ಸೋಮವಾರ, ಜೂನ್ 1, 2020
27 °C

ತಬ್ಲೀಗ್‌: 57 ಮಂದಿ ವಿರುದ್ಧ ಎಫ್‌ಐಆರ್, 1,300 ಜನರ ಮಾಹಿತಿ ಸಂಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ಬೆಂಗಳೂರು: ದೆಹಲಿಯ ತಬ್ಲೀಗ್ ಜಮಾತ್‌ ಸಭೆಗೆ ರಾಜ್ಯದಿಂದ 1,300ಕ್ಕೂ ಹೆಚ್ಚು ಜನ ತೆರಳಿದ್ದು, ಅವರೆಲ್ಲರ ಸಂಪೂರ್ಣ ಮಾಹಿತಿಯನ್ನು ಸಂಗ್ರಹಿಸಲಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ತಿಳಿಸಿದ್ದಾರೆ.

ಅಲ್ಲದೆ, 57 ವಿದೇಶಿಯರನ್ನು ಕ್ವಾರಂಟೈನ್‌ ಮಾಡಿದ್ದು, ವೀಸಾ ನಿಯಮ ಉಲ್ಲಂಘಿಸಿದ ಕಾರಣ ಕಪ್ಪು ಪಟ್ಟಿಗೆ ಸೇರಿಸಿ ಎಫ್‌ಐಆರ್‌ ದಾಖಲಿಸಲಾಗಿದೆ ಎಂದು ಅವರು ಹೇಳಿದ್ದಾರೆ. 

ವಿದೇಶಿಯರಲ್ಲಿ 20 ಮಂದಿ ಇಂಡೋನೇಷ್ಯಾ, 1 ಇಂಗ್ಲೆಂಡ್, 4 ದಕ್ಷಿಣ ಆಫ್ರಿಕಾ, 3 ಜಾಂಬಿಯಾ, 19 ಕಿರ್ಗಿಸ್ತಾನ, 1 ಅಮೆರಿಕ, 1 ಫ್ರಾನ್ಸ್‌, 1 ಕೀನ್ಯಾ ಮತ್ತು 7 ಮಂದಿ ಬಾಂಗ್ಲಾದೇಶಕ್ಕೆ ಸೇರಿದವರು. ರಾಜ್ಯದ ವಿವಿಧೆಡೆ ಇವರನ್ನು ಕ್ವಾರೆಂಟೈನ್‌ನಲ್ಲಿ ಇಡಲಾಗಿದೆ ಎಂದು ತಿಳಿಸಿದ್ದಾರೆ.

ಕೋವಿಡ್‌–19 ಹಾಟ್‌ಸ್ಪಾಟ್‌ ಎಂದು ಗುರುತಿಸಲಾದ ಪ್ರದೇಶಗಳ ಬಳಿ ಇದ್ದ 276 ತಬ್ಲೀಗ್‌ ಜಮಾತ್‌ ಕಾರ್ಯಕರ್ತರನ್ನು ಬೆಂಗಳೂರಿನಲ್ಲಿ ಕ್ವಾರಂಟೈನ್‌ ಮಾಡಲಾಗಿದೆ. ಇದೇ ಹಿನ್ನೆಲೆ ಹೊಂದಿರುವ 482 ತಬ್ಲೀಗ್‌ ಜಮಾತ್‌ ಕಾರ್ಯಕರ್ತರನ್ನು ವಿವಿಧ ಜಿಲ್ಲೆಗಳಲ್ಲಿ ಗುರುತಿಸಲಾಗಿದೆ. ಹೀಗಾಗಿ ರಾಜ್ಯದಲ್ಲಿ 808 ತಬ್ಲೀಗ್ ಜಮಾತ್‌ ಕಾರ್ಯಕರ್ತರನ್ನು ಕ್ವಾರಂಟೈನ್‌ ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು