ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುರಾನ್ ಓದುವ ಬಾಲೆ ಸಿಮ್ರಾನ್

Last Updated 10 ಮೇ 2019, 15:22 IST
ಅಕ್ಷರ ಗಾತ್ರ

ಶಿರಸಿ: ತಾಲ್ಲೂಕಿನ ದಾಸನಕೊಪ್ಪದಲ್ಲಿ ಪುಟಾಣಿ ಬಾಲಕಿಯೊಬ್ಬಳು ನಿತ್ಯ ಕುರಾನ್ ಓದುವ ಹವ್ಯಾಸ ರೂಢಿಸಿಕೊಳ್ಳುವ ಮೂಲಕ ಅಚ್ಚರಿ ಮೂಡಿಸಿದ್ದಾಳೆ.

ಇಲ್ಲಿನ ಯುನಿವರ್ಸಲ್ ಫ್ರೆಂಡ್‌ಷಿಪ್ ಸ್ಕೂಲ್‌ನ ವಿದ್ಯಾರ್ಥಿನಿ ಸಿಮ್ರಾನ್, ಪ್ರತಿದಿನ ಒಂದು ತಾಸು ಸುಮಾರು ಕುರಾನ್ ಓದಿಯೇ ಶಾಲೆಗೆ ಹೋಗುತ್ತಾಳೆ. ಆರು ಮುಕ್ಕಾಲು ವರ್ಷದ ಸಿಮ್ರಾನ್ ಅರೆಬಿಕ್ ಭಾಷೆಯಲ್ಲಿರುವ ಕುರಾನ್ ಓದುವುದು ಮನೆಯ ಸದಸ್ಯರಲ್ಲಿ ಸಂತಸ ತಂದಿದೆ. ಈಕೆ ಆಯಿಷಾ ಮತ್ತು ಸಿಕಂದರ್ ದಂಪತಿ ಪುತ್ರಿ.

‘ನನ್ನ ಅಮ್ಮ ಕುರಾನ್ ಓದುತ್ತಿದ್ದರು. ಅವರೀಗ ಬದುಕಿಲ್ಲ. ನಂತರದ ತಲೆಮಾರಿನಲ್ಲಿ ನಮ್ಮ ಮನೆಯಲ್ಲಿ ಯಾರೂ ಕುರಾನ್ ಓದುವವರು ಇರಲಿಲ್ಲ. ಅರೆಬಿಕ್‌ನಲ್ಲಿರುವ ಈ ಗ್ರಂಥ ಓದಲು ಬಲು ಕಠಿಣ. ಇಲ್ಲೇ ಸಮೀಪದಲ್ಲಿ ಮೌಲಾನಾ ಒಬ್ಬರು ನಡೆಸುವ ತರಗತಿಗೆ ಹೋಗುತ್ತಿದ್ದ ಸಿಮ್ರಾನ್ ಅಲ್ಲಿ ಹೊಸ ಭಾಷೆಯನ್ನು ಕಲಿತು, ಈಗ ಮನೆಯಲ್ಲಿ ಓದಲು ಆರಂಭಿಸಿದ್ದಾಳೆ. ರಂಜಾನ್ ತಿಂಗಳಿನಲ್ಲಿ ರೋಜಾವನ್ನು ಸಹ ಮಾಡುತ್ತಾಳೆ’ ಎನ್ನುತ್ತಾರೆ ಆಕೆಯ ಅಜ್ಜ ಅಂಚೆ ಕಚೇರಿಯಲ್ಲಿ ಕೆಲಸ ಮಾಡುತ್ತಿರುವ ಎಂ.ಎ.ಮಿಟೇಗಾರ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT