ಬುಧವಾರ, ಏಪ್ರಿಲ್ 1, 2020
19 °C
ಕೊರೊನಾ ಭೀತಿ: ಪೋಷಕರಲ್ಲಿ ಗೊಂದಲ

ಎಸ್ಸೆಸ್ಸೆಲ್ಸಿ: ಜ್ವರ ಕೆಮ್ಮು ಇದ್ದರೆ ಪ್ರತ್ಯೇಕ ಕೊಠಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಎಸ್ಸೆಸ್ಸೆಲ್ಲಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಜ್ವರ, ಕೆಮ್ಮು, ನೆಗಡಿಯ ಲಕ್ಷಣ ಇದ್ದರೆ ಅವರಿಗೆ ಪ್ರತ್ಯೇಕ ಕೊಠಡಿಯಲ್ಲಿ ಪರೀಕ್ಷೆ ಬರೆಯುವುದಕ್ಕೆ ಅವಕಾಶ ನೀಡಲಾಗುವುದು, ಅಗತ್ಯ ಇದ್ದವರು ಮುಖಗವಸು ಧರಿಸಿ ಪರೀಕ್ಷೆ ಬರೆಯಬಹುದು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರು ಬುಧವಾರ ಸುತ್ತೋಲೆಯಲ್ಲಿ ತಿಳಿಸಿದ್ದಾರೆ.

ಒಂದು ಕೊಠಡಿಯಲ್ಲಿ 15ರಿಂದ 20 ಮಂದಿಯನ್ನಷ್ಟೇ ಪರೀಕ್ಷೆಗೆ ಕೂರಿಸಬೇಕು, ಅಂತರ ಕಾಪಾಡಬೇಕು ಎಂದು ತಿಳಿಸಲಾಗಿದ್ದರೂ, ಡೆಸ್ಕ್‌ನಲ್ಲಿ ಒಬ್ಬರನ್ನಷ್ಟೇ ಇರಿಸುವ ಬಗ್ಗೆ ಪ್ರಸ್ತಾವ ಮಾಡಲಾಗಿಲ್ಲ.

ಆತಂಕ: ಕೊರೊನಾ ಭೀತಿಯಿಂದಾಗಿ ಎಸ್ಸೆಸ್ಸೆಲ್ಸಿ ಪರೀಕ್ಷೆಯೂ ಮುಂದಕ್ಕೆ ಹೋಗುತ್ತದೆಯೇ ಎಂದು ಲಕ್ಷಾಂತರ ವಿದ್ಯಾರ್ಥಿಗಳು ಮತ್ತು ಪೋಷಕರು ಆತಂಕದಿಂದಲೇ ನಿರೀಕ್ಷಿಸುತ್ತಿದ್ದರೂ, ಪರೀಕ್ಷೆ ನಡೆಸಿಯೇ ಸಿದ್ಧ ಎಂದು ಸರ್ಕಾರ ಹೇಳುತ್ತಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು