ಸೋಮವಾರ, ಆಗಸ್ಟ್ 2, 2021
20 °C

ಕ್ರಿಸ್‍ಮಸ್, ಹೊಸ ವರ್ಷಾಚರಣೆಗೆ ವಂಡರ್‌ಲಾ ವಿಶೇಷ ಕೊಡುಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕ್ರಿಸ್‍ಮಸ್ ಹಾಗೂ ಹೊಸ ವರ್ಷಾಚರಣೆಯನ್ನು ವಿಭಿನ್ನವಾಗಿ ಆಚರಿಸುವ ಸಲುವಾಗಿ ಮಂಗಳೂರು ಡಾಲ್ ಡಾನ್ಸ್, ನಾಸಿಕ್ ಬ್ಯಾಂಡ್, ಆಹಾರ ಮೇಳ ಮತ್ತು ಕಾರ್ನಿವಲ್ ಅನ್ನು ವಂಡರ್‌ ಲಾದಲ್ಲಿ ಜನವರಿ 1ರವರೆಗೆ ಆಯೋಜಿಸಲಾಗಿದೆ.

ಕ್ರಿಸ್‌ಮಸ್ ಹಾಗೂ ಹೊಸ ವರ್ಷದ ಕೊಡುಗೆಯಾಗಿ ಆನ್‌ಲೈನ್‌ನಲ್ಲಿ ಟಿಕೆಟ್ ಬುಕ್ ಮಾಡುವವರಿಗೆ ಶೇಕಡ 10ರಷ್ಟುರಿಯಾಯಿತಿಯನ್ನು ವಂಡರ್‌ ಲಾ ಘೋಷಿಸಿದೆ. ಒಂದು ರಾತ್ರಿ ವಾಸ್ತವ್ಯದ, ಕಾಕ್ಟೇಲ್, ಭೋಜನ, ವಿನೋದ ಆಟಗಳು, ಪಟಾಕಿ ಪ್ರದರ್ಶನದ ವಿಶೇಷ ಪ್ಯಾಕೇಜ್ ಅನ್ನು ಸಹ ನೀಡಲಾಗಿದೆ.

ವಂಡರ್‌ಲಾ ಮುಖ್ಯಸ್ಥ ಎಂ.ಬಿ. ಮಹೇಶ್, ‘ಕ್ರಿಸ್‍ಮಸ್ ಮತ್ತು ಹೊಸ ವರ್ಷವನ್ನು ಸಾಮಾನ್ಯ ಸಂಭ್ರಮಾಚರಣೆಗಿಂತ ವಿಭಿನ್ನವಾಗಿ ಆಚರಿಸುವ ಸಂಪ್ರದಾಯದತ್ತ ಯುವ ಸಮುದಾಯವು ಈಚೆಗೆ ಎದುರು ನೋಡುತ್ತಿದೆ. ಯುವಕ–ಯುವತಿಯರು ಇಷ್ಟ ಪಡುವಂತಹ ವಾತಾವರಣವನ್ನು ನಮ್ಮ ಅಮ್ಯೂಸ್‌ಮೆಂಟ್ ಪಾರ್ಕ್‍ನಲ್ಲಿ ಸೃಷ್ಟಿಸಲಾಗಿದ್ದು, ವಂಡರ್‌ಲಾಗೆ ಭೇಟಿ ನೀಡಿ ತಾವು ಅಂದು ಕೊಂಡತೆ ಅವರು ಈ ಬಾರಿ ಸಂಭ್ರಮ ಮಾಡಬಹುದು’ ಎಂದರು.

ಇಲ್ಲಿ, ಥ್ರಿಲ್ ರೈಡ್‍ಗಳ ಅನುಭವಕ್ಕಾಗಿ ನಿಗದಿತ ಡ್ರೆಸ್ ಕೋಡ್‍ಗಳಿವೆ. ಪರಿಸರ ಕಾಳಜಿ ಹಾಗೂ ಅತಿಥಿಯ ಸುರಕ್ಷತೆ ದೃಷ್ಟಿಯಿಂದ ವಾಟರ್ ರೈಡ್‍ಗಳು ಮತ್ತು ಹೈ ಥ್ರಿಲ್ ರೈಡ್‍ಗಳಿಗೆ ಡ್ರೆಸ್ ಕೋಡ್ ಕಡ್ಡಾಯ ಮಾಡಲಾಗಿದೆ. ನೈಲಾನ್ ಹಾಗೂ ಸಿಂಥೆಟಿಕ್ ಬಟ್ಟೆಗಳನ್ನು ಜನರು ಬಳಸಬೇಕಿದ್ದು, ಅವುಗಳನ್ನು ಮನೆಗಳಿಂದ ತರಬಹುದು ಅಥವಾ ಪಾರ್ಕ್‌ನಲ್ಲಿಯೇ ಖರೀದಿಸಬಹುದು.

ಹೆಚ್ಚಿನ ಮಾಹಿತಿಗೆ: www.wonderla.com

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು