ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಕ್ತರಿಗೆ ದೂರದಿಂದಲೇ ಸಿದ್ಧಗಂಗಾಶ್ರೀ ದರ್ಶನಕ್ಕೆ ಅವಕಾಶ

Last Updated 16 ಜನವರಿ 2019, 16:09 IST
ಅಕ್ಷರ ಗಾತ್ರ

ತುಮಕೂರು: ಹಳೇಮಠದಲ್ಲಿ ಕೊಠಡಿಯಲ್ಲಿರುವ ಡಾ.ಶಿವಕುಮಾರ ಸ್ವಾಮೀಜಿ ಅವರನ್ನು ದೂರದಿಂದಲೇ ದರ್ಶನ ಮಾಡಲು ಬುಧವಾರ ಸಂಜೆ ಅವಕಾಶ ಮಾಡಿಕೊಡಲಾಯಿತು.

ಬೆಳಿಗ್ಗೆಯಿಂದಲೇ ಭಕ್ತರು, ಮಠದ ವಿದ್ಯಾರ್ಥಿಗಳು, ಸಿಬ್ಬಂದಿ ಸ್ವಾಮೀಜಿ ದರ್ಶನಕ್ಕೆ ಕಾದಿದ್ದರು. ಸಂಜೆ ಭಕ್ತರ ಮನವಿ, ಅವರ ಸಂಖ್ಯೆ ಹೆಚ್ಚಾದಾಗ ಹಳೇ ಮಠದ ಹಿಂಭಾಗದಲ್ಲಿರುವ ಕಿಟಕಿ ಮೂಲಕ ಸ್ವಾಮೀಜಿ ಅವರನ್ನು ದೂರದಿಂದಲೇ ದರ್ಶನ ಮಾಡಲು ಅವಕಾಶ ಕೊಡಲಾಯಿತು.

ಭಕ್ತರೂ ನೂಕುನುಗ್ಗಲಿಗೆ ಅವಕಾಶ ಕೊಡದೇ ಸಾಲುಗಟ್ಟಿ ನಿಂತು ದರ್ಶನ ಪಡೆದರು. ಡಿಸೆಂಬರ್‌ 2ರಂದು ಸ್ವಾಮೀಜಿ ತೀವ್ರ ಅನಾರೋಗ್ಯಕ್ಕೀಡಾದ ಬಳಿಕ ಮಠದಲ್ಲಿ ಸ್ವಾಮೀಜಿ ಅವರ ದರ್ಶನ ಭಾಗ್ಯ ಭಕ್ತರಿಗೆ ಲಭಿಸಿರಲಿಲ್ಲ. ಬುಧವಾರ ಸಂಜೆ ಮತ್ತೆ ಈ ದರ್ಶನ ವ್ಯವಸ್ಥೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT