ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಕೆಟ್‌: ಇಂಗ್ಲೆಂಡ್‌ಗೆ ಆಘಾತ ನೀಡಿದ ಸ್ಕಾಟ್ಲೆಂಡ್‌

Last Updated 11 ಜೂನ್ 2018, 19:30 IST
ಅಕ್ಷರ ಗಾತ್ರ

ಎಡಿನ್‌ಬರ್ಗ್‌ (ಎಎಫ್‌ಪಿ): ಸ್ಕಾಟ್ಲೆಂಡ್‌ ತಂಡ ಭಾನುವಾರ ಗ್ರ್ಯಾಂಗ್‌ ಕ್ರಿಕೆಟ್‌ ಕ್ಲಬ್‌ನ ಮೈದಾನದಲ್ಲಿ ಹೊಸ ಭಾಷ್ಯ ಬರೆಯಿತು.

ಕೈಲ್‌ ಕೊಯೆಟ್‌ಜರ್‌ ಸಾರಥ್ಯದ ತಂಡ ಏಕೈಕ ಏಕದಿನ ಪಂದ್ಯದಲ್ಲಿ, ವಿಶ್ವ ಕ್ರಮಾಂಕ ಪಟ್ಟಿಯಲ್ಲಿ ಅಗ್ರಸ್ಥಾನ ದಲ್ಲಿರುವ ಇಂಗ್ಲೆಂಡ್‌ಗೆ ಆಘಾತ ನೀಡಿತು.

ಮೊದಲು ಬ್ಯಾಟ್‌ ಮಾಡಿದ ಸ್ಕಾಟ್ಲೆಂಡ್‌ 50 ಓವರ್‌ಗಳಲ್ಲಿ 5 ವಿಕೆಟ್‌ಗೆ 371 ರನ್‌ ದಾಖಲಿಸಿತು. ಈ ತಂಡದ ಕಾಲಮ್‌ ಮೆಕ್‌ಲಿಯೊಡ್‌ (ಔಟಾಗದೆ 140; 94ಎ, 16ಬೌಂ, 3ಸಿ) ಅಜೇಯ ಶತಕ ಸಿಡಿಸಿ ಮಿಂಚಿದರು.

ಗುರಿ ಬೆನ್ನಟ್ಟಿದ ಇಂಗ್ಲೆಂಡ್‌ 48.5 ಓವರ್‌ಗಳಲ್ಲಿ 365ರನ್‌ಗಳಿಗೆ ಆಲೌಟ್‌ ಆಯಿತು.

ಜೇಸನ್‌ ರಾಯ್‌ (34; 32ಎ, 3ಬೌಂ) ಮತ್ತು ಜಾನಿ ಬೇಸ್ಟೋ (105; 59ಎ, 12ಬೌಂ, 6ಸಿ) ಏಯೊನ್‌ ಮಾರ್ಗನ್‌ ಪಡೆಗೆ ಉತ್ತಮ ಆರಂಭ ನೀಡಿದರು. ಇವರು ಮೊದಲ ವಿಕೆಟ್‌ಗೆ 129ರನ್‌ ದಾಖಲಿಸಿದರು.

ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ ಗಳು ಬೇಗನೆ ಔಟಾಗಿದ್ದರಿಂದ ಮಾರ್ಗನ್‌ ಬಳಗದ ಗೆಲುವಿನ ಕನಸು ಕಮರಿತು.

ಸಂಕ್ಷಿಪ್ತ ಸ್ಕೋರ್‌: ಸ್ಕಾಟ್ಲೆಂಡ್‌, 50 ಓವರ್‌ಗಳಲ್ಲಿ 5 ವಿಕೆಟ್‌ಗೆ 371 (ಮ್ಯಾಥ್ಯೂ ಕ್ರಾಸ್‌ 48, ಕೈಲ್‌ ಕೊಯೆಟ್‌ಜರ್‌ 58, ಕಾಲಮ್‌ ಮೆಕ್‌ಲಿಯೊಡ್‌ ಔಟಾಗದೆ 140, ರಿಚಿ ಬೆರಿಂಗ್ಟನ್‌ 39, ಜಾರ್ಜ್‌ ಮುನ್ಶಿ 55; ಆದಿಲ್‌ ರಶೀದ್‌ 72ಕ್ಕೆ2, ಲಿಯಾಮ್‌ ಫ್ಲಂಕೆಟ್‌ 85ಕ್ಕೆ2, ಮಾರ್ಕ್‌ ವುಡ್‌ 71ಕ್ಕೆ1).

ಇಂಗ್ಲೆಂಡ್‌: 48.5 ಓವರ್‌ಗಳಲ್ಲಿ 365 (ಜೇಸನ್‌ ರಾಯ್‌ 34, ಜಾನಿ ಬೇಸ್ಟೋ 105, ಅಲೆಕ್ಸ್‌ ಹೇಲ್ಸ್‌ 52, ಜೋ ರೂಟ್‌ 29, ಮೊಯೀನ್‌ ಅಲಿ 46, ಲಿಯಾಮ್‌ ಫ್ಲಂಕೆಟ್‌ ಔಟಾಗದೆ 47; ಮಾರ್ಕ್‌ ವ್ಯಾಟ್‌ 55ಕ್ಕೆ3, ಅಲಸ್ದೇರ್‌ ಇವಾನ್ಸ್‌ 50ಕ್ಕೆ2, ರಿಚಿ ಬೆರಿಂಗ್ಟನ್‌ 67ಕ್ಕೆ2).

ಫಲಿತಾಂಶ: ಸ್ಕಾಟ್ಲೆಂಡ್‌ಗೆ ಆರು ರನ್‌ ಗೆಲುವು.

ಪಂದ್ಯ ಶ್ರೇಷ್ಠ: ಕಾಲಮ್‌ ಮೆಕ್‌ಲಿಯೊಡ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT