ಗುರುವಾರ , ನವೆಂಬರ್ 21, 2019
23 °C
ಗೆಜೆಟೆಡ್ ಅಧಿಕಾರಿಗಳ ನಿಯೋಜನೆ

ಸಬ್‌ರಿಜಿಸ್ಟ್ರಾರ್ ಹುದ್ದೆಯೇ ಬೇಕು!

Published:
Updated:

ಬೆಂಗಳೂರು: ಹೆಸರಿಗೆ ಮಾತ್ರ ಗೆಜೆಟೆಡ್ ಅಧಿಕಾರಿ. ಆದರೆ ಅವರಿಗೆ ಸಬ್‌ರಿಜಿಸ್ಟ್ರಾರ್ ಹುದ್ದೆಯೇ ಅಚ್ಚುಮೆಚ್ಚು!

ನೋಂದಣಿ ಮತ್ತು ಮುದ್ರಾಂಕ ಇಲಾಖೆಯಲ್ಲಿ ಕೇಂದ್ರ ಸ್ಥಾನಿಕ ಸಹಾಯಕರಾಗಿ ನೇಮಕಗೊಂಡ ಅಧಿಕಾರಿಗಳು, ಆ ಹುದ್ದೆಯಲ್ಲಿ ಕೆಲಸಮಾಡದೆ ನಿಯೋಜನೆ ಮೇರೆಗೆ ಹೆಚ್ಚು ವರಿ ಸಬ್‌ರಿಜಿಸ್ಟ್ರಾರ್ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಕೇಂದ್ರಸ್ಥಾನ ಸಹಾ ಯಕರ ಹುದ್ದೆಯು ಗೆಜೆಟೆಡ್ ಅಧಿಕಾರಿಗೆ ಸರಿಸಮಾನವಾಗಿದ್ದರೆ, ಸಬ್‌ರಿಜಿಸ್ಟ್ರಾರ್ ಹುದ್ದೆ ಗೆಜೆಟೆಡ್‌ಗಿಂತ ಕೆಳಗಿನದ್ದು. ಆದರೂ ಈ ಅಧಿಕಾರಿಗಳಿಗೆ ಗೆಜೆಟೆಡ್ ಹುದ್ದೆಗಿಂತ ಸಬ್‌ರಿಜಿ ಸ್ಟ್ರಾರ್‌ ಹುದ್ದೆಯೇ ಬೇಕು. ಪ್ರಸ್ತುತ ಎಂಟು ಮಂದಿ ಅಧಿಕಾರಿಗಳು ಹೆಚ್ಚುವರಿ ಸಬ್‌ರಿಜಿಸ್ಟ್ರಾರ್ ಹುದ್ದೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಇವರ ನಿಯೋಜನೆ ರದ್ದುಪಡಿಸಿ ವರ್ಗಾಯಿಸಿದ್ದರೂ ಮತ್ತೆ ಅದೇ ಹುದ್ದೆಯಲ್ಲಿ ಮುಂದುವರಿಯುವ ಪ್ರಯತ್ನ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

2014ರಲ್ಲಿ ಸರ್ಕಾರದ ಮೇಲೆ ಕೆಲವರು ಒತ್ತಡ ತಂದ ಪರಿಣಾಮವಾಗಿ ಆಯ ಕಟ್ಟಿನ ಕಚೇರಿ ಗಳಲ್ಲಿ ಹೆಚ್ಚು ವರಿ ಸಬ್‌ರಿಜಿಸ್ಟ್ರಾರ್ ಹುದ್ದೆ ಸೃಷ್ಟಿಸಿದ್ದು, ಈ ಸ್ಥಾನಕ್ಕೆ ಕೇಂದ್ರಸ್ಥಾನ ಸಹಾಯಕರನ್ನು ನಿಯೋಜಿಸಲಾಯಿತು.

ಗೆಜೆಟೆಡ್ ಅಧಿಕಾರಿಗಳನ್ನು ತಮಗಿಂತ ಕೆಳಗಿನ ಹುದ್ದೆಗಳಿಗೆ ನಿಯೋಜಿಸಿರುವುದನ್ನು ಪ್ರಶ್ನಿಸಿ ಕೆಲವರು ಲೋಕಾಯುಕ್ತಕ್ಕೆ ದೂರು ಸಲ್ಲಿಸಿದರು. ವಿಚಾರಣೆ ನಡೆಸಿದ ಲೋಕಾಯುಕ್ತರು, ಅಂತಹ ಅಧಿಕಾರಿಗಳ ನಿಯೋಜನೆ ವಾಪಸ್ ಪಡೆಯುವಂತೆ ಆದೇಶಿಸಿದ್ದರೂ ಕಾರ್ಯರೂಪಕ್ಕೆ ಬಂದಿರಲಿಲ್ಲ. ಸಮ್ಮಿಶ್ರ ಸರ್ಕಾರದ ಅವಧಿಯಲ್ಲೂ ಒತ್ತಡ ತಂದು ಅದೇ ಹುದ್ದೆಗಳಲ್ಲಿ ಮುಂದುವರಿದಿದ್ದರು.

ಈಗ ಬಿಜೆಪಿ ಸರ್ಕಾರ ನಿಯೋಜನೆಯನ್ನು ರದ್ದುಪಡಿಸಿ, ಮೂಲಹುದ್ದೆಗೆ ಮರಳುವಂತೆ ಆದೇಶಿಸಿದೆ. ಆದರೆ ಈಗಿರುವ ಹುದ್ದೆಯಲ್ಲೇ
ಮುಂದುವರಿದಿದ್ದಾರೆ.

ಹೆಚ್ಚುವರಿ ಸಬ್‌ರಿಜಿಸ್ಟ್ರಾರ್‌

ಮಧುಮಾಲತಿ (ಚಾಮರಾಜಪೇಟೆ), ಮಂಗಳಬಾಯಿ ಜೆ.ಕಾಳೆ (ಮಹದೇವಪುರ), ಎಚ್.ಸಿ.ಲೋಕೇಶ್ (ಜೆ.ಪಿ.ನಗರ), ಚಿಕ್ಕಪೆದ್ದಣ್ಣ (ಯಲಹಂಕ), ಸಿ.ವಿ.ಸುಮನ (ಕೆ.ಆರ್.ಪುರ), ಪ್ರತಿಭಾ ಆರ್.ಬೀಡಿಕರ (ಹುಬ್ಬಳ್ಳಿ ಉತ್ತರ), ಡಿ.ಶ್ರೀಕಾಂತ್ (ಕಲಬುರ್ಗಿ) ಅವರನ್ನು ಕೇಂದ್ರಸ್ಥಾನ ಸಹಾಯಕರ ಹುದ್ದೆಗೆ ವರ್ಗಾಯಿಸಲಾಗಿದೆ. ಮಹಮ್ಮದ್ ಅಬ್ದುಲ್ ಹಸೀಬ್ ಅವರನ್ನು ರಾಮನಗರ ಜಿಲ್ಲಾ ನೋಂದಣಾಧಿಕಾರಿ ಕಚೇರಿಯಲ್ಲೇ ಮುಂದುವರಿಸಲಾಗಿದೆ.

ಪ್ರತಿಕ್ರಿಯಿಸಿ (+)