ಶುಕ್ರವಾರ, ಫೆಬ್ರವರಿ 28, 2020
19 °C

ಗಾಂಧೀಜಿ ನಿಮಗೆ ಟ್ರೇಲರ್ ಇರಬಹುದು, ಆದರೆ ನಮಗೆ ಪ್ರಾಣ: ಕಾಂಗ್ರೆಸ್‌ಗೆ ಮೋದಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Modi in Parliament

ನವದೆಹಲಿ: ಮಹಾತ್ಮ ಗಾಂಧಿ ವಿರುದ್ಧ ಸಂಸದ ಅನಂತಕುಮಾರ ಹೆಗಡೆ ಅವರು ನೀಡಿದ್ದಾರೆನ್ನಲಾದ ಹೇಳಿಕೆಯ ಬಗ್ಗೆ ವಿರೋಧ ಪಕ್ಷಗಳು ಸಂಸತ್ತಿನಲ್ಲಿ ಘೋಷಣೆ ಕೂಗುತ್ತಿರುವಂತೆಯೇ, ಕಾಂಗ್ರೆಸ್ ಮುಖಂಡ ಅಧೀರ್ ರಂಜನ್ ಚೌಧುರಿ ಹೇಳಿಕೆಯನ್ನು ಗುರುವಾರ ಲೋಕಸಭೆಯಲ್ಲಿ ತರಾಟೆಗೆ ತೆಗೆದುಕೊಂಡ ಪ್ರಧಾನಿ ನರೇಂದ್ರ ಮೋದಿ, "ರಾಷ್ಟ್ರಪಿತ ನಮ್ಮ ಪ್ರಾಣ" ಎಂದರು.

ರಾಷ್ಟ್ರಪತಿ ಭಾಷಣಕ್ಕೆ ವಂದನಾ ನಿರ್ಣಯದ ವೇಳೆ ಪ್ರಧಾನಿ ಮಾತಿಗೆ ನಿಂತಾಗ ವಿರೋಧ ಪಕ್ಷಗಳು 'ಮಹಾತ್ಮ ಗಾಂಧಿ ಅಮರರಾಗಲಿ' ಎಂದು ಘೋಷಣೆ ಕೂಗತೊಡಗಿದವು. "ಇಷ್ಟೆಯೋ ಅಥವಾ ಇನ್ನೂ ಇದೆಯೇ?" ಎಂದು ಮೋದಿ ಕೇಳಿದಾಗ, ಚೌಧುರಿ ಎದ್ದು ನಿಂತು, "ಇದು ಇನ್ನೂ ಟ್ರೇಲರ್ ಅಷ್ಟೇ" ಎಂದರು.

ಆಗ ಉತ್ತರಿಸಿದ ಪ್ರಧಾನಿ ನರೇಂದ್ರ ಮೋದಿ, "ನಿಮಗೆ ಮಹಾತ್ಮ ಗಾಂಧಿ ಟ್ರೇಲರ್ ಆಗಿರಬಹುದು. ಆದರೆ ನಮಗೆ ಗಾಂಧೀಜಿಯೇ ಪ್ರಾಣ" ಎಂದುತ್ತರಿಸಿದರು.

ಸಂಸದ ಅನಂತಕುಮಾರ ಹೆಗಡೆ ಅವರು ಗಾಂಧೀಜಿ ನೇತೃತ್ವದಲ್ಲಿ ನಡೆದ ಸ್ವಾತಂತ್ರ್ಯ ಹೋರಾಟದ ವಿಧಾನವನ್ನು ಟೀಕಿಸಿದ್ದರು. ಈ ಬಗ್ಗೆ ವಿರೋಧ ಪಕ್ಷಗಳು ತೀವ್ರವಾಗಿ ಟೀಕೆ ಮಾಡಿದ್ದವು. ಆದರೆ, ತಾನು ಗಾಂಧೀಜಿ ವಿರುದ್ಧ ಏನನ್ನೂ ಮಾತನಾಡಿಲ್ಲ ಎಂದೂ ಹೆಗಡೆ ಬಳಿಕ ಸಮರ್ಥಿಸಿಕೊಂಡಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು