ಸೋಮವಾರ, ಡಿಸೆಂಬರ್ 9, 2019
17 °C

ರಾಜ್ಯದಲ್ಲಿ ಬಿಜೆಪಿ ಸರ್ಕಾರ; ಖುಷಿಯ ಸಂಗತಿ -ಸಂಸದ ರಮೇಶ ಜಿಗಜಿಣಗಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಜಯಪುರ: ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿರುವುದು ಖುಷಿಯ ಸಂಗತಿ ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದರು.

ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಆರು ತಿಂಗಳು ಮಾತ್ರ ಇರುತ್ತದೆ ಎಂದು ವಿರೋಧ ಪಕ್ಷದವರು ಹೇಳುತ್ತಿದ್ದಾರೆ.

ವಿರೋಧ ಪಕ್ಷದವರಿಗೆ ಮಾತನಾಡುವ ಚಟ ಇದೆ. ಹಿಂದೆ ನಮಗೂ ಮಾತನಾಡುವ ಚಟವಿತ್ತು ಎಂದು ಛೇಡಿಸಿದರು.

ಸಚಿವ ಸಂಪುಟ ಹಂಚಿಕೆ ರಾಷ್ಟ್ರ ಹಾಗೂ ರಾಜ್ಯ ನಾಯಕರಿಗೆ ಬಿಟ್ಟ ವಿಚಾರ. ನಾನು ಯಾರು ಪರವಾಗಿಯೂ ಲಾಬಿ ಮಾಡುವುದಿಲ್ಲ. ನಾನೊಬ್ಬ ಸಾಮಾನ್ಯ ಕಾರ್ಯಕರ್ತ ಅಷ್ಟೇ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು