ಮಂಗಳವಾರ, ಜುಲೈ 14, 2020
28 °C

ಕಾಂಗ್ರೆಸ್ ‘ಬಯಲಾಟ’: ಸಚಿವ ಸುಧಾಕರ್ ವ್ಯಂಗ್ಯ

ಪ್ರಜಾವಾಣಿ ವೆಬ್‌ಡೆಸ್ಕ್‌ Updated:

ಅಕ್ಷರ ಗಾತ್ರ : | |

ಬೆಂಗಳೂರು: ಲಾಕ್‌ಡೌನ್‌ ಘೋಷಣೆಗೂ ಮೊದಲು ಬೆಂಗಳೂರು ಸೇರಿದಂತೆ ರಾಜ್ಯದ ದೊಡ್ಡ ನಗರಗಳಲ್ಲಿ ಸಿಲುಕಿದ್ದ ಕಾರ್ಮಿಕರನ್ನು ಅವರ ಸ್ವಂತ ಊರುಗಳಿಗೆ ತಲುಪಿಸುವ ವಿಚಾರದಲ್ಲಿ ಭರ್ಜರಿ ರಾಜಕೀಯ ಮೇಲಾಟ ಆರಂಭವಾಗಿದೆ.

ಮೆಜೆಸ್ಟಿಕ್‌ಗೆ ಭೇಟಿ ನೀಡಿ ಕೆಎಸ್‌ಆರ್‌ಟಿಸಿಗೆ ₹ 1 ಕೋಟಿ ಚೆಕ್ ನೀಡಲು ಕಾಂಗ್ರೆಸ್ ಯತ್ನಿಸಿತ್ತು. ನಿನ್ನೆಯಷ್ಟೇ (ಮೇ 4) ಕಾರ್ಯಕರ್ತರಿಗೆ ವಿಡಿಯೊ ಸಂದೇಶ ಕಳಿಸಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಲಸೆ ಕಾರ್ಮಿಕರನ್ನು ಸ್ವಾಗತಿಸಿ, ಸ್ವಗ್ರಾಮಗಳಿಗೆ ತಲುಪಿಸಲು ನೆರವಾಗಿ ಎಂದು ಸೂಚಿಸಿದ್ದರು.

ಕಾಂಗ್ರೆಸ್‌ ನಾಯಕರ ಹೇಳಿಕೆ ಮತ್ತು ಪ್ರಯತ್ನಕ್ಕೆ ಇಂದು (ಮೇ 5) ತಿರುಗೇಟು ನೀಡಿರುವ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್, ‘ಇದು ಕಾಂಗ್ರೆಸ್‌ನವರ ಭರ್ಜರಿ ಬಯಲಾಟ’ ಎಂದು ಟೀಕಿಸಿದ್ದಾರೆ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು