ಡಿ ಗ್ರೂಪ್ ನೌಕರಿಗೆ ಎಸ್ಸೆಸ್ಸೆಲ್ಸಿ ಕಡ್ಡಾಯ

ಭಾನುವಾರ, ಜೂಲೈ 21, 2019
27 °C

ಡಿ ಗ್ರೂಪ್ ನೌಕರಿಗೆ ಎಸ್ಸೆಸ್ಸೆಲ್ಸಿ ಕಡ್ಡಾಯ

Published:
Updated:

ಬೆಂಗಳೂರು: ಇನ್ನು ಮುಂದೆ ಡಿ ಗ್ರೂಪ್‌ನ ಸರ್ಕಾರಿ ನೌಕರರ ನೇಮಕಾತಿಗೆ ಎಸ್ಸೆಸ್ಸೆಲ್ಸಿ ಕಡ್ಡಾಯವಾಗಲಿದ್ದು, ಸಿ ಗ್ರೂಪ್‌ನ ನೌಕರರ ನೇಮಕಾತಿಗೆ ಲಿಖಿತ ಪರೀಕ್ಷೆಯಷ್ಟೇ ಮಾನದಂಡವಾಗಲಿದೆ.

ಕರ್ನಾಟಕ ನಾಗರಿಕ ಸೇವೆ (ಸಾಮಾನ್ಯ ನೇಮಕಾತಿ) ನಿಯಮಗಳಿಗೆ ತಿದ್ದುಪಡಿ ತಂದಿರುವ ರಾಜ್ಯ ಸರ್ಕಾರ ಈ ಬಗ್ಗೆ ಅಧಿಸೂಚನೆ ಹೊರಡಿಸಿದೆ.

7ನೇ ತರಗತಿಗೆ ಪಬ್ಲಿಕ್ ಪರೀಕ್ಷೆ ಇಲ್ಲವಾದ ಕಾರಣದಿಂದ ಇದೀಗ ಡಿ ಗ್ರೂಪ್‌ಗೆ ಎಸ್ಸೆಸ್ಸೆಲ್ಸಿಯನ್ನು ಕಡ್ಡಾಯಗೊಳಿಸಲಾಗಿದೆ. ಸಿ ಗ್ರೂಪ್‌ ಸಿಬ್ಬಂದಿ ನೇಮಕಾತಿ ವೇಳೆ ಮೌಖಿಕ ಸಂದರ್ಶನ ಅಕ್ರಮಗಳಿಗೆ ಮೂಲವಾಗಬಹುದು ಎಂಬ ಕಾರಣಕ್ಕೆ ಲಿಖಿತ ಪರೀಕ್ಷಾ ಫಲಿತಾಂಶವನ್ನಷ್ಟೇ ಪರಿಗಣಿಸಲು ತೀರ್ಮಾನಿಸಲಾಗಿದೆ.

ಈ ಹಿಂದೆ ಪ್ರೊಬೆಷನರಿ ಅವಧಿಯನ್ನು ಒಂದು ಇಲಾಖೆಯಲ್ಲಿ ಪೂರೈಸಿದವರು ಇನ್ನೊಂದು ಇಲಾಖೆಗೆ ಹೋದಾಗ ಮತ್ತೆ ಒಂದು ವರ್ಷ ಪ್ರೊಬೆಷನರಿ ಮುಗಿಸಿದರೆ ಸಾಕಿತ್ತು. ಆದರೆ, ಈಗ ಇನ್ನೊಂದು ಇಲಾಖೆಯಲ್ಲೂ ಕಡ್ಡಾಯವಾಗಿ ಎರಡು ವರ್ಷ ಪ್ರೊಬೆಷನರಿ ಅವಧಿ ಪೂರೈಸಲೇಬೇಕು.

ಪ್ರೊಬೆಷನರಿ ಅವಧಿಯಲ್ಲಿ ಕೆಲವೊಂದು ಪರೀಕ್ಷೆಗಳನ್ನು ಅಥವಾ ಅರ್ಹತೆಗಳನ್ನು ಪಡೆಯುವುದಕ್ಕೆ ಇದ್ದ ಒಂದು ವರ್ಷದ ಹೆಚ್ಚುವರಿ ಅವಕಾಶವನ್ನು ಐದು ವರ್ಷಕ್ಕೆ ವಿಸ್ತರಿಸಲಾಗಿದೆ. ಅಷ್ಟರೊಳಗೆ ಪೂರೈಸದಿದ್ದರೆ ಕೆಲಸದಿಂದ ತೆಗೆದು ಹಾಕಲು ಅವಕಾಶ ಕಲ್ಪಿಸಲಾಗಿದೆ.

ಬರಹ ಇಷ್ಟವಾಯಿತೆ?

 • 15

  Happy
 • 1

  Amused
 • 0

  Sad
 • 1

  Frustrated
 • 0

  Angry

Comments:

0 comments

Write the first review for this !