ಶನಿವಾರ, ಜುಲೈ 31, 2021
28 °C

ಪ್ರಾಣಕ್ಕೆ ಎರವಾದ ಮರಳು ಗುಂಡಿಗಳು, ನದಿಯಲ್ಲಿ ಮುಳುಗಿ ಮೂವರು ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ಹೂವಿನಹಡಗಲಿ: ತಾಲ್ಲೂಕಿನ ಸೋವೇನಹಳ್ಳಿ ಗ್ರಾಮ ಬಳಿಯ ತುಂಗಭದ್ರಾ ನದಿಯಲ್ಲಿ ಈಜಲು ಹೋಗಿದ್ದ ಮೂವರು ಯುವಕರು ಶುಕ್ರವಾರ ಮೃತಪಟ್ಟಿದ್ದಾರೆ.

ಸೋವೇನಹಳ್ಳಿಯ ಮಲ್ಲನಕೇರಿ ಸುರೇಶ (25), ಕೋಗಳಿ ಮಾರುತಿ (23), ಹಂಪಸಾಗರದ ಪಿ.ಫಕ್ರುದ್ದೀನ್ (25) ಮೃತರು. 
ಐದು ಜನ ಸ್ನೇಹಿತರು ಏಕಕಾಲಕ್ಕೆ ನದಿಗೆ ಇಳಿದಿದ್ದು, ಈ ಪೈಕಿ ಮಂಜುನಾಥ ಈಜಿ ದಡ ಸೇರುವ ಜತೆಗೆ ಅಪಾಯಕ್ಕೆ ಸಿಲುಕಿದ್ದ ಗುಂಡಪ್ಪನನ್ನು ರಕ್ಷಿಸಿದ್ದಾರೆ. ಪ್ರತಿದಿನವೂ ಯುವಕರು ಗುಂಪಾಗಿ ನದಿ ಸ್ನಾನಕ್ಕೆ ಹೋಗುತ್ತಿದ್ದರು. ಇಂದು ಆಳವಾದ ಗುಂಡಿಗಳಿರುವ ಸ್ಥಳಕ್ಕೆ ತೆರಳಿ ಯುವಕರು ದುರಂತ ಸಾವಿಗೀಡಾಗಿದ್ದಾರೆ. 

‘ನದಿ ಪಾತ್ರದಲ್ಲಿ ಮರಳು ಗಣಿಗಾರಿಕೆಗಾಗಿ ನಿಯಮಮೀರಿ ಆಳವಾದ ಗುಂಡಿಗಳನ್ನು ತೋಡಲಾಗಿದ್ದು, ಅವು ಸಾವಿನ ಗುಂಡಿಗಳಾಗಿ ಮಾರ್ಪಟ್ಟು ಯುವಕರನ್ನು ಬಲಿ ಪಡೆದಿವೆ’ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು. 
ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಮೀನುಗಾರರು ನದಿಯಲ್ಲಿ ಶವ ಹುಡುಕಾಟ ನಡೆಸಿದರು. ಸಂಜೆಯಾದರೂ ಶವಗಳು ಪತ್ತೆಯಾಗಿರಲಿಲ್ಲ. 

ಸ್ಥಳಕ್ಕೆ ತಹಶೀಲ್ದಾರ್ ಕೆ.ವಿಜಯಕುಮಾರ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಯು.ಎಚ್. ಸೋಮಶೇಖರ, ಪಿಎಸ್ಐ ಎಸ್.ಪಿ.ನಾಯ್ಕ ಭೇಟಿ ನೀಡಿ ಪರಿಶೀಲಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು