ರೇವಣ್ಣ ಆಪ್ತ ತಿಪ್ಪೇಸ್ವಾಮಿ ಮೇಲ್ಮನೆಗೆ?

7

ರೇವಣ್ಣ ಆಪ್ತ ತಿಪ್ಪೇಸ್ವಾಮಿ ಮೇಲ್ಮನೆಗೆ?

Published:
Updated:

ಬೆಂಗಳೂರು: ಲೋಕೋಪಯೋಗಿ ಸಚಿವ ಎಚ್‌.ಡಿ.ರೇವಣ್ಣ ಅವರ ಆಪ್ತ ಹಾಗೂ ವಿಶೇಷ ಕರ್ತವ್ಯಾಧಿಕಾರಿ ತಿಪ್ಪೇಸ್ವಾಮಿ ಅವರನ್ನು ವಿಧಾನಪರಿಷತ್‌ಗೆ ನಾಮಕರಣ ಮಾಡುವ ಬಗ್ಗೆ ಜೆಡಿಎಸ್‌ನಲ್ಲಿ ಚಿಂತನೆ ನಡೆದಿದೆ.

‘ಸಚಿವ ರೇವಣ್ಣ ಅವರ ಇಲಾಖೆಗೆ ಸಂಬಂಧಿಸಿದ ಎಲ್ಲ ಕೆಲಸಗಳನ್ನೂ ನಿಭಾಯಿಸುವ ತಿಪ್ಪೇಸ್ವಾಮಿ, ಒಂದು ರೀತಿಯಲ್ಲಿ ಬಲಗೈ ಬಂಟನಂತಿದ್ದಾರೆ. ಬಹಳ ಕಾಲದಿಂದ ಜತೆಯಲ್ಲೇ ಇರುವ ಇವರಿಗೆ ಸೂಕ್ತ ಸ್ಥಾನಮಾನ ನೀಡಬೇಕು ಎಂಬುದು ರೇವಣ್ಣ ಅವರ ಉದ್ದೇಶ. ಇದನ್ನು ದೇವೇಗೌಡರಾಗಲಿ, ಕುಮಾರಸ್ವಾಮಿ ಆಗಲಿ ತಳ್ಳಿ ಹಾಕಲು ಸಾಧ್ಯವಿಲ್ಲ’ ಎಂದು ಪಕ್ಷದ ಮೂಲಗಳು ತಿಳಿಸಿವೆ.

ರೇವಣ್ಣ ಅವರ ಒತ್ತಡಕ್ಕೆ ವರಿಷ್ಠರು ಮಣಿದರೆ, ಪರಿಷತ್‌ಗೆ ಆಯ್ಕೆ ಆಗುವ ನಿರೀಕ್ಷೆಯಲ್ಲಿರುವ ಕೆ.ಸಿ.ಕೋನರಡ್ಡಿ ಮತ್ತು ರಮೇಶ್‌ ಬಾಬು ಅವರು ಅವಕಾಶದಿಂದ ವಂಚಿತರಾಗಲಿದ್ದಾರೆ.

ಬರಹ ಇಷ್ಟವಾಯಿತೆ?

 • 2

  Happy
 • 1

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !