರ ಕರ್ನಾಟಕ ಕಾಂಗ್ರೆಸ್‌ ಅಧ್ಯಕ್ಷರಾಗಿ ವಿಧಾನ ಸಭೆ ಕಣಕ್ಕೆ ಇಳಿದು 19700 ಮತಗಳನ್ನು ಪಡೆದು 2 ನೇ ಸ್ಥಾನಕ್ಕೆ ಬಂದಿದ್ದರು. ಇಷ್ಟಕ್ಕೆ ಛಲಬಿಡದಅವರುಸಂಘಟನೆಯನ್ನು ಮತ್ತಷ್ಟು ಹೆಚ್ಚಿಸಿಕೊಂಡರು. 1999ರಲ್ಲಿ ಪಕ್ಷೇತರರಾಗಿ (ಚಕ್ಕಡಿ) ಸ್ಪರ್ಧಿಸಿ 11 ಸಾವಿರ ಮತಗಳಿಂದ ಜಯ ಸಾಧಿಸಿದರು.

ನಂತರ ಕಾಂಗ್ರೆಸ್‌ ಸೇರ್ಪಡೆಗೊಂಡುತಮ್ಮ ಅಧಿಕಾರ ಅವಧಿಯಲ್ಲಿ ಬರಗಾಲ ಕಾಮಗಾರಿ ಪ್ರಾರಂಭಿಸಿ ಜನರಿಗೆ ಉದ್ಯೋಗ ಕಲ್ಪಿಸುವಲ್ಲಿ ಯಶಸ್ವಿಯಾಗಿದ್ದರು. ನಂತರ, 2008ರಲ್ಲಿ ಮತ ಕ್ಷೇತ್ರದ ಗ್ರಾಮಗಳ ವಿಂಗಡಣೆಗೊಂಡಾಗ ಕಾಂಗ್ರೆಸ್‌ನಿಂದ ಸ್ಪರ್ಧಿಸಿ 6300 ಮತಗಳಿಂದ ಸೋಲುಂಡ‌ರು.

ತಮ್ಮ ಸಂಘಟನೆಯನ್ನು ಬಿಡದೆ ಜನಪರ ಹೋರಾಟ ಮುಂದುವರೆಸಿ 2013ರಲ್ಲಿ ಮತ್ತೆ ಕಾಂಗ್ರೆಸ್‌ನಿಂದ ಬಹುದೊಡ್ಡ ಅಂತರದಿಂದ ಜಯ ಸಾಧಿಸಿದರು. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಯೋಜನೆಗಳನ್ನು ತಾಲ್ಲೂಕಿನಲ್ಲಿ ಅನುಷ್ಠಾನಗೊಳಿಸುವಲ್ಲಿ ಯಶಸ್ವಿಯಾಗಿದ್ದು, ನೆರವು ಕೇಳಿ ಬಂದವರಿಗೆವೈಯಕ್ತಿಕವಾಗಿ ಸಹಾಯ ಮಾಡುವುದರೊಂದಿಗೆ ಬಡವರಿಗೆ ಆಶ್ರಯ ಮನೆ, ಕುಡಿಯುವ ನೀರಿನ ವ್ಯವಸ್ಥೆ, ಶುದ್ಧನೀರಿನ ಘಟಕ, ರಸ್ತೆ ನಿರ್ಮಾಣ, ಮುಖ್ಯಮಂತ್ರಿ ಪರಿಹಾರ ನಿಧಿ ಕೊಡಿಸುವಲ್ಲಿ ಸತತವಾಗಿ ಶ್ರಮಿಸಿದ್ದು ಸರ್ಕಾರದಿಂದ ಬಂದ ಎಲ್ಲಾ ಯೋಜನೆಗಳನ್ನು ಸಕಾರಾತ್ಮಕವಾಗಿ ಜನರಿಗೆ ತಲುಪಿಸುವಲ್ಲಿ ಯಶಸ್ವಿಯಾಗಿದ್ದರು.

ಮಹಾದಾಯಿ ನೀರಿನ ಹೋರಾಟಕ್ಕಾಗಿ ಕಣಕುಂಬಿ ಹಾಗೂ ದೆಹಲಿಯ ಜಂತರ್-ಮಂತರ್‌ನಲ್ಲಿ ಕ್ಷೇತ್ರದ ಜನರನ್ನು ಕರೆದೊಯ್ದುಹೋರಾಟ ನಡೆಸಿದರು. ಬಡವರ ಬಂಧು ಎಂದೇ ತಾಲ್ಲೂಕಿನಲ್ಲಿ ಹೆಸರು ಮಾಡಿದರು. ಈ ಭಾರಿ 2018ರ ಚುನಾವಣೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ನ ನೇರ ಹಣಾಹಣಿಯಲ್ಲಿ ಕೆವಲ 634 ಮತಗಳ ಅಂತರದಿಂದ ಜಯ ಸಾಧಿಸಿದ್ದು, ಕ್ಷೇತ್ರದ ಜನಮತ್ತೊಮ್ಮೆ ಶಿವಳ್ಳಿ ಅವರನ್ನು ಎತ್ತಿಹಿಡಿದರು.

‘ಜನರ ‍ಪ್ರೀತಿಯ ಫಲವಾಗಿಯೇ ನಾನು ಮಂತ್ರಿ ಯಾಗುತ್ತಿದ್ದೇನೆ. ಯಾವುದೇಪದವಿ ಕೊಟ್ಟರು ಸಮರ್ಥಕವಾಗಿ ನಿರ್ವಹಿಸುತ್ತೇನೆ. ಕ್ಷೇತ್ರದ ಅಭಿವೃದ್ಧಿಗಾಗಿ ಹೊಸ ಹೊಸ ಯೋಜನೆಗಳನ್ನು ತಂದು ಸಮಗ್ರ ಅಭಿವೃದ್ಧಿಗೆ ನಾಂದಿ ಹಾಡುತ್ತೇನೆ’ ಎಂದು ತಮ್ಮ ಮನದಾಳದ ಮಾತನ್ನು ವ್ಯಕ್ತಪಡಿಸುವುದರೊಂದಿಗೆ ‘ನಮ್ಮ ಕ್ಷೇತ್ರದ ಜನತೆಗೆ ನಾನು ಯಾವತ್ತು ಚಿರಋಣಿಯಾಗಿರುತ್ತೇನೆ. ಇದು ಜನ ಕೊಟ್ಟ ಕೊಡುಗೆ’ ಎಂದು ಶಿವಳ್ಳಿ ಭಾವುಕರಾಗಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT