ಶನಿವಾರ, ಜನವರಿ 18, 2020
19 °C
ಜಿಲ್ಲಾ 16ನೇ ಕನ್ನಡ ಸಾಹಿತ್ಯ ಸಮ್ಮೇಳನ ಇಂದಿನಿಂದ

ಅಕ್ಷರ ಜಾತ್ರೆಗೆ ಶೃಂಗೇರಿ ಸಜ್ಜು

ರಾಘವೇಂದ್ರ ಕೆ.ಎನ್. Updated:

ಅಕ್ಷರ ಗಾತ್ರ : | |

Prajavani

ಶೃಂಗೇರಿ: ತುಂಗಾ ನದಿ ತಟದಲ್ಲಿರುವ ಶೃಂಗೇರಿಯ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ಜಿಲ್ಲಾ 16ನೇ ಕನ್ನಡ ಸಾಹಿತ್ಯ ಸಮ್ಮೇಳನ ಇದೇ 10ರಿಂದ ನಡೆಯುತ್ತಿದ್ದು, ಈ ನಿಟ್ಟಿನಲ್ಲಿ ಅಂತಿಮ ಸಿದ್ಧತೆಗಳು ನಡೆದಿದೆ.

ಬೆಳಿಗ್ಗೆ 7.30ಕ್ಕೆ ಕವಿ ಎಸ್.ವಿ.ಪರಮೇಶ್ವರ ಭಟ್ಟ ಮಹಾದ್ವಾರದ ಉದ್ಘಾಟನೆಯನ್ನು ಕೊಪ್ಪದ ಪ್ರಗತಿಪರ ಕೃಷಿಕ ಕೌರಿಪ್ರಕಾಶ್ ನೆರವೇರಿಸುವರು. ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಎ.ಎಸ್.ನಾಗೇಶ್, ಶಂಕರಪ್ಪ ಬಿ.ವಿ ಉಪಸ್ಥಿತರಿರುವರು. ರಾಷ್ಟ್ರಧ್ವಜ, ನಾಡಧ್ವಜ, ಕನ್ನಡ ಸಾಹಿತ್ಯ ಪರಿಷತ್ತಿನ ಧ್ವಜಾರೋಹಣವನ್ನು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಅಶೋಕ್ ಕುಂದೂರು ನೆರವೇರಿಸುತ್ತಾರೆ.

10.30ಕ್ಕೆ ಸಮಾರಂಭದ ಉದ್ಘಾಟನೆ ನಡೆಯಲಿದ್ದು, ವಿಧಾನ ಪರಿಷತ್ತಿನ ಉಪ ಸಭಾಪತಿ ಎಸ್.ಎಲ್.ಧರ್ಮೇಗೌಡ, ಶಾಸಕ ಟಿ.ಡಿ.ರಾಜೇಗೌಡ, ಸಾಹಿತಿ ಕುಂ.ವೀರಭದ್ರಪ್ಪ, ಸಮ್ಮೇಳನದ ನಿಕಟಪೂರ್ವ ಅಧ್ಯಕ್ಷ ಡಾ.ಡಿ.ಎಸ್.ಜಯಪ್ಪಗೌಡ, ಸಮ್ಮೇಳನಾಧ್ಯಕ್ಷ ಕಲ್ಕುಳಿ ವಿಠಲ ಹೆಗ್ಡೆ ಮುಂತಾದವರು ಭಾಗವಹಿಸಲಿದ್ದಾರೆ.

ಮೊದಲನೇ ಗೋಷ್ಠಿ ಮಧ್ಯಾಹ್ನ 2 ಗಂಟೆಗೆ ಪ್ರಾರಂಭಗೊಳ್ಳಲಿದ್ದು, ‘ನಮ್ಮ ಊರು-ನಮ್ಮ ಲೇಖಕರು’ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಾಂಸ್ಕೃತಿಕ ಚಿಂತಕರಾದ ಎಚ್.ಎಂ.ರುದ್ರಸ್ವಾಮಿ ವಹಿಸುತ್ತಾರೆ. ಗೋಷ್ಠಿಯಲ್ಲಿ ಅಜ್ಜಂಪುರ ಜಿ.ಸೂರಿ ಸಾಹಿತ್ಯವನ್ನು ರವೀಶ್ ಕ್ಯಾತನಬೀಡು, ಕಲ್ಕುಳಿ ವಿಠಲ ಹೆಗಡೆ ಸಾಹಿತ್ಯವನ್ನು ಡಾ.ಸತ್ಯನಾರಾಯಣ, ಡಾ.ಬೆಳವಾಡಿ ಮಂಜುನಾಥ ಸಾಹಿತ್ಯವನ್ನು ಡಾ.ಎಚ್.ಎಂ.ಮಹೇಶ್‍ ಅವರು ಅನುಕ್ರಮವಾಗಿ ಮಾತನಾಡಲಿದ್ದು, ವಿವಿಧ ಗಣ್ಯರು ಸಭೆಯಲ್ಲಿ ಭಾಗವಹಿಸುತ್ತಾರೆ.

ಗೋಷ್ಠಿ 2ರಲ್ಲಿ ‘ಕೃಷಿ ಮತ್ತು ಪರಿಸರ’ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾಜಿ ಶಾಸಕ ವೈ.ಎಸ್.ವಿ.ದತ್ತ ವಹಿಸಲಿದ್ದಾರೆ. ‘ಮಲೆನಾಡು ಕೃಷಿಗಿರುವ ಸವಾಲುಗಳು ಮತ್ತು ಆತಂಕ’ ಎಂಬ ವಿಷಯದ ಕುರಿತು ಮೂಡಿಗೆರೆ ಕೃಷಿಕರಾದ ರಮೇಶ್ ಹಳೇಕೋಟೆ, ‘ಪ್ರಕೃತಿ ವಿಕೋಪ ಮತ್ತು ಜಿಲ್ಲೆಯ ಜನರ ಆತಂಕಗಳು’ ವಿಷಯಗಳ ಕುರಿತು ಹಾಸನದ ಪರಿಸರವಾದಿ ಎಚ್.ಎ.ಕಿಶೋರ್‌ಕುಮಾರ್ ಮಾತನಾಡಲಿದ್ದಾರೆ.

ಶನಿವಾರ ಬೆಳಿಗ್ಗೆ 9.30ಕ್ಕೆ ನಡೆಯುವ ಕವಿಗೋಷ್ಠಿಯಲ್ಲಿ ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಸಾಹಿತಿ ಡಾ.ಎಲ್.ಸಿ ಸುಮಿತ್ರ ವಹಿಸಲಿದ್ದಾರೆ. ಲೇಖಕಿ ದೀಪಾ ಹಿರೇಗುತ್ತಿ, ಬೆಂಗಳೂರು ಕವಿಯತ್ರಿ ನಳಿನಾ ಮತ್ತು ಜಿಲ್ಲೆಯ ಹಲವಾರು ಕವಿಗಳು ಕವಿತೆಯನ್ನು ವಾಚಿಸುತ್ತಾರೆ.

ಮಧ್ಯಾಹ್ನ 12 ಗಂಟೆಗೆ ಗೋಷ್ಠಿ-4 ರಲ್ಲಿ ‘ಕನ್ನಡ ನಾಡು-ನುಡಿ’ ಇದರ ಅಧ್ಯಕ್ಷತೆಯನ್ನು ಆದಿಚುಂಚನಗಿರಿ ವಿಶ್ವವಿದ್ಯಾಲಯ ಕುಲ ಸಚಿವರಾದ ಡಾ.ಸಿ.ಕೆ.ಸುಬ್ಬರಾಯ ವಹಿಸುತ್ತಾರೆ. ‘ಕನ್ನಡ -ಸದ್ಯದ ಪರಿಸ್ಥಿತಿ’ ವಿಷಯದ ಕುರಿತು ಸಾಹಿತಿ ಡಾ.ಬೆಳವಾಡಿ ಮಂಜುನಾಥ್ ಮತ್ತು ‘ಕನ್ನಡದ ಬೆಳವಣಿಗೆಗೆ ಇರುವ ಸಾಧ್ಯತೆಗಳು ಮತ್ತು ಸವಾಲುಗಳು’ ವಿಷಯದ ಕುರಿತು ಲೇಖಕ ಬೆಂಗಳೂರಿನ ಕೆ.ರಾಜಕುಮಾರ್  ಭಾಗವಹಿಸಲಿದ್ದಾರೆ.

ಮಧ್ಯಾಹ್ನ 2 ಗಂಟೆಗೆ ಗೋಷ್ಠಿ-5ರಲ್ಲಿ ಹಾಸ್ಯದ ಹೊನಲು ನಡೆಯಲಿದ್ದು, ಹಾಸನದ ಎಚ್.ಎನ್.ಮಲ್ಲೇಶ್ ಗೌಡರ ಅಧ್ಯಕ್ಷತೆ ವಹಿಸಲಿದ್ದಾರೆ. ‘ಜನಪದ ಸಾಹಿತ್ಯದಲ್ಲಿ ಹಾಸ್ಯ’ ಎಂಬ ವಿಷಯದ ಕುರಿತು ಚಟ್ನಳ್ಳಿ ಮಹೇಶ್ ಹಾಗೂ ‘ಸಾಹಿತ್ಯದಲ್ಲಿ ನವಿರು ಹಾಸ್ಯ’ ಎಂಬ ವಿಷಯದ ಕುರಿತು ಸಾಹಿತಿ ಎನ್.ರಾಮನಾಥ್ ಮಾತನಾಡಲಿದ್ದಾರೆ.

ಸಂಜೆ 4 ಗಂಟೆಗೆ ‘ಕಲ್ಕುಳಿ ವಿಠಲ ಹೆಗ್ಡೆ ಅವರ ಬದುಕು-ಬರಹ-ಹೋರಾಟದ’ ವಿಷಯದ ಕುರಿತು ಸಂವಾದ ಕಾರ್ಯಕ್ರಮ ನೆಡೆಯಲಿದೆ. ಶಿವಮೊಗ್ಗದ ಅಂಕಣಕಾರ ಬಿ.ಚಂದ್ರೇಗೌಡ ಪ್ರವೇಶ ನುಡಿ ಆಡಲಿದ್ದಾರೆ. ಜಿಲ್ಲೆಯ ಹಲವಾರು ಚಿಂತಕರು ಸಂವಾದ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಾರೆ.

ಸಂಜೆ 5ಕ್ಕೆ ಬಹಿರಂಗ ಅಧಿವೇಶನ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಆಶೋಕ್ ಕುಂದೂರು ಅವರ ನೇತೃತ್ವದಲ್ಲಿ ನಡೆಯಲಿದೆ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‍ನ ಪ್ರಧಾನ ಸಂಚಾಲಕ ಎಂ.ಆರ್.ಪ್ರಕಾಶ್ ನಿರ್ಣಯ ಮಂಡಿಸುತ್ತಾರೆ.

ಸಂಜೆ 5.30ಕ್ಕೆ ಸಮಾರೋಪ ಭಾಷಣವನ್ನು ಶಿವಮೊಗ್ಗ ಸಾಹಿತಿ ಶ್ರೀಕಂಠ ಕೂಡಿಗೆ ನೆರವೇರಿಸಿತ್ತಾರೆ, ಜಿಲ್ಲೆಯ ಹಲವಾರು ಗಣ್ಯರು ಸಮಾರೋಪ ಕಾರ್ಯಕ್ರಮದಲ್ಲಿ ಇರುತ್ತಾರೆ.

ಸಂಜೆ 6.30ಕ್ಕೆ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ತರೀಕೆರೆ ಸಾಹಿತಿ ಡಾ.ರಾಜಪ್ಪ ದಳವಾಯಿ ಅವರ ಗೌರವ ಉಪಸ್ಥಿತಿಯಲ್ಲಿ ‘ಜಿಲ್ಲಾ ಸಾಹಿತ್ಯ ಸಿರಿ ಪ್ರಶಸ್ತಿ’ ನೀಡಿ ಗೌರವಿಸಲಾಗುತ್ತದೆ. ಸಮ್ಮೇಳನದಲ್ಲಿ ವಿವಿಧ ಸಾಹಿತಿಗಳು ಬರೆದ ಪುಸ್ತಕಗಳು ಬಿಡುಗಡೆಗೊಳಿಸಲಿದ್ದಾರೆ. ಎರಡು ದಿನಗಳ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಕುಂದಾಪುರದ ರೂಪಕಲಾ ನಾಟಕ ಸಂಸ್ಥೆಯ ‘ಮೂರು ಮುತ್ತುಗಳು’, ಸ್ಥಳೀಯ ಆಯ್ದ ಶಾಲಾ ಮಕ್ಕಳಿಂದ ಹಾಗೂ ಸ್ಥಳೀಯ ಕಲಾವಿದರಿಂದ ಸಾಂಸ್ಕೃತಿಕ ವೈಭವ ಕಾರ್ಯಕ್ರಮ ನೆರವೇರಲಿದೆ.

ಸಮ್ಮೇಳನ ಊಟ ವ್ಯವಸ್ಥೆ; ಶಾರದಾ ‍ಪೀಠ ಸಾಥ್‌

ಕಾಫಿನಾಡಿನ ತುಂಗಾ ನದಿ ತಟದ ಶೃಂಗೇರಿಯಲ್ಲಿ ಆಯೋಜಿಸಿರುವ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಶಾರದಾ ‍ಪೀಠದವರು ಊಟ ವ್ಯವಸ್ಥೆಗೆ ನೆರವು ನೀಡಿದ್ದಾರೆ.

ಶಾರದಾಂಬೆ ನೆಲೆಸಿರುವ ಊರಿನಲ್ಲಿ ನಡೆಯುತ್ತಿರುವ ಕನ್ನಡ ಜಾತ್ರೆ ಶಾರದಾ ಪೀಠದವರು ಸಾಥ್‌ ನೀಡಿದ್ದಾರೆ. ಊಟಕ್ಕೆ ಬೇಕಿರುವ ದಿನಸಿಯನ್ನು ಕಳಿಸಿಕೊಟ್ಟು ಸಮ್ಮೇಳನದ ಯಶಸ್ವಿಗೆ ಹೆಗಲು ನೀಡಿದ್ದಾರೆ.

‘ಸಂಘಟಕರು ನೀಡಿದ್ದ ಪಟ್ಟಿಯಲ್ಲಿನ ಎಲ್ಲ ಪದಾರ್ಥಗಳನ್ನು ಮಠದವರು ಕಳಿಸಿದ್ದಾರೆ. ಸಮ್ಮೇಳನಕ್ಕೆ ದಾನಿಗಳಿಂದ ಧನ ಸಹಾಯ ಹರಿದುಬಂದಿದೆ. ಹಣಕಾಸಿನ ಸಮಸ್ಯೆ ಇಲ್ಲ’ ಎಂದು ಪರಿಷತ್ತಿನ

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು