ಸುಮಲತಾ ಒಂದು ಗ್ಲಾಸ್‌ ನೀರು ಕೊಟ್ಟಿದ್ದಾರಾ: ತಮ್ಮಣ್ಣ

ಮಂಗಳವಾರ, ಮಾರ್ಚ್ 26, 2019
27 °C

ಸುಮಲತಾ ಒಂದು ಗ್ಲಾಸ್‌ ನೀರು ಕೊಟ್ಟಿದ್ದಾರಾ: ತಮ್ಮಣ್ಣ

Published:
Updated:

ಮಂಡ್ಯ: ಲೋಕಸಭಾ ಚುನಾವಣೆ ನಿಮಿತ್ತ ಕ್ಷೇತ್ರ ಪ್ರವಾಸ ಕೈಗೊಂಡಿರುವ ನಟಿ ಸುಮಲತಾ ಮೇಲೆ ಜೆಡಿಎಸ್‌ ಮುಖಂಡರು ಟೀಕೆಗಳ ಮಳೆ ಸುರಿಸುತ್ತಿದ್ದಾರೆ. ಗುರುವಾರ ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಸುಮಲತಾ ವಿರುದ್ಧ ವಾಗ್ದಾಳಿ ನಡೆಸಿದರು.

ಮದ್ದೂರಿನಲ್ಲಿ ಮಾತನಾಡಿದ ತಮ್ಮಣ್ಣ, ‘ಅಂಬರೀಷ್‌ ಶಾಸಕ, ಮಂತ್ರಿಯಾಗಿದ್ದಾಗ ಮನೆಗೆ ಬಂದ ಎಷ್ಟು ಜನರನ್ನು ಸುಮಲತಾ ಮಾತನಾಡಿಸಿದ್ದಾರೆ. ಯಾರಿಗಾದರೂ ಒಂದು ಗ್ಲಾಸ್‌ ನೀರು ಕೊಟ್ಟಿದ್ದಾರಾ. ನೀನು ಯಾವ ಊರು, ಏನು ಸಮಸ್ಯೆ ಎಂದು ಕೇಳಿದ್ದಾರಾ. ಇವತ್ತು ಅಂಬರೀಷ್‌ ಹೆಸರು ಹೇಳಿಕೊಂಡು ಬಂದು ನಾನೇನೋ ಉದ್ಧಾರ ಮಾಡುತ್ತೇನೆ ಎನ್ನುತ್ತಿದ್ದಾರೆ. ಅವರ ಬಣ್ಣದ ಮಾತುಗಳನ್ನು ಯಾರೂ ನಂಬುವುದಿಲ್ಲ’ ಎಂದು ವ್ಯಂಗ್ಯವಾಡಿದರು.

ಸುಮಲತಾ ತಿರುಗೇಟು: ತಮ್ಮಣ್ಣ ಹೇಳಿಕೆಗೆ ಮಳವಳ್ಳಿಯಲ್ಲಿ ಸುಮಲತಾ ತಿರುಗೇಟು ನೀಡಿದ್ದು, ‘ಅವರು ನಮ್ಮ ಮನೆಗೆ ಎಷ್ಟು ಬಾರಿ ಬಂದಿದ್ದಾರೆ, ಎಷ್ಟು ಸಲ ನೀರು ಕುಡಿದಿದ್ದಾರೆ, ಊಟ ಮಾಡಿದ್ದಾರೆ ಎಂಬುದನ್ನು ಅವರ ಕುಟುಂಬದವರೇ ಹೇಳಬೇಕು. ಅಂಬರೀಷ್‌ ಇದ್ದಾಗ ಹೇಗೆ ಇದ್ದರು, ಎಲ್ಲರಿಗೂ ಗೊತ್ತಿದೆ. ಅಂಬರೀಷ್‌ 24 ಗಂಟೆ ಅತಿಥಿ ಸತ್ಕಾರ ಮಾಡುತ್ತಿದ್ದರು. ಅದೇ ಹಾದಿಯಲ್ಲಿ ನಾನೂ ನಡೆಯುತ್ತಿದ್ದೇನೆ. ಸತ್ಕಾರ ಮಾಡುವುದನ್ನು ಅವರಿಂದ ಕೇಳಿ ತಿಳಿದುಕೊಳ್ಳಬೇಕಾಗಿಲ್ಲ’ ಎಂದರು.

ದರ್ಶನ್‌, ಯಶ್‌ ಮನೆ ಮಕ್ಕಳು: ‘ನಟರಾದ ದರ್ಶನ್‌, ಯಶ್‌ ನಮ್ಮ ಮನೆ ಮಕ್ಕಳು. ದರ್ಶನ್‌ ನನ್ನ ದೊಡ್ಡ ಮಗ ಇದ್ದ ಹಾಗೆ. ನನ್ನ ಜೊತೆ ಸದಾ ಇರುತ್ತಾರೆ. ಚಿತ್ರೀಕರಣದಿಂದ ಬಿಡುವು ಸಿಕ್ಕಾಗ ಪ್ರಚಾರದಲ್ಲಿ ಪಾಲ್ಗೊಳ್ಳುತ್ತಾರೆ. ನನ್ನ ಹಿಂದೆ ಯಾವುದೇ ಪಕ್ಷ ಇಲ್ಲ. ಜನ ಮಾತ್ರ ಇರುತ್ತಾರೆ’ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 8

  Happy
 • 0

  Amused
 • 1

  Sad
 • 1

  Frustrated
 • 6

  Angry

Comments:

0 comments

Write the first review for this !